More

    ದಾಸ ಸಾಹಿತ್ಯದಿಂದ ಜನಜಾಗೃತಿ ಕಾರ್ಯ

    ಧಾರವಾಡ ಕನ್ನಡ ಸಾಹಿತ್ಯದ ಅನೇಕ ತಿರುವುಗಳಲ್ಲಿ ದಾಸ ಸಾಹಿತ್ಯ, ಶರಣ ಸಾಹಿತ್ಯ ಪ್ರಮುಖವಾದವು. ಅವುಗಳ ಮೂಲಕ ಸಮಾಜದ ಅಂಕುಡೊ0ಕುಗಳನ್ನು ತಿದ್ದುವ ಮತ್ತು ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಕನಕದಾಸರು ಮತ್ತು ಅಂಬಿಗರ ಚೌಡಯ್ಯನವರು ಮಾಡಿದರು ಎಂದು ಬ್ಯಾಡಗಿ ಶಿಕ್ಷಣ ಸಂಸ್ಥೆಯ ವರ್ತಕರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಶಿಧರ ಜಿ. ವೈದ್ಯ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಎಮೆರಿಟಸ್ ಪ್ರೊಫೆಸರ್ ಸಿ.ಆರ್. ಯರವಿನತೆಲಿಮಠ ದತ್ತಿ ಅಂಗವಾಗಿ ಆಯೋಜಿಸಿದ್ದ `ಕನಕದಾಸರು ಮತ್ತು ಅಂಬಿಗರ ಚೌಡಯ್ಯ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.
    ಭಕ್ತಿ ಪ್ರಧಾನವಾದದ್ದು ದಾಸ ಸಾಹಿತ್ಯವಾಗಿದೆ. ಕನಕದಾಸರ ನಡಿಗೆ ಉಳಿದ ದಾಸರಿಗಿಂತ ಭಿನ್ನವಾದುದು. ಕಾವ್ಯವನ್ನು ಹೊಸೆದು ಕೀರ್ತನೆಗಳನ್ನು ರಚಿಸಿದ ಶ್ರೇಯಸ್ಸು ಕನಕದಾಸರಿಗೆ ಸಲ್ಲುತ್ತದೆ. ಕನಕದಾಸರ ಸಾಹಿತ್ಯ ಭಕ್ತಿ ಪ್ರಧಾನ, ತತ್ವಬೋಧೆ, ವಿಡಂಬನಾತ್ಮಕ ಕೀರ್ತನೆಗಳು ಒಳಗೊಂಡಿದೆ. ಆಂತರಿಕ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟವರು ಕನಕದಾಸರು ಎಂದರು.
    ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಬಂಡಾಯ ಸಾಹಿತ್ಯ ಎನ್ನುವುದು ಇತ್ತೀಚೆಗೆ ಬಂದಿರುವುದಲ್ಲ. ವಚನಕಾರರು ಮತ್ತು ದಾಸರ ಸಾಹಿತ್ಯದಲ್ಲಿ ಅನೇಕ ವಿಧದ ಬಂಡಾಯ ಧೋರಣೆ ಇರುವುದನ್ನು ಅವರ ವಚನಗಳು ಮತ್ತು ಕೀರ್ತನೆಗಳ ಮುಖಾಂತರ ಕಂಡುಕೊಳ್ಳಲು ಸಾಧ್ಯತೆ ಇದೆ ಎಂದರು.
    ಇದೇ ಸಂದರ್ಭದಲ್ಲಿ ಶುಕ್ಲಾದೇವಿ ಯರವಿನತೆಲಿಮಠ ಅವರು ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರನ್ನು ಮತ್ತು ಎಮೆರಿಟಸ್ ಪ್ರೊ. ಸಿ.ಆರ್. ಯರವಿನತೆಲಿಮಠ ಅವರು ಪ್ರಾಚಾರ್ಯ ಡಾ. ಶಶಿಧರ ಜಿ. ವೈದ್ಯ ಅವರನ್ನು ಸನ್ಮಾನಿಸಿದರು.
    ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಮತ್ತು ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
    ಚ0ದ್ರಕಾ0ತ ಬೆಲ್ಲದ, ಡಾ. ವೀರಣ್ಣ ರಾಜೂರ, ಡಾ. ಡಿ.ಎಂ. ಹಿರೇಮಠ, ಜಿ.ಬಿ. ಹೊಂಬಳ, ನಿಂಗಣ್ಣ ಕುಂಟಿ, ಎಂ.ಎA. ಚಿಕ್ಕಮಠ, ಎಸ್.ಎಸ್.ದೇಸಾಯಿ, ಸಿ.ಎಸ್. ಪಾಟೀಲ, ಪ್ರೊ. ರವಿ ಹವಿನಾಳೆ, ಪ್ರೊ. ಬಸವರಾಜ ತಲ್ಲೂರ, ಶಿವಾನಂದ ಮಠಪತಿ, ಡಾ. ಎಸ್.ಆರ್. ರಾಮನಗೌಡರ, ಡಾ. ಆನಂದ ಪಾಟೀಲ, ಬಿ.ಎಸ್.ಶಿರೋಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts