More

    ಪಿಯು ಕಾಲೇಜ್‌ಗಳಲ್ಲಿ ಉಪನ್ಯಾಸಕರ ಅಭಾವ

    ಬೆಳಗಾವಿ: ಕರೊನಾತಂಕದ ಮಧ್ಯೆಯೂ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಕಾಲೇಜ್‌ಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ 190 ಉಪನ್ಯಾಸಕರ ಹುದ್ದೆ ಖಾಲಿ ಇದ್ದು, ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪಿಯು ದ್ವಿತೀಯ ವರ್ಷದ ಲಿತಾಂಶವೂ ಕುಸಿಯುವ ಆತಂಕ ಎದುರಾಗಿದೆ.

    ಜಿಲ್ಲಾದ್ಯಂತ 60 ಸರ್ಕಾರಿ ಪಿಯು ಕಾಲೇಜ್‌ಗಳಿದ್ದು, 612 ಉಪನ್ಯಾಸಕರ ಹುದ್ದೆ ಮಂಜೂರಾಗಿವೆ. ಈ ಪೈಕಿ 422 ಉಪನ್ಯಾಸಕರಷ್ಟೇ ಕಾರ್ಯ ನಿರ್ವಹಿಸುತ್ತಿದ್ದು, 190 ಹುದ್ದೆ ಖಾಲಿ ಇವೆ. ಅರ್ಥಶಾಸ, ಇತಿಹಾಸ ವಿಷಯ ಉಪನ್ಯಾಸಕರ ಕೊರತೆ ಹೆಚ್ಚಿದೆ.

    ಶೈಕ್ಷಣಿಕ ಚಟುವಟಿಕೆ ಪೂರ್ಣ ಕಷ್ಟ: ಈ ಹಿಂದೆ ಉಪನ್ಯಾಸಕರ ಅಭಾವವಿರುವ ಸರ್ಕಾರಿ ಪಿಯು ಕಾಲೇಜ್‌ಗಳಲ್ಲಿ ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಿಸುತ್ತಿತ್ತು. ಆದರೆ, ಈ ಸಲ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯೂ ಆಗಿಲ್ಲ. ಹೀಗಾಗಿ ಅವಧಿಗೆ ಪಠ್ಯಕ್ರಮ ಮುಗಿಸುವುದಷ್ಟೇ ಅಲ್ಲದೆ, ಸಕಾಲಕ್ಕೆ ಶೈಕ್ಷಣಿಕ ಚಟುವಟಿಕೆ ಪೂರ್ಣಗೊಳಿಸುವುದು ಕಷ್ಟಕರವಾಗಿ ಪರಿಣಮಿಸಿದೆ.

    ಪಾಲಕರ ಪ್ರಶ್ನೆ: ಕಾಲೇಜ್ ಆರಂಭಕ್ಕೆ ಆಸಕ್ತಿ ತೋರುತ್ತಿರುವ ಸರ್ಕಾರ, ಖಾಲಿ ಹುದ್ದೆಗಳ ಭರ್ತಿಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾಲಕ ಸಮುದಾಯ ಪ್ರಶ್ನಿಸುತ್ತಿದೆ. ಅಲ್ಲದೆ, ಕಲಿಕೆಗೆ ತೊಡಕಾಗುತ್ತಿರುವ ಕುರಿತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಿಷಯವಾರು ಸಮಸ್ಯೆಗಳಿಗೆ ಪರಿಹಾರ ಪಡೆಯಲು ನಾವು ಯಾರನ್ನು ಸಂಪರ್ಕಿಸುವುದು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಗ್ರಾಮೀಣ ಮಕ್ಕಳ ತಲುಪದ ಆನ್‌ಲೈನ್ ತರಗತಿ: 2019-20ನೇ ಸಾಲಿನ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.63.88 ಲಿತಾಂಶ ದಾಖಲಿಸಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 20ನೇ ರ‌್ಯಾಂಕ್ ಗಳಿಸಿದ್ದರೆ, ಶೇ.59.7 ಲಿತಾಂಶದೊಂದಿಗೆ ಬೆಳಗಾವಿ ಶೈಕ್ಷಣಿಕ ಜಿಲ್ಲೆ 27ನೇ ಸ್ಥಾನ ಗಳಿಸಿತ್ತು. ಕರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ 7 ತಿಂಗಳ ಕಾಲ ಪಿಯು ಕಾಲೇಜ್‌ಗಳಿಗೆ ರಜೆ ೋಷಿಸಲಾಗಿತ್ತು. ಈವೇಳೆ ಆರಂಭಗೊಂಡ ಆನ್‌ಲೈನ್ ತರಗತಿಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

    ಪ ಲಿತಾಂಶ ಕುಸಿಯುವ ಆತಂಕ: ಈ ಮಧ್ಯೆ, ಜ.1ರಿಂದ ಪಿಯು ದ್ವಿತೀಯ ಹಾಗೂ ಪ.1ರಿಂದ ಪಿಯು ಪ್ರಥಮ ವರ್ಷದ ತರಗತಿ ಆರಂಭಗೊಂಡಿವೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಗೂ ಬೇಡಿಕೆಯಷ್ಟು ಉಪನ್ಯಾಸಕರೇ ಇಲ್ಲ. ಈ ಸಮಸ್ಯೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳದಿದ್ದರೆ, ಈ ಬಾರಿ ಪಿಯು ದ್ವಿತೀಯ ವರ್ಷದ ಪರೀಕ್ಷಾ ಲಿತಾಂಶ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂಬುದು ಶಿಕ್ಷಣ ತಜ್ಞರ ಅಭಿಮತ.

    ಲಿತಾಂಶ ಸುಧಾರಣೆ, ಶೈಕ್ಷಣಿಕ ಗುಣಮಟ್ಟ ಹೆಚ್ಚಳ ದೃಷ್ಟಿಯಿಂದ ವಿಷಯವಾರು ಉಪನ್ಯಾಸಕರ ವೇದಿಕೆ ರಚಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಕರಿಗೆ ತರಬೇತಿ ನೀಡಲಾಗುತ್ತಿದೆ. ಸರ್ಕಾರಿ ಪಿಯು ಕಾಲೇಜ್‌ಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಭರ್ತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    | ರಾಜಶೇಖರ ಪಟ್ಟಣಶೆಟ್ಟಿ ಡಿಡಿಪಿಯು, ಬೆಳಗಾವಿ

    ಕೆಲ ಸರ್ಕಾರಿ ಪಿಯು ಕಾಲೇಜ್‌ಗಳ ಉಪನ್ಯಾಸಕರು ನಿಯೋಜನೆ ಆಧಾರದಲ್ಲಿ ಎರಡ್ಮೂರು ಕಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವೆಡೆ ಅನುದಾನಿತ ಕಾಲೇಜ್‌ಗಳ ಉಪನ್ಯಾಸಕರ ಸೇವೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ಶೀಘ್ರವೇ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ.
    | ಎಂ.ಎಂ. ಕಾಂಬಳೆ ಡಿಡಿಪಿಯು, ಚಿಕ್ಕೋಡಿ

    | ಇಮಾಮಹುಸೇನ್ ಗೂಡುನವರ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts