More

    ಪೋಲಿಯೋ ಲಸಿಕಾ ಕಾರ್ಯಕ್ರಮ

    ಬೆಂಗಳೂರು: ರಾಷ್ಟ್ರೀಯ ಲಸಿಕಾ ದಿನದ ಪ್ರಯುಕ್ತ ಭಾನುವಾರ (ಮಾ.3)  ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಆರೋಗ್ಯ ಇಲಾಖೆಯು ರಾಜ್ಯಾದ್ಯಂತ 62,85,880 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ.

    ಇದಕ್ಕಾಗಿ 33,712 ಬೂತ್‌ಗಳನ್ನು ಸ್ಥಾಪಿಸಿದ್ದು, 963 ಸಂಚಾರಿ, 2,073 ಟ್ರಾನ್ಸಿಟ್ ತಂಡಗಳನ್ನು ರಚಿಸಲಾಗಿದೆ. 7,206 ಮೇಲ್ವಿಚಾರಕರು ಹಾಗೂ 1,11,370 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

    ರಾಜ್ಯದ ಎಲ್ಲ ಆಸ್ಪತ್ರೆಗಳು, ಬಸ್, ಮೆಟ್ರೋ, ರೈಲ್ವೆ ನಿಲ್ದಾಣ, ಕಾಮಗಾರಿ ಪ್ರದೇಶ, ಕೊಳೆಗೇರಿ, ಗುಡ್ಡಗಾಡು ಪ್ರದೇಶಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಬೂತ್‌ಗಳಲ್ಲಿ ವಿತರಿಸಲಿದ್ದು, ನಂತರದ 2-3 ದಿನ ಮನೆ ಮನೆ ಭೇಟಿ ಮೂಲಕ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಲಾಗುವುದು. ಪಾಲಕರು ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts