More

    ಪುಲ್ವಾಮಾ ದಾಳಿಯ ಸತ್ಯ ಒಪ್ಪಿಕೊಂಡ ಪಾಕಿಸ್ತಾನ; ಪ್ರಧಾನಿ ಮೋದಿ ಪ್ರತಿಕ್ರಿಯೆ ಹೀಗಿದೆ…

    ಕೆವಾಡಿಯಾ: ರಾಷ್ಟ್ರೀಯ ಏಕತಾ ದಿನಾಚರಣೆ ಹಿನ್ನೆಲೆಯಲ್ಲಿ ಸರ್ದಾರ್​ ವಲ್ಲಭಭಾಯಿ ಅವರ ಪ್ರತಿಮೆಗೆ ಗೌರವ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ವಿರುದ್ಧ ಹರಿತ ಮಾತುಗಳನ್ನಾಡಿದರು.
    ಕಳೆದ ವರ್ಷದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಅದರ ಹಿಂದಿನ ಸತ್ಯ ಸ್ಪಷ್ಟವಾಗಿದೆ. ಪಾಕಿಸ್ತಾನವೇ ಒಪ್ಪಿಕೊಂಡಿದೆ ಎಂದು ತಿಳಿಸಿದರು.

    ಅಂದು ಪುಲ್ವಾಮಾ ದಾಳಿಯಲ್ಲಿ ಮಡಿದ ಶೂರ ಯೋಧರಿಗಾಗಿ ಇಡೀ ದೇಶವೇ ಕಣ್ಣೀರು ಹಾಕುತ್ತಿದ್ದಾಗ ಕೆಲವರು ಅದೇ ವಿಚಾರಕ್ಕೆ ಕೊಳಕು ರಾಜಕೀಯ ಮಾಡಿದರು. ತಮ್ಮ ಲಾಭಕ್ಕಾಗಿ ಆ ದಾಳಿಯನ್ನು ಬಳಸಿಕೊಂಡರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಎಸ್​ಎಫ್​ ಯೋಧರ ದಾಳಿಗೆ ಹೆದರಿ ಬಾಲಮುದುರಿ ಓಡಿದ ಪಾಕ್​…🤣

    ನಿನ್ನೆಯಷ್ಟೇ ಪಾಕಿಸ್ತಾನ ಸಂಸತ್ತಿನಲ್ಲಿ ಸಚಿವ ಚೌಧರಿ ಪುಲ್ವಮಾ ದಾಳಿ ನಾವೇ ಮಾಡಿಸಿದ್ದು ಎಂದು ಒಪ್ಪಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತದ ವಿದೇಶಾಂಗ ಸಚಿವಾಲಯ ಕೂಡ ನಿನ್ನೆಯೇ ತಿರುಗೇಟು ನೀಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಪುಲ್ವಾಮಾ ದಾಳಿಯ ನಂತರ ನಮ್ಮ ದೇಶದಲ್ಲಿಯೇ ಕೆಲವರು ಅನಗತ್ಯ ಹೇಳಿಕೆಗಳನ್ನು ನೀಡಿದರು. ಅದನ್ನೆಲ್ಲ ಮರೆಯುವುದಿಲ್ಲ. ಇದೀಗ ಪಾಕಿಸ್ತಾನವೇ ತನ್ನ ಸತ್ಯ ಒಪ್ಪಿಕೊಂಡ ಮೇಲೆ ಅಂಥವರ ನೈಜ ಬಣ್ಣ ಬಯಲಾಯಿತು ಎಂದು ಹೇಳಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಪುಲ್ವಾಮಾ ದಾಳಿಯನ್ನು ಬಳಸಿಕೊಂಡ ರಾಜಕೀಯ ಪಕ್ಷಗಳು ಇನ್ನಾದರೂ ಬುದ್ಧಿ ಕಲಿಯಲಿ. ಇನ್ನು ಮುಂದೆ ಅಂಥ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟರೆ ಒಳ್ಳೆಯದು ಎಂದಿದ್ದಾರೆ.

    ದೇಶವೂ ಹಿಂದೆದೂ ಕಂಡಿರದ ಸಾಮೂಹಿಕ ಸಾಮರ್ಥ್ಯ ಸಾಬೀತು ಪಡಿಸಿದೆ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts