More

    ಸಾರ್ವಜನಿಕರೇ ಹುಷಾರ್.. ನಿಧಿಯಲ್ಲಿ ಸಿಕ್ಕ ಚಿನ್ನವೆಲ್ಲ ಅಪರಂಜಿಯಲ್ಲ !

    ಅಜ್ಜಂಪುರ: ಬ್ಯಾಂಕ್ ಅಕೌಂಟ್ ನಂಬರ್, ಒಟಿಪಿ ನಂಬರ್ ಕೇಳಿ ಹಣ ಲಪಟಾಯಿಸುವುದು ಎಲ್ಲೆಡೆ ನಡೆಯುತ್ತಲೇ ಇದೆ. ಇಂಥ ವಂಚನೆಯನ್ನೂ ಮೀರಿ ಪ್ರಿಂಟಿಂಗ್ ಪ್ರೆಸ್‌ಗಳಿಂದ ವಿಸಿಟಿಂಗ್ ಕಾರ್ಡ್ ಪಡೆದು ಅಲ್ಲಿರುವ ಮೊಬೈಲ್ ನಂಬರ್‌ಗೆ ಫೋನ್ ಮಾಡಿ ಹಣ ಚಿನ್ನದ ಆಸೆ ತೋರಿಸಿ ಮೋಸ ಮಾಡುತ್ತಿದ್ದಾರೆ.
    ಇಂಥ ವಂಚಕ ಜಾಲಕ್ಕೆ ಪ್ರತಿಷ್ಠಿತರೇ ಗುರಿಯಾಗಿದ್ದಾರೆ.

    ವಂಚಕರು ಪ್ರಸಿದ್ಧ ಪ್ರಿಂಟಿಂಗ್ ಪ್ರೆಸ್‌ಗೆ ತೆರಳಿ ನಮಗೆ ವಿಸಿಟಿಂಗ್ ಕಾರ್ಡ್ ಬೇಕು, ಆರ್ಡರ್ ತೆಗೆದುಕೊಳ್ಳಿ, ನಮಗೆ ಸ್ಯಾಂಪಲ್ ಕಾರ್ಡ್ ತೋರಿಸಿ ಎನ್ನುತ್ತಾರೆ. ಪ್ರಿಂಟಿಂಗ್ ಪ್ರೆಸ್‌ನವರು ವಿಸಿಟಿಂಗ್ ಕಾರ್ಡ್‌ನ ಎಲ್ಲ ಸ್ಯಾಂಪಲ್ ತೋರಿಸುತ್ತಾರೆ. ಇನ್ನೂ ಬೇಕು ನಮ್ಮ ಯಜಮಾನರಿಗೆ ತೋರಿಸಿ ತರುತ್ತೇವೆ. ಕಾರ್ಡ್‌ಗಳನ್ನು ಕೊಡಿ ಎಂದು ದುಂಬಾಲು ಬೀಳುತ್ತಾರೆ. ಬೇಕಿದ್ದರೆ 500 ರೂ. ತಗೊಳ್ಳಿ. ಕಾರ್ಡ್‌ಗಳನ್ನು ತಂದು ಕೊಟ್ಟು 500 ರೂ. ವಾಪಸ್ ಪಡೆಯುತ್ತೇವೆ ಎಂದು ಹಳೆಯ ನೂರಾರು ಕಾರ್ಡ್‌ಗಳನ್ನು ಪಡೆದು ಕಣ್ಮರೆಯಾಗುತ್ತಾರೆ.
    ಕಾರ್ಡ್‌ಗಳನ್ನು ಪಡೆದುಹೋದ ವಂಚಕರು ಅದರಲ್ಲಿನ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡುತ್ತಾರೆ. ನಮಗೆ ನಿಧಿ ಸಿಕ್ಕಿದೆ. ಕೊಡಪಾನ ತುಂಬ ಚಿನ್ನದ ಗಟ್ಟಿಯಿದೆ. ಯಾರಿಗೂ ಹೇಳಬೇಡಿ. ನಮಗೆ ತುರ್ತು ಹಣ ಬೇಕಾಗಿದೆ. 5 ಕೆ.ಜಿ. ಚಿನ್ನದ ಗಟ್ಟಿಗೆ 5 ಲಕ್ಷ ರೂಪಾಯಿ ಕೊಡಿ ಎಂದು ಪುನಃ ಕರೆ ಮಾಡಿ ನೆನಪಿಸುತ್ತಾರೆ. ಚಿನ್ನದ ಆಸೆಗೆ ಬಿದ್ದವರು ವಂಚಕರ ಖೆಡ್ಡ್ಡಾಕ್ಕೆ ಬೀಳುತ್ತಾರೆ. ನಿರ್ದಿಷ್ಟ ಜಾಗಕ್ಕೆ ಹಣ ತನ್ನಿ ಎಂದು ಹೇಳುತ್ತಾರೆ. ಇದನ್ನು ನಂಬಿ ಹೋದವರಿಗೆ ಚಿನ್ನದ ಗಟ್ಟಿ ನೀಡುತ್ತಾರೆ. ಗಡಿಬಿಡಿಯಲ್ಲಿ ಅವರಿಗೆ ಹಣ ಕೊಟ್ಟು ಚಿನ್ನವೆಂದು ತಂದರೆ ಅದು ನಕಲಿ ಚಿನ್ನದ ಗಟ್ಟಿಯಾಗಿರುತ್ತದೆ. ಅವರು ಕರೆ ಮಾಡಿದ ಮೊಬೈಲ್ ನಂಬರಿಗೆ ಫೋನ್ ಮಾಡಿದರೆ ಸ್ವಿಚ್‌ಆ್ ಆಗಿರುತ್ತದೆ. ಮೋಸ ಹೋಗಿದ್ದು ಬೇರೆಯವರಿಗೆ ತಿಳಿಸಿದರೆ ಮರ್ಯಾದೆ ಹೋಗುತ್ತದೆ ಎಂದು ಕೊರಗಿ ಸುಮ್ಮನಾಗುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts