More

    ಶಾಸಕ ದಢೇಸುಗೂರು ಬಂಧಿಸದಿದ್ದರೆ ಹೋರಾಟ ಶಿವರಾಜ ತಂಗಡಗಿ ಎಚ್ಚರಿಕೆ

    ಕೊಪ್ಪಳ: ಪಿಎಸ್‌ಐ ನೇಮಕಾತಿಗಾಗಿ 15 ಲಕ್ಷ ರೂ. ಲಂಚ ಪಡೆದಿರುವ ಶಾಸಕ ಬಸವರಾಜ ದಢೇಸುಗೂರುನನ್ನು ಸೆ.12ರೊಳಗೆ ಬಂಧಿಸಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಪಾದಯಾತ್ರೆ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪಿಎಸ್‌ಐ ಹಗರಣದ ಬಗ್ಗೆ ಮಾತನಾಡಿದ್ದಕ್ಕೆ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಲಾಗಿತ್ತು. ಆದರೆ, ಪಿಎಸ್‌ಐ ನೇಮಕಾತಿಗಾಗಿ 15 ಲಕ್ಷ ರೂ. ಲಂಚ ಪಡೆದ ಆಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿನ ಧ್ವನಿ ನನ್ನದೇ ಎಂದು ದಢೇಸುಗೂರು ಒಪ್ಪಿಕೊಂಡಿದ್ದಾರೆ. ಸರ್ಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದಿದ್ದಾರೆ. ಹೀಗಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ ? ಇದರಿಂದ ಸರ್ಕಾರದ ಮೇಲೆ ಮತ್ತಷ್ಟು ಅನುಮಾನ ಹೆಚ್ಚುತ್ತಿದೆ. ಸರ್ಕಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಶಾಸಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಲ್ಲಿ ಈ ಜಾಲದ ಬಗ್ಗೆ ಇನ್ನಷ್ಟು ಮಾಹಿತಿ ದೊರೆಯಬಹುದು ಎಂದರು.

    ಆಡಿಯೋ ಬಹಿರಂಗಗೊಳ್ಳುತ್ತಲೇ ಪರಸಪ್ಪನನ್ನು ಲಿಂಗಸ್ಗೂರಿಗೆ ಕರೆದೊಯ್ದು ಧಮ್ಕಿ ಹಾಕಿದ್ದಾರೆ. ಆಡಿಯೊ ಬಹಿರಂಗದ ಹಿಂದೆ ವಿರೋಧ ಪಕ್ಷಗಳ ಕೈವಾಡವಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಅವರ ಪಕ್ಷದಲ್ಲೇ ಟಿಕೆಟಗಾಗಿ ಪೈಪೋಟಿ ಹೆಚ್ಚಿರುವುದು. ನಮ್ಮಲ್ಲಲ್ಲ. ಹೀಗಾಗಿ ಯಾರಾದರೊಬ್ಬರು ಬಿಡುಗಡೆ ಮಾಡಿರಬಹುದು. ಸರ್ಕಾರಕ್ಕೆ ಹಣ ನೀಡಿದ್ದೇನೆ ಎನ್ನುವ ಮಾತು ಸಾಮಾನ್ಯವಲ್ಲ. ತಕ್ಷಣ ಸಿಎಂ ಮಾತನಾಡಬೇಕೆಂದು ಆಗ್ರಹಿಸಿದರು. ಮುಖಂಡರಾದ ಎಂ.ಕಾಟನ್ ಪಾಷಾ, ಕೃಷ್ಣ ಇಟ್ಟಂಗಿ, ಪೀರ್‌ಸಾಬ್, ಸಲೀಂ ಅಳವಂಡಿ ಇದ್ದರು.

    ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಆಡಳಿತ ಪಕ್ಷದ ಶಾಸಕರು, ಮಂತ್ರಿಗಳು, ಉಸ್ತುವಾರಿ ಸಚಿವರು ಜನರ ಕಷ್ಟ ಕೇಳುತ್ತಿಲ್ಲ. ಅಧಿಕಾರಿಗಳ ಸಭೆ ನಡೆಸಿಲ್ಲ. ಜನರಿಗೆ ಇವರ ಆಡಳಿತ ಬೆಸರ ತರಿಸಿದೆ. ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ.

    -ಶಿವರಾಜ ತಂಗಡಗಿ. ಡಿಸಿಸಿ ಅಧ್ಯಕ್ಷ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts