More

    ಕುಂದಾಪುರದಲ್ಲಿ ಪೊಲೀಸರಿಂದ ಜನಜಾಗೃತಿ

    ಕುಂದಾಪುರ: ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದರೂ ಜನತೆ ಮನೆಯಲ್ಲಿರದೇ ಅನಗತ್ಯವಾಗಿ ಸುತ್ತಾಡುತ್ತಿರುವ ಹಿನ್ನೆಲೆಯಲ್ಲಿ ಕಡ್ಲೂರು ಗ್ರಾಮಾಂತರ ಪೊಲೀಸರೇ ಬೀದಿಗಿಳಿದು ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು.
    ಗ್ರಾಮಾಂತರ ಠಾಣೆ ಎಸ್ಸೈ ರಾಜ್‌ಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಗುಲ್ವಾಡಿ ಗ್ರಾಮ ಮಾವಿನಕಟ್ಟೆ ಸರ್ಕಲ್ ಬಳಿ ಬ್ಯಾರಿಕೇಡ್ ಅಳವಡಿಸಿ, ಅನಗತ್ಯವಾಗಿ ಬೀದಿಗೆ ಬಂದ್ರೆ ಕರೊನಾ ಮನೆ ಬಾಗಿಲಿಗೆ ಬರುತ್ತದೆ ಎಂದು ಜನರನ್ನು ಎಚ್ಚರಿಸಿದರು.

    ತಗ್ಗದ ಜನದಟ್ಟಣೆ: ರಿಗೆ ವ್ಯವಸ್ಥೆ ಇಲ್ಲದಿದ್ದರೂ ಕುಂದಾಪುರದಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಿಲ್ಲ. ದಿನಸಿ, ತರಕಾರಿ ಹಾಗೂ ಮೆಡಿಕಲ್ ಶಾಪ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಅಗತ್ಯ ವಸ್ತುಗಳ ಖರೀದಿ ಸಂದರ್ಭ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಮನವಿ ಮಾಡುತ್ತಿದ್ದರೂ ಅದನ್ನು ಪಾಲಿಸುವವರು ವಿರಳವಾಗಿದ್ದರು.

    ಪ್ರಧಾನಿಗೆ ಜೆ.ಪಿ.ಹೆಗ್ಡೆ ಪತ್ರ: ಕೇಂದ್ರ ಹಾಗೂ ರಾಜ್ಯಸರ್ಕಾರದ ಎಲ್ಲ ಸಂಸದರು ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನ್ನ ಕರೋನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವಂತೆ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಕಾರ‌್ಯದರ್ಶಿ ಅವರಿಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.

    ಕಾಪಿ ಊಟ ಸ್ಥಗಿತ: ಲಾಕ್‌ಡೌನ್ ಘೊಷಣೆ ನಂತರ ಅಸಹಾಯಕರು, ಕಾರ್ಮಿಕರು ಹಾಗೂ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಊಟ, ತಿಂಡಿ ಪೂರೈಸುತ್ತಿದ್ದ ಸ್ಥಳೀಯ ಪಾರಿಜಾತ ಹೊಟೇಲ್ ಮಾಲೀಕರು ಮಂಗಳವಾರದಿಂದ ಉಚಿತ ಸೇವೆ ನಿಲ್ಲಿಸಿದ್ದಾರೆ. ಪ್ರತಿನಿತ್ಯ ಹೋಟೆಲ್ ಮಾಲೀಕರು ತಮ್ಮ 15 ಮಂದಿ ಸಿಬ್ಬಂದಿಯೊಂದಿಗೆ ಶಿರೂರು ಚೆಕ್ ಪೋಸ್ಟ್‌ನಿಂದ ಅಂಪಾರು ತುದಿತನಕ ರಸ್ತೆಯಲ್ಲಿ ಬಾಕಿಯಾದ ಕಾರ್ಮಿಕರು ಹಾಗೂ ಪೊಲೀಸರಿಗೆ ಊಟ ತಿಂಡಿ ವಿತರಿಸುತ್ತಿದ್ದರು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಅವರು ಈ ಸೇವೆ ನಿಲ್ಲಿಸಿದ್ದಾರೆ.

    ಕಾರ್ಮಿಕರು ಹಾಗೂ ಕರ್ತವ್ಯ ನಿರತ ಪೊಲೀಸರಿಗೆ ಪ್ರತಿನಿತ್ಯ ತಿಂಡಿ ಹಾಗೂ ಊಟ ಪೂರೈಸುತ್ತಿದ್ದೆ. ಆದರೆ ಆರೋಗ್ಯಾಧಿಕಾರಿಗಳು ಊಟದಲ್ಲಿ ವಿಷ ಹಾಕಿರೋದಿಲ್ಲ ಎಂದು ಏನು ಗ್ಯಾರಂಟಿ ಎಂದು ಪ್ರಶ್ನಿಸಿ ಅವಮಾನಿಸಿದರು. ಹಾಗಾಗಿ ಇನ್ನು ಮುಂದೆ ಊಟ ತಿಂಡಿ ಪೂರೈಕೆ ಸ್ಥಗಿತಗೊಳಿಸುತ್ತಿದ್ದೇನೆ.
    ಗಣೇಶ್ ಭಟ್, ಹೋಟೆಲ್ ಪಾರಿಜಾತ ಆಡಳಿತ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts