More

    ಪುಲ್ವಾಮಾದಲ್ಲಿರುವ ಪೆನ್ಸಿಲ್ ಗ್ರಾಮದ ಚಿತ್ರಣ ಕೊಟ್ರು ಪ್ರಧಾನಿ ಮೋದಿ

    ನವದೆಹಲಿ: ಪುಲ್ವಾಮಾ ಅಂದ ಕೂಡಲೇ ನೆನಪಿಗೆ ಬರುವುದು ಅಲ್ಲಿ ಇತ್ತೀಚೆಗೆ ನಡೆದ ಉಗ್ರ ದಾಳಿ. ಹುತಾತ್ಮರಾದ ಯೋಧರು. ಆದರೆ, ಪುಲ್ವಾಮಾದಲ್ಲೊಂದು ಪೆನ್ಸಿಲ್ ಗ್ರಾಮ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್​ ನಲ್ಲಿ ಇಂದು ಅದರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.ಆ ಚಿತ್ರಣ ಹೀಗಿದೆ ನೋಡಿ.

    “ ಇಂದು ಸಂಪೂರ್ಣ ಭಾರತಕ್ಕೆ ಶಿಕ್ಷಣ ನೀಡುವಲ್ಲಿ ಕಾಶ್ಮೀರದ ಪುಲ್ವಾಮಾ ಗಣನೀಯ ಪಾತ್ರ ವಹಿಸುತ್ತಿದೆ. ದೇಶಾದ್ಯಂತ ಮಕ್ಕಳು ತಮ್ಮ ಹೋಮ್ ವರ್ಕ್ ಮಾಡುವಾಗ, ನೋಟ್ಸ್ ಸಿದ್ಧಪಡಿಸುತ್ತಿದ್ದಾರೆ ಎಂದರೆ ಅದರ ಹಿಂದೆ ಎಲ್ಲೋ ಒಂದು ಕಡೆ ಪುಲ್ವಾಮಾದ ಜನರ ಕಠಿಣ ಶ್ರಮ ಖಚಿತವಾಗಿ ಅಡಗಿರುತ್ತದೆ. ಇಲ್ಲಿ ಪೆನ್ಸಿಲ್ ಸ್ಲೇಟ್ ತಯಾರಿಸುವ ಅನೇಕ ಘಟಕಗಳಿದ್ದು ಉದ್ಯೋಗಾವಕಾಶ ಒದಗಿಸುತ್ತಿವೆ ಮತ್ತು ಇವುಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ

    ಇದನ್ನೂ ಓದಿ: ‘ಚಿಕ್ಕ ಚಿಕ್ಕ ಕೆಲಸಗಳ ಮೂಲಕ ಏಕ್ ಭಾರತ – ಶ್ರೇಷ್ಠ ಭಾರತ್​ ಕಲ್ಪನೆಗೆ ಬಣ್ಣ ತುಂಬೋದಕ್ಕೆ ಏಕ್​ಭಾರತ್ ತಾಣಕ್ಕೆ ಭೇಟಿ ಕೊಡಿ’

    ಇದಕ್ಕಾಗಿ ಅವರು ಚಿನಾರ್ ನ ಕಟ್ಟಿಗೆಯನ್ನು ಬಳಸುತ್ತಾರೆ. ಅದರಲ್ಲಿ ಅಧಿಕ ತೇವಾಂಶ ಮತ್ತು ಮೃದುತ್ವ ಇರುತ್ತದೆ. ಈ ಗುಣವೇ ಅದನ್ನು ಪೆನ್ಸಿಲ್ ತಯಾರಿಕೆಗೆ ಸೂಕ್ತವಾಗಿಸುತ್ತದೆ. ಪುಲ್ವಾಮಾದ, ಉಕ್ಖೂವನ್ನು, ಪೆನ್ಸಿಲ್ ಗ್ರಾಮದ ಹೆಸರಿನಿಂದ ಕರೆಯುತ್ತಾರೆ. ಒಂದು ಕಾಲದಲ್ಲಿ ನಾವು ಪೆನ್ಸಿಲ್ ತಯಾರಿಕೆಗಾಗಿ ವಿದೇಶಗಳಿಂದ ಕಟ್ಟಿಗೆ ತರಿಸಿಕೊಳ್ಳುತ್ತಿದ್ದೆವು, ಆದರೆ ಈಗ ನಮ್ಮ ಪುಲ್ವಾಮಾ, ಈ ವಿಷಯದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುತ್ತಿದೆ. ವಾಸ್ತವದಲ್ಲಿ, ಪುಲ್ವಾಮಾದ ಈ ಪೆನ್ಸಿಲ್ ಸ್ಲೇಟ್ ಗಳು ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿವೆ.

    ಇದನ್ನೂ ಓದಿ: ಜಗತ್ತಿನಾದ್ಯಂತ ಮಲ್ಲಕಂಬ ಜನಪ್ರಿಯಗೊಳ್ಳುತ್ತಿದೆ ನೋಡಿ..

    ಪೆನ್ಸಿಲ್ ಸ್ಲೇಟ್​ ವಿಚಾರಕ್ಕೆ ಪೂರಕವಾಗಿ ಕಷ್ಟಪಟ್ಟು ದುಡಿಯುವ ಪ್ರೇರಣಾದಾಯಿ ವ್ಯಕ್ತಿಗಳಲ್ಲಿ ಒಬ್ಬರನ್ನು ಪರಿಚಯಿಸುತ್ತೇನೆ. ಅವರು ಮಂಜೂರ್ ಅಹ್ಮದ್ ಅಲಾಯಿ. ಮೊದಲಿಗೆ ಮಂಜೂರ್ ಅವರು ಕಟ್ಟಿಗೆ ಕಡಿಯುವ ಸಾಮಾನ್ಯ ಕೂಲಿಕಾರರಾಗಿದ್ದರು. ಏನಾದರೂ ಹೊಸದು ಮಾಡಬೇಕೆಂದು ಮಂಜೂರ್ ಬಯಸುತ್ತಿದ್ದರು. ಅದರಂತೆ, ಅವರು ತಮ್ಮ ಬಳಿಯಿದ್ದ ಭೂಮಿಯನ್ನು ಮಾರಾಟ ಮಾಡಿ Apple Wooden Box ಘಟಕ ಪ್ರಾರಂಭಿಸಿದರು.

    ಇದನ್ನೂ ಓದಿ: ತೂತ್ತುಕುಡಿ ಎಂಬ ಮುತ್ತಿನಗರಿಯ ‘ಪೊನ್​ ಮರಿಯಪ್ಪನ್​’ ಎಂಬ ಮುತ್ತನ್ನು ಜಗತ್ತಿಗೇ ಪರಿಚಯಿಸಿದ್ರು ಪ್ರಧಾನಿ ಮೋದಿ

    ಇಂದು ಮಂಜೂರ್ ಅವರ ಈ ವ್ಯಾಪಾರ ವಹಿವಾಟು ಕೋಟಿಗಳಲ್ಲಿ ನಡೆಯುತ್ತಿದೆ. ಸುಮಾರು ಇನ್ನೂರು ಮಂದಿಗೆ ಜೀವನೋಪಾಯಕ್ಕೆ ಮಾರ್ಗ ತೋರಿಸಿದ್ದಾರೆ. ಇಂದಿನ ಮನದ ಮಾತಿನ ಮುಖಾಂತರ, ಸಮಸ್ತ ದೇಶವಾಸಿಗಳ ಪರವಾಗಿ ನಾನು ಮಂಜೂರ್ ಅವರೂ ಸೇರಿ, ಪುಲ್ವಾಮಾದಲ್ಲಿ ದುಡಿಯುವ ಸೋದರ-ಸೋದರಿಯರ ಜತೆಗೆ ಅವರ ಕುಟುಂಬದವರನ್ನೂ ಪ್ರಶಂಸಿಸುವೆ”.

    ಸಾಲದ ಸುಳಿಗೆ ಸಿಕ್ಕ ಯುವಕನೊಬ್ಬ ಅದರಿಂದ ಹೊರಬರೋದಕ್ಕೆ ‘ಟಾಯ್ ಗನ್’ ಬಳಸಿ ಪೇಚಿಗೆ ಬಿದ್ದ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts