More

    ಆಟ ಮುಗಿಸಿದ ಪರಮಾತ್ಮ: ಅಮರ ರಾಜಕುಮಾರ

    ತೊಟ್ಟಿಲಲ್ಲಿ ಆಡುವ ವಯಸ್ಸಿನಲ್ಲೇ ಬೆಳ್ಳಿತೆರೆಯಲ್ಲಿ ಮೂಡಿ ಮೋಡಿ ಮಾಡಿದ್ದ ಕೋಟ್ಯಂತರ ಕನ್ನಡಿಗರ ಪಾಲಿನ ಪ್ರೀತಿಯ ‘ಅಪು್ಪ’ ಇನ್ನಿಲ್ಲ. ಕನ್ನಡ ಚಿತ್ರರಂಗದ ದೊಡ್ಮನೆಯ ಹುಡುಗ, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್(46) ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರ ಈ ಹಠಾತ್ ನಿಧನ ಇಡೀ ರಾಜ್ಯಕ್ಕೆ ಆಘಾತ ತಂದಿದ್ದು, ಚಿತ್ರರಂಗದ ಸಹಿತ ಅನೇಕ ಗಣ್ಯರು, ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಪುನೀತ್ ಅವರು ಪತ್ನಿ, ಇಬ್ಬರು ಪುತ್ರಿಯರ ಜತೆಗೆ ಸೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಸಹೋದರಿಯರಾದ ಲಕ್ಷ್ಮಿ, ಪೂರ್ಣಿಮಾ ಅವರನ್ನು ಅಗಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

    ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಗುರುತಿಸುತ್ತಿದ್ದುದು ಅಜಾತಶತ್ರು ಎಂದು. ಏಕೆಂದರೆ, ಅವರಿಗೆ ಶತ್ರುಗಳೇ ಇರಲಿಲ್ಲ ಮತ್ತು ಅದ್ಯಾಕೆಂದು ಬಿಡಿಸಿ ಹೇಳಬೇಕಿಲ್ಲ. ಪುನೀತ್ ಹುಟ್ಟಿದ್ದು 1975ರಲ್ಲಿ. ಚಿತ್ರರಂಗಕ್ಕೆ ಬಂದಿದ್ದು ಅದೇ ವರ್ಷ. ಮೊದಲ ಒಂದಿಷ್ಟು ವರ್ಷಗಳ ಬಾಲನಟರಾಗಿದ್ದು ಬಿಟ್ಟರೆ, ಮಿಕ್ಕಂತೆ ಕಳೆದ 19 ವರ್ಷಗಳಿಂದ ನಾಯಕನಟನಾಗಿ ಸಕ್ರಿಯರಾಗಿದ್ದವರು, 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು ಅವರು. ಇಷ್ಟು ವರ್ಷಗಳಲ್ಲಿ, ಇಷ್ಟು ಚಿತ್ರಗಳಲ್ಲಿ ಅವರ ಮೇಲೆ ಒಂದೇ ಒಂದು ಕಪು್ಪಚುಕ್ಕೆ ಕಾಣುವುದಿಲ್ಲ ಅಥವಾ ಅವರ ಬಗ್ಗೆ ಯಾರಾದರೂ ಕೆಟ್ಟದೊಂದು ಮಾತು ಆಡುವುದಿಲ್ಲ.

    ಅದಕ್ಕೆ ಕಾರಣ, ಪುನೀತ್ ಅವರ ನಡವಳಿಕೆ. ಕನ್ನಡ ಚಿತ್ರರಂಗ ಕಂಡ ಸರಳ, ಸಜ್ಜನರಲ್ಲಿ ಪುನೀತ್ ಸಹ ಒಬ್ಬರು. ಅವರು ದೊಡ್ಡ ನಟರಾದರೂ, ಸ್ಟಾರ್ ತರಹ ಎಂದೂ ಮೆರೆದವರಲ್ಲ. ದೊಡ್ಡ ನಿರ್ವಪಕರಾಗಲೀ ಅಥವಾ ಸೆಟ್​ಬಾಯ್ಗಳಾಗಲೀ, ಪುನೀತ್ ಎಲ್ಲರನ್ನೂ ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಮತ್ತು ಸದಾ ಹಸನ್ಮುಖಿಯಾಗಿರುತ್ತಿದ್ದರು. ಯಾರು ಎಷ್ಟೇ ಹೊಗಳಿದರೂ, ಸಂಕೋಚದಿಂದಲೇ ಸ್ವೀಕರಿಸಿ ಸುಮ್ಮನಾಗುತ್ತಿದ್ದರು. ಅದೇ ಕಾರಣಕ್ಕೆ ಚಿತ್ರರಂಗದ ಯಾರೊಬ್ಬರೂ ಅವರ ವಿರುದ್ಧ ಬೆಟ್ಟು ಮಾಡಿ ತೋರಿಸುತ್ತಿರಲಿಲ್ಲ.

    ಎಲ್ಲಕ್ಕಿಂತ ಹೆಚ್ಚಾಗಿ ವಿವಾದಗಳಿಂದ ದೂರವೇ ಉಳಿದಿದ್ದ ಅವರು, ಯಾವುದೇ ವಿಷಯವಾಗಲೀ, ಯಾರದೇ ಬಗ್ಗೆಯಾಗಲೀ ಕೆಟ್ಟದಾಗಿ ಮಾತನಾಡಲಿಲ್ಲ. ಚಿತ್ರರಂಗದಲ್ಲಿ ಬೇರೆಬೇರೆ ಗುಂಪುಗಳಿರುವುದ ಸಹಜ. ಆದರೆ, ಯಾವೊಂದು ಗುಂಪಿನಲ್ಲೂ ಗುರುತಿಸಿಕೊಳ್ಳದ ಅವರು, ಸ್ವತಂತ್ರರಾಗಿದ್ದರು ಮತ್ತು ಎಲ್ಲರ ಜತೆಗೆ ಒಡನಾಟ ಇಟ್ಟುಕೊಂಡಿದ್ದರು. ಹಾಗಾಗಿ, ಯಾವುದೇ ಸಮಾರಂಭವಿದ್ದರೂ ಅವರಿಗೆ ಮುಕ್ತ ಆಹ್ವಾನವಿರುತ್ತಿತ್ತು ಮತ್ತು ಪುನೀತ್ ಯಾವಾಗ ಕರೆದರೂ, ಬೇರೆಯವರು ತಪ್ಪದೆ ಹಾಜರಿರುತ್ತಿದ್ದರು.

    ಪುನೀತ್ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕೆ, ಇಷ್ಟು ದೊಡ್ಡ ಸ್ಟಾರ್ ಆಗುವುದಕ್ಕೆ ಇಷ್ಟೇ ಕಾರಣಗಳಲ್ಲ. ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಕಥೆಗಳು ಮತ್ತು ಸಾಮಾಜಿಕ ಕಳಕಳಿ ಸಹ ಅವರನ್ನು ರೂಪಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿವೆ. ಆರಂಭದ ವರ್ಷಗಳಲ್ಲಿ ‘ಅಪು್ಪ’, ‘ಆಕಾಶ್’, ‘ಮೌರ್ಯ’, ‘ಅಜಯ್’ ಮುಂತಾದ ಆಕ್ಷನ್, ಲವ್​ಸ್ಟೋರಿಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಪುನೀತ್, ಇತ್ತೀಚಿನ ವರ್ಷಗಳಲ್ಲಿ ಕ್ರಮೇಣ ಪಥ ಬದಲಿಸಿದ್ದರು. ಆಕ್ಷನ್, ಲವ್ ಜತೆಗೆ ಸಾಮಾಜಿಕ ಕಳಕಳಿಯನ್ನು ತಮ್ಮ ಚಿತ್ರಗಳ ಮೂಲಕ ಬಿಂಬಿಸುವ ಕೆಲಸವನ್ನು ಮಾಡಿದರು.

    ‘ಯುವರತ್ನ’ ಚಿತ್ರದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯ ಜತೆಗೆ, ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ ನಡೆಸಿದ್ದರು ಪುನೀತ್. ಅದಕ್ಕೂ ಮುನ್ನ ‘ರಾಜ್​ಕುಮಾರ’ ಚಿತ್ರದಲ್ಲಿ ಹಿರಿಯರನ್ನು ಗೌರವಿಸುವ ಬಗ್ಗೆ, ‘ನಟಸಾರ್ವಭೌಮ’ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ ಕುರಿತು, ‘ಪೃಥ್ವಿ’ ಚಿತ್ರದಲ್ಲಿ ಅಕ್ರಮ ಗಣಿಗಾರಿಕೆ … ಹೀಗೆ ಅವರ ಹಲವು ಚಿತ್ರಗಳಲ್ಲಿದ್ದ ಸಾಮಾಜಿಕ ಕಳಕಳಿ ಮತ್ತು ಹೋರಾಟದಿಂದಲೇ ಪುನೀತ್ ಅವರನ್ನು ಇಷ್ಟಪಡುವ ದೊಡ್ಡ ಸಮೂಹ ಕರ್ನಾಟಕದಲ್ಲಿದೆ.

    ಅದೇ ಕಾರಣಕ್ಕೆ, ಪುನೀತ್ ಚಿತ್ರಗಳೆಂದರೆ ರಾಜ್ಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಅದರಲ್ಲೂ ಮಕ್ಕಳಿಗೆ ಪುನೀತ್ ಚಿತ್ರಗಳೆಂದರೆ ವಿಶೇಷ ಪ್ರೀತಿ. ಅದಕ್ಕೆ ಕಾರಣ, ಪುನೀತ್ ಅವರ ಡ್ಯಾನ್ಸ್. ಕನ್ನಡ ಚಿತ್ರರಂಗದ ಕೆಲವೇ ಕೆಲವು ಒಳ್ಳೆಯ ಡ್ಯಾನ್ಸರ್​ಗಳ ಪೈಕಿ ಪುನೀತ್ ಪ್ರಮುಖರು. ಅವರ ವಿಭಿನ್ನ ಸ್ಟೆಪ್​ಗಳು, 40 ಪ್ಲಸ್ ವಯಸ್ಸಿನಲ್ಲೂ ಅವರು ಕುಣಿಯುತ್ತಿದ್ದ ರೀತಿ ಇದೆಲ್ಲವೂ ಮಕ್ಕಳಿಗೆ ವಿಶೇಷ ಮೋಡಿ ಮಾಡಿವೆ.

    ಇನ್ನು, ಅವರು ಹಾಡಿದರು, ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಿಸಿದರು, ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡರು, ಹಲವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡಿದರು, ಹೊಸಬರಿಗೆ ಸಹಕಾರ-ಪ್ರೋತ್ಸಾಹಗಳನ್ನು ಕೊಟ್ಟು ಮಾರ್ಗದರ್ಶನ ಮಾಡಿದರು, ನಟನೆ ಜತೆಗೆ ನಿರ್ವಣದಲ್ಲೂ ತೊಡಗಿಸಿಕೊಂಡರು … ಹೀಗೆ, ಸದಾ ಒಂದಿಲ್ಲೊಂದು ಒಳ್ಳೆಯ ಕೆಲಸದಿಂದ ಅಕ್ಷರಶಃ ಕನ್ನಡಿಗರ ಮನೆಮಾತಾಗಿದ್ದ ಪುನೀತ್ ಇನ್ನು ನೆನಪುಗಳಲ್ಲಿ ಜೀವಂತ.

    ಅವನು ಯಾವಾಗಲೂ ನನಗೆ ಸೀನಿಯರ್…

    ಹಾಗಂತ ಯಾವತ್ತೂ ಹೇಳುತ್ತಿದ್ದರು ಶಿವರಾಜಕುಮಾರ್. ಅವರು ಸಹ ಬಾಲನಟನಾಗಿ ಕಾಣಿಸಿಕೊಂಡಿದ್ದರು. ಆದರೆ, ಶಿವರಾಜಕುಮಾರ್​ಗಿಂತಲೂ ಇನ್ನೂ ಚಿಕ್ಕವಯಸ್ಸಿನಲ್ಲೇ ಪುನೀತ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ. ಪುನೀತ್ ಹುಟ್ಟಿದ್ದು 75ರಲ್ಲಿ. ಹಸುಗೂಸಿದ್ದಾಗಲೇ ಡಾ. ರಾಜಕುಮಾರ್ ಅಭಿನಯದ ‘ಪ್ರೇಮದ ಕಾಣಿಕೆ’ಯಲ್ಲಿ ಪುನೀತ್ ಕಾಣಿಸಿಕೊಂಡಿದ್ದರು. ಆ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಈ ಪೈಕಿ ‘ಭೂಮಿಗೆ ಬಂದ ಭಗವಂತ’ ಮತ್ತು ‘ಬೆಟ್ಟದ ಹೂವು’ ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲಾ ಚಿತ್ರಗಳಲ್ಲೂ ಡಾ. ರಾಜಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಡಾ. ರಾಜ್ ಮಗನಾಗಿ, ಸ್ನೇಹಿತನಾಗಿ ಪುನೀತ್ ಅಭಿನಯಿಸಿದ್ದರು. ‘ಸನಾದಿ ಅಪ್ಪಣ್ಣ’, ‘ವಸಂತ ಗೀತ’, ‘ಹೊಸ ಬೆಳಕು’, ‘ಚಲಿಸುವ ಮೋಡಗಳು’, ‘ಭಕ್ತ ಪ್ರಹ್ಲಾದ’, ‘ಎರಡು ನಕ್ಷತ್ರಗಳು’, ‘ಯಾರಿವನು’, ‘ಶಿವ ಮೆಚ್ಚಿದ ಕಣ್ಣಪ್ಪ’ … ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ ಪುನೀತ್, ಕೊನೆಯದಾಗಿ ಬಾಲನಟನಾಗಿ ಕಾಣಿಸಿಕೊಂಡಿದ್ದು ‘ಪರಶುರಾಮ್ ಚಿತ್ರದಲ್ಲಿ. ಆ ಚಿತ್ರದಲ್ಲಿ ‘ಕದ್ರೆ ತಪು್ಪ, ಕೊಂದ್ರೆ ತಪು್ಪ …’ ಎಂಬ ಹಾಡನ್ನೂ ಹಾಡಿದ್ದ ಪುನೀತ್, ಡಾ. ರಾಜ್ ಬಲಗೈಬಂಟನಾಗಿ ನಟಿಸಿದ್ದರು. ಅಷ್ಟರಲ್ಲಿ ಯೌವ್ವನಕ್ಕೆ ಕಾಲಿಟ್ಟಿದ್ದ ಪುನೀತ್, ಆ ನಂತರ ಬಾಲನಟನಾಗಿ ಮುಂದುವರೆಯಲಿಲ್ಲ.

    ಕೊನೆಯ ಚಿತ್ರ ‘ಜೇಮ್ಸ್‌’

    ಬಿಡುಗಡೆಯಾದ ಪುನೀತ್ ಅವರ ಕೊನೆಯ ಚಿತ್ರ ಎಂದರೆ ಅದು ‘ಯುವರತ್ನ’. ‘ಜೇಮ್್ಸ’ ಮತ್ತು ‘ಲಕ್ಕಿ ಮ್ಯಾನ್’ ಚಿತ್ರಗಳಲ್ಲಿ ಪುನೀತ್ ನಟಿಸಿದ್ದರು. ಈ ಪೈಕಿ ‘ಜೇಮ್್ಸ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಮಾತ್ರ ಬಾಕಿ ಇತ್ತು. ಇನ್ನು, ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪುನೀತ್ ಅವರದ್ದು ಅತಿಥಿ ಪಾತ್ರ. ಈ ಎರಡೂ ಚಿತ್ರಗಳು ಬಿಡುಗಡೆಯಾಗಬೇಕಿದ್ದು, ಮಿಕ್ಕಂತೆ ಪವನ್ ನಿರ್ದೇಶನದ ‘ದ್ವಿತ್ವ’, ತೂಗುದೀಪ ದಿನಕರ್ ಮತ್ತು ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರಗಳನ್ನು ಪುನೀತ್ ಒಪ್ಪಿಕೊಂಡಿದ್ದರು. ಈ ಪೈಕಿ, ‘ದ್ವಿತ್ವ’ ಚಿತ್ರವು ಅಕ್ಟೋಬರ್​ನಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿತ್ತು. ಹಾಗಾಗಿ, ‘ಜೇಮ್್ಸ’ ಮತ್ತು ‘ಲಕ್ಕಿ ಮ್ಯಾನ್’ ಚಿತ್ರಗಳೇ ಪುನೀತ್ ಅವರ ಕೊನೆಯ ಚಿತ್ರಗಳಾಗಲಿವೆ.

    ಮದುವೆಯಾದ ನಂತರ ಹೀರೋ

    ಡಾ. ರಾಜಕುಮಾರ್ ಅವರು ಎಂದೂ ತಮ್ಮ ಮಕ್ಕಳು ಚಿತ್ರರಂಗಕ್ಕೆ ಬರಬೇಕು, ನಟರಾಗಿ ಮುಂದುವರೆಯಬೇಕು ಎಂದಾಗ ಇಲ್ಲ ಎನ್ನಲಿಲ್ಲವಂತೆ. ಅವರು ಹಾಕಿದ್ದ ಒಂದೇ ಷರತ್ತು ಎಂದರೆ, ಮದುವೆಯಾದ ನಂತರವಷ್ಟೇ ಚಿತ್ರರಂಗಕ್ಕೆ ಬರಬೇಕು ಎಂದು. ಈ ವಿಷಯವನ್ನು ಹಿರಿಯ ನಿರ್ದೇಶಕ ಭಗವಾನ್ ಸಹ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಮದುವೆಯಾದ ನಂತರವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದೇ ತರಹ ಪುನೀತ್ ಸಹ ಮದುವೆಯಾಗಿಯೇ ಆ ಬಳಿಕ ಹೀರೋ ಆದರು. ಪುನೀತ್ ಮತ್ತು ಅಶ್ವಿನಿ ದಂಪತಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರು ಇದ್ದಾರೆ.

    ರಜನಿ ಅಂದ್ರೆ ಮೈ ಜುಂ ಅನ್ನುತ್ತೆ!

    ಪುನೀತ್​ಗೆ ಅಮಿತಾಬ್ ಬಚ್ಚನ್ ಅಂದ್ರೆ ತುಂಬ ತುಂಬಾನೇ ಇಷ್ಟವಂತೆ. ಇನ್ನು ರಜನಿಕಾಂತ್ ಬಗ್ಗೆ ಹೇಳುವಂತೆಯೇ ಇಲ್ಲ. ‘ಅವರನ್ನು ಕಂಡ್ರೇ ಮೈ ಜುಂ ಅನ್ನುತ್ತೆ…’ ಎಂದು ಪುನೀತ್ ಅಚ್ಚರಿಗೊಳ್ಳುತ್ತಿದ್ದರು! ‘ಅಪು್ಪ’ ಸಿನಿಮಾ ನೋಡಿದ ರಜನಿ, ಚಿತ್ರದಲ್ಲಿನ ಪುನೀತ್ ಸ್ಟೈಲ್ ಮತ್ತು ಡೈಲಾಗ್ ಕೇಳಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರಂತೆ. ಬಾಲಿವುಡ್ ನಟಿ ಟಬು ಕಂಡ್ರೆ ಇಷ್ಟ ಎಂದಿದ್ದ ಅಪು್ಪಗೆ ಸ್ನೇಹಿತರೊಬ್ಬರು ಟಬು ಜತೆಗೆ ಫೋನ್​ನಲ್ಲಿ ಮಾತನಾಡಿಸಿದ್ದನ್ನು ಮರೆಯದೇ ಹೇಳಿಕೊಳ್ಳುತ್ತಿದ್ದರು.

    ಅಪ್ಪನಂತೆಯೇ ಭೋಜನಪ್ರಿಯ!

    ಪುನೀತ್​ಗೆ ಕೋಳಿ ಸಾರು, ಮಟನ್ ಅಂದ್ರೆ ತುಂಬ ಇಷ್ಟ. ನಾನ್​ವೆಜ್ ಜತೆಗೆ ಸಸ್ಯಾಹಾರವನ್ನೂ ಅಷ್ಟೇ ಪ್ರೀತಿಸೋರು. ಪುನೀತ್ ಅವರೇ ಹೇಳಿಕೊಂಡಂತೆ, ಭಾರತದ ಎಲ್ಲ ತರಹದ ತಿಂಡಿ-ತಿನಿಸು ನನಗಿಷ್ಟ. ಆಯಾ ಪ್ರದೇಶಕ್ಕೆ ಹೋದಾಗ, ಅಲ್ಲಿನ ಊಟೋಪಚಾರಗಳನ್ನು ಆಸ್ವಾದಿಸುವ ಆಸಾಮಿ ನಾನು. ಅಲ್ಲಿ ಏನೇನು ಸಿಗುತ್ತೋ ಅದೆಲ್ಲವನ್ನೂ ತಿಂದುಬಿಡಬೇಕು ಎಂದು ಹೇಳಿಕೊಳ್ಳುತ್ತಿದ್ದರು.

    ಪಿಆರ್​ಕೆ ಮೂಲಕ ಹೊಸಬರಿಗೆ ಪ್ರೋತ್ಸಾಹ

    ಕನ್ನಡ ಚಿತ್ರರಂಗದಲ್ಲಿ ಪುನೀತ್ ದೊಡ್ಡ ಸ್ಟಾರ್ ಆಗಿದ್ದರೂ, ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದರು. ಹೊಸಬರ ಚಿತ್ರ ಗೆದ್ದಿತು ಎಂದರೆ, ಅವರನ್ನು ಕರೆದು ಮಾತನಾಡಿಸುತ್ತಿದ್ದರು. ಅಷ್ಟೇ ಅಲ್ಲ, ಹೊಸಬರನ್ನು ಉತ್ತೇಜಿಸುವುದಕ್ಕಾಗಿಯೇ ಪಿಆರ್​ಕೆ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ಒಂದಿಷ್ಟು ಚಿತ್ರಗಳನ್ನು ನಿರ್ವಿುಸಿದ್ದರು. 2018ರಲ್ಲಿ ಪ್ರಾರಂಭವಾದ ಈ ಸಂಸ್ಥೆಯ ಮೊದಲ ಚಿತ್ರವಾಗಿ ಬಿಡುಗಡೆಯಾಗಿದ್ದು ಹೇಮಂತ್ ರಾವ್ ನಿರ್ದೇಶನದ ಮತ್ತು ರಿಷಿ ಅಭಿನಯದ ‘ಕವಲುದಾರಿ’. ಇದರ ನಂತರ ‘ಮಾಯಾಬಜಾರ್ 2016’, ‘ಲಾ’, ‘ಫ್ರೆಂಚ್ ಬಿರಿಯಾನಿ’, ‘ಫ್ಯಾಮಿಲಿ ಪ್ಯಾಕ್’ ಮತ್ತು ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಗಳನ್ನು ಈ ಸಂಸ್ಥೆಯಡಿ ಪುನೀತ್ ನಿರ್ವಿುಸಿದ್ದಾರೆ. ಈ ಪೈಕಿ, ‘ಫ್ಯಾಮಿಲಿ ಪ್ಯಾಕ್’ ಮತ್ತು ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇನ್ನು, ಪಿಆರ್​ಕೆ ಮ್ಯೂಸಿಕ್ ಎಂಬ ಆಡಿಯೋ ಸಂಸ್ಥೆ ಪ್ರಾರಂಭಿಸಿ, ಅದರಡಿ ಹಲವು ಚಿತ್ರಗಳ ಆಡಿಯೋ ಮತ್ತು ಟ್ರೇಲರ್​ಗಳನ್ನು ಬಿಡುಗಡೆ ಮಾಡಿದ್ದಾರೆ. ಇದಲ್ಲದೆ, ಹೊಸಬರ ಚಿತ್ರಗಳೆಂದರೆ, ಹೊಸ ಪ್ರಯತ್ನಗಳಿಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದ ಪುನೀತ್, ಹಲವು ಮುಹೂರ್ತ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭಗಳಲ್ಲಿ ಭಾಗವಹಿಸಿ, ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದರು.

    ಬಾಲ್ಯದಲ್ಲೇ ಅತ್ಯುತ್ತಮ ನಟ

    ಡಾ. ರಾಜಕುಮಾರ್ ತಮ್ಮ ವೃತ್ತಿಜೀವನದಲ್ಲಿ ಅದೆಷ್ಟೇ ಅದ್ಭುತ ಅಭಿನಯವನ್ನು ಮಾಡಿದರೂ, ಅವರಿಗೆ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಬರಲಿಲ್ಲ ಎಂಬ ಬೇಸರ ಕನ್ನಡಿಗರಿಗಿದೆ. ಡಾ. ರಾಜಕುಮಾರ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ನಟನೆಗೆ ಪ್ರಶಸ್ತಿ ಬರದಿದ್ದರೂ, ಪುನೀತ್ ಮಾತ್ರ ಬಹಳ ಚಿಕ್ಕವಯಸ್ಸಿನಲ್ಲೇ ಆ ಹೆಗ್ಗಳಿಕೆಗೆ ಪಾತ್ರರಾದರು. ‘ಬೆಟ್ಟದ ಹೂವು’ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜಕುಮಾರ್ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಬಾಲನಟರೆನಿಸಿಕೊಂಡರು. ಬರೀ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ರಾಜ್ಯಮಟ್ಟದಲ್ಲೂ ಅವರು ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪುನೀತ್ ತಮ್ಮ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಪಡೆದಿರುವ ನಾಲ್ಕು ಪ್ರಶಸ್ತಿಗಳ ಪೈಕಿ, ಎರಡು ಪ್ರಶಸ್ತಿಗಳು ಬಾಲನಟನಾಗಿ ಪಡೆದಿದ್ದಾರೆ. ‘ಚಲಿಸುವ ಮೋಡಗಳು’ ಮತ್ತು ‘ಎರಡು ನಕ್ಷತ್ರಗಳು’ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪುನೀತ್ ಎರಡು ಬಾರಿ ಬಾಲನಟ ಪ್ರಶಸ್ತಿ ಪಡೆದರೆ, ‘ಮಿಲನ’ ಮತ್ತು ‘ಜಾಕಿ’ ಚಿತ್ರಗಳಿಗೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಇದಲ್ಲದೆ, ಹಲವು ಖಾಸಗೀ ಪ್ರಶಸ್ತಿಗಳು, ಪುನೀತ್ ಅವರ ಅತ್ಯುತ್ತಮ ಅಭಿನಯಕ್ಕೆ ಸಂದಿವೆ.

    ಶಿವಣ್ಣನ ವೇಗ, ರಾಘಣ್ಣನ ಶಾಂತಚಿತ್ತ

    ‘ಹೀರೋಗಳಲ್ಲಿ ನಿಮಗ್ಯಾರು ಇಷ್ಟ?’ ಎಂದರೆ, ಅಪು್ಪ ಥಟ್ ಅಂತ ಉತ್ತರಿಸುತ್ತಿದ್ದು; ಶಿವಣ್ಣ! ‘ನಾನು ಶಿವಣ್ಣನ ದೊಡ್ಡ ಅಭಿಮಾನಿ. ಅವರ ಓಂ ಸಿನಿಮಾವನ್ನು 100 ಸಲ ನೋಡಿರಬಹುದು’ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದರು. ಸಹೋದರರಿಂದ ಕಲಿತಿದ್ದು? ‘ಶಿವಣ್ಣನ ಸ್ಪೀಡ್ ಮತ್ತು ಎನರ್ಜಿ. ರಾಘಣ್ಣನ ಕಾಮ್ೆಸ್ (ಶಾಂತಚಿತ್ತ) ಎನ್ನುತ್ತಿದ್ದರು ಪುನೀತ್. ಶಿವರಾಜ್​ಕುಮಾರ್ ಅಭಿನಯದ ‘ರಣರಂಗ’ ಚಿತ್ರವನ್ನು ರಿಮೇಕ್ ಮಾಡುವ ಆಸೆಯನ್ನೂ ಅಪು್ಪ ವ್ಯಕ್ತಪಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts