More

    ಅವರು ಮನವಿ ಕೊಡಲು ಬಂದವರೋ ರೌಡಿಸಂ ಮಾಡಲು ಬಂದವರೋ: ಎಚ್​​ಡಿಕೆ ಗರಂ

    ಧಾರವಾಡ: ಕಾರಿಗೆ ಮುತ್ತಿಗೆ ಹಾಕಿ, ಗದ್ದಲವೆಬ್ಬಿಸಿದ ಪಿಎಸ್​ಐ ಹುದ್ದೆ ನೇಮಕಾತಿಯಿಂದ ವಂಚಿತರಾದ ಅಭ್ಯರ್ಥಿಗಳ ವರ್ತನೆ ವಿರುದ್ಧ ಎಚ್​.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವಾರದಿಂದ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದು, ಇವರ ಸಮಸ್ಯೆ ಆಲಿಸಲು ಎಚ್​ಡಿಕೆ ಆಗಮಿಸಿದ್ದರು. ಈ ವೇಳೆ ಅಲ್ಲಿ ಜಮಾಯಿಸಿದ ಪಿಎಸ್​ಐ ಹುದ್ದೆ ವಂಚಿತ ಅಭ್ಯರ್ಥಿಗಳು, ನಮಗೆ ನ್ಯಾಯ ಕೊಡಿಸಿ ಎಂದು ಎಚ್​ಡಿಕೆ ಜೊತೆ ಮಾತಿನ ಚಕಮಕಿ ನಡೆಸಿದರು. ಇದೀಗ ಈ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಇವರೋ ರೌಡಿಸಂ ಮಾಡಲು ಬಂದಿದ್ದವರಾ ಎಂದು ಪ್ರಶ್ನಿಸಿದ್ದಾರೆ.


    ಮನವಿ ಕೊಡಲು ಬರುವವರು ಆ ರೀತಿ ನಡೆದುಕೊಳ್ಳುತ್ತಾರಾ. ಅಲ್ಲಿ ದೊಂಬಿ ಎಬ್ಬಿಸಲು ಆಯೋಜನೆ ಮಾಡಿ ಯಾರೋ ಕಳುಹಿಸಿದ್ದಾರೆ. ಅದಕ್ಕೆ ನಾನು ಪಾಲುದಾರನಾಗಲ್ಲ, ನಾನು ಬಹಳ ಜನರನ್ನು ನೋಡಿದ್ದೇನೆ. ಈ ಆಟ ನನ್ನ ಹತ್ತಿರ ನಡೆಯೊಲ್ಲ ಅಂತಾ ಬಿಜೆಪಿ ನಾಯಕರಿಗೆ ಹೇಳುತ್ತೇನೆ.

    ನಾನು ಅಲ್ಲಿಗೆ ಬರೋದು ಯಾರಿಗೆ ಗೊತ್ತಿತ್ತು, ಯಾಕೆ ಇವರೆಲ್ಲಾ ಬಂದರು, ಅವರನ್ನು ಕಳುಹಿಸಿದ್ದು ಯಾರು, ಆರಂಭದಲ್ಲೇ ಇಬ್ಬರ ಮನವಿಯನ್ನು ಆಲಿಸಿದ್ದೇನೆ. ಆ ಬಳಿಕ ಏತಕ್ಕೆ ಗುಂಪು ಕಟ್ಟಿ ನಿಲ್ಲಬೇಕಿತ್ತು. ಗಲಭೆಕೋರರ ರೀತಿ ನುಗ್ಗಿದ್ದಾರೆ. ಹಾಗಾದ್ರೆ ಇವರೆಲ್ಲಾ ಯಾರು ಎಂದು ಪ್ರಶ್ನಿಸಿದ್ದಾರೆ.


    ಮನವಿ ಮಾಡಲು ಬಂದವರು ವಾಹನದ ಮೇಲೆ ನುಗ್ಗಿದ್ದಾರೆ. ಹಾಗಾಗಿ ನನ್ನ ಭದ್ರತೆಯವರು ಅವರನ್ನು ಸೈಡಿಗೆ ತಳ್ಳಿದ್ದಾರೆ ಅಷ್ಟೇ. ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ ಹಾಗಾದರೆ ಯಾರವರು, ಹಾಗಿದ್ದವರು ನ್ಯಾಯ ಕೇಳಲು ಮೋದಿ ಬಳಿ ಹೋಗಬೇಕಿತ್ತು. ನನ್ನ ಬಳಿ ಏಕೆ ಬಂದರು ಎಂದು ಕಿಡಿಕಾರಿದ್ದಾರೆ. (ದಿಗ್ವಿಜಯ ನ್ಯೂಸ್​)

    PSI ಹುದ್ದೆ ನೇಮಕಾತಿಯಿಂದ ವಂಚಿತರಾದ ಅಭ್ಯರ್ಥಿಗಳಿಂದ HDK ಕಾರಿಗೆ ಮುತ್ತಿಗೆ ಹಾಕಲು ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts