More

    ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿ: ಸಿರಗುಪ್ಪದಲ್ಲಿ ವಿಎಚ್‌ಪಿ, ಬಜರಂಗದಳ ಒತ್ತಾಯ

    ಸಿರಗುಪ್ಪ: ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಪದಾಧಿಕಾರಿಗಳು ಗುರುವಾರ ಶಿರಸ್ತೇದಾರ್ ಎನ್.ಬಿ.ಬಾಬು ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದರು.

    ವಿಎಚ್‌ಪಿ ಜಿಲ್ಲಾ ಸಹಕಾರ್ಯದರ್ಶಿ ಬಿ.ಕೆ.ಎಸ್.ಚನ್ನಬಸವ ಮಾತನಾಡಿ, ಸನಾತನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಇಂತಹ ಹಬ್ಬಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಮೂರ್ತಿ ತಯಾರಕರು, ಶಾಮಿಯಾನ, ಹೂಗಾರರು, ಹಣ್ಣು ವ್ಯಾಪಾರಿಗಳು ಹಾಗೂ ಇತರರ ಸ್ಥಿತಿ ಕಷ್ಟಕರವಾಗುತ್ತದೆ. ಕರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ಮಾಲ್‌ಗಳು, ಶಾಲಾ-ಕಾಲೇಜುಗಳು, ಚುನಾವಣೆ, ರಾಜಕೀಯ ಸಮಾವೇಶ, ವಿವಿಧ ಸಮುದಾಯಗಳ ಜಯಂತಿಗೆ ಅವಕಾಶ ಮಾಡಿಕೊಟ್ಟಂತೆ ಸಾರ್ವಜನಿಕ ಗಣೇಶ ಚತುರ್ಥಿಗೆ ಅವಕಾಶ ಕಲ್ಪಿಸಿಕೊಡಬೇಕು, ಕೋವಿಡ್-19 ನೆಪವೊಡ್ಡಿ ಆಚರಣೆಯನ್ನು ತಡೆಯಬಾರದು ಎಂದು ಆಗ್ರಹಿಸಿದರು.

    ಗಣೇಶೋತ್ಸವ ಹಿಂದುಗಳ ಬಹುದೊಡ್ಡ ಹಬ್ಬವಾಗಿದ್ದು, ಆಧ್ಯಾತ್ಮಿಕ ಶಕ್ತಿಯ ಬಲವು ಹೆಚ್ಚುತ್ತದೆ. ಇಂತಹ ಆಚರಣೆಯ ಪರಂಪರೆ ಮೇಲೆ ನಿಷೇಧ ಹಾಕಿರುವುದು ಹಿಂದುಗಳಿಗೆ ಮಾಡಿದ ಅವಮಾನವಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಹಿಂದೂಗಳ ಸರ್ವಶ್ರೇಷ್ಠ ಧಾರ್ಮಿಕ ಉತ್ಸವದ ಮೇಲೆ ಹೇರಿರುವ ನಿಷೇಧ ಹಿಂಪಡೆಯಬೇಕು. ಕರೊನಾ ನಿಯಮ ಪಾಲನೆಯೊಂದಿಗೆ ಆಚರಣೆ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಮುಖಂಡರಾದ ದ್ಯಾಮನಗೌಡ, ಹನುಮೇಶಶೆಟ್ಟಿ, ರಮೇಶ್, ಗೋಪಾಲಕೃಷ್ಣ, ಶಿವಶಂಕರ, ಮನೋಹರ ಕಾಳಿಂಗ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts