More

    ಪಂ. ಮರಡೂರ ಸ್ನೇಹ ಜೀವಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಆಧ್ಯಾತ್ಮಿಕ ಮತ್ತು ಸಂಗೀತದ ಹಿನ್ನೆಲೆಯಲ್ಲಿ ಭಾರತ ಸದಾ ಉತ್ತುಂಗದಲ್ಲೇ ಇದೆ. ಅಂತಹ ಸಂಗೀತದ ಹಿನ್ನೆಲೆಯನ್ನು ಭಾರತ ಹೊಂದಿದೆ ಎಂದು ಹಿರಿಯ ನಟ ಡಾ. ಶಶಿಧರ ನರೇಂದ್ರ ಹೇಳಿದರು.
    ನಗರದ ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ, ಸಪ್ತಕ ಸಹಯೋಗದಲ್ಲಿ ಇಲ್ಲಿನ ಆಲೂರು ವೆಂಕಟರಾವ್​ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪಂ.ಸೋಮನಾಥ ಮರಡೂರ ಸನ್ಮಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕಳೆದ 7 ದಶಕಗಳಿಂದ ಪಂ. ಸೋಮನಾಥ ಮರಡೂರ ನಿರಂತರವಾಗಿ ಸಂಗೀತ ೇತ್ರದಲ್ಲಿ ತೊಡಗಿದ್ದಾರೆ. ತಾವು ಮಾತ್ರವಲ್ಲದೆ ಅನೇಕ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆದಿದ್ದಾರೆ. ಸರಳ ವ್ಯಕ್ತಿತ್ವದ ಸ್ನೇಹ ಜೀವಿಯಾಗಿದ್ದಾರೆ ಎಂದರು.
    ಅಧ್ಯತೆ ವಹಿಸಿದ್ದ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ಸಂಗೀತವನ್ನು ಸ್ವತಃ ಅನುಭವಿಸಿ ಇನ್ನೊಬ್ಬರಿಗೆ ಸಂಗೀತ ಜ್ಞಾನ ಧಾರೆ ಎರೆದ ಸಂಗೀತಗಾರ ಸದಾ ಸುಖಿಯಾಗಿರುತ್ತಾರೆ ಎನ್ನುವುದಕ್ಕೆ ಪಂ.ಸೋಮನಾಥ ಮರಡೂರ ಸಾ. ಬಾಲ್ಯದಿಂದಲೂ ಬಡತನ ಇದ್ದರೂ ಆ ನೋವು ಅವರಿಗೆ ಬಾಧಿಸಲಿಲ್ಲ. ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಸಂಗೀತ ಪರಂಪರೆಯನ್ನು ಸಾರ್ಥಕವಾಗಿ ಮುನ್ನಡೆಸಿದಾಗ ಸಂತೃಪ್ತ ಭಾವ ತಳೆದು ಸುಖಿಸಿದವರು ಎಂದರು.
    ವೀಣಾ ಮಠ ವಯೋಲಿನ್​ ವಾದನ, ವಿದುಷಿ ವೀಣಾ ಹಾಗೂ ವಾಣಿ ಮರಡೂರ ಜುಗಲ್​ ಬಂದಿ ಗಾಯನ ಗಮನ ಸೆಳೆಯಿತು. ತಬಲಾದಲ್ಲಿ ಪಂ. ಸಾತಲಿಂಗಪ್ಪ ಕಲ್ಲೂರ ದೇಸಾಯಿ, ಉಸ್ತಾದ ನಿಸಾರ ಅಹಮ್ಮದ ಹಾಗೂ ಬಸವರಾಜ ಹಿರೇಮಠ ಹಾಮೋರ್ನಿಯಂ ಸಾಥ್​ ನೀಡಿದರು.
    ಪಂ.ಬಿ.ಎಸ್​.ಮಠ, ಅಕ್ಕಮಹಾದೇವಿ ಮಠ, ಕುಮಾರ ಮರಡೂರ, ಶ್ರೀಕಾಂತ ಕುಲಕಣಿರ್, ಡಾ.ಕೆ.ಜಿ.ಭಟ್ಟ, ವೀರಣ್ಣ ಪತ್ತಾರ, ಪ್ರಭು ಅಗಡಿ, ಅಗಾಥಾ ಪೋಟಿರ್ಯರ್​, ಜೆ. ನಿರಂಜನ್​, ಉಮೇಶ ಮುನವಳ್ಳಿ, ಗಾಯತ್ರಿ ತೆಂಗಸೆ, ಭಾರ್ಗವಿ ಕುಲಕಣಿರ್, ಗೀತಾ ಆಲೂರ, ಕವಿತಾ ಜಂಗಮಶೆಟ್ಟಿ, ರಮೇಶ ನಾಡಗೇರ, ಡಾ.ಶ್ರೀಧರ ಕುಲಕಣಿರ್, ಶಂಕರ ಗುರವ, ಬಸವರಾಜ ವಂದಲಿ, ಇತರರು ಇದ್ದರು.
    ಜಿ.ಎಸ್​.ಹೆಗಡೆ ಸ್ವಾಗತಿಸಿದರು. ರವಿ ಕುಲಕಣಿರ್ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts