More

    ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಒದಗಿಸಿ: ಶಾಸಕ ಆರಗ ಜ್ಞಾನೇಂದ್ರ

    ತೀರ್ಥಹಳ್ಳಿ: ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದಾಗಿ ಪ್ರಸ್ತುತ ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುವ ವಾತಾವರಣ ನಿರ್ಮಾಣವಾಗುತ್ತಿದೆ. ಈ ಮನಃಸ್ಥಿತಿಯನ್ನು ಬದಲಾಯಿಸಿ ವಿದ್ಯಾರ್ಥಿಗಳಲ್ಲಿ ನೈತಿಕತೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಮೂಡಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ತಾಲೂಕಿನ ನೊಣಬೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ನೌಕರಿಗಾಗಿ ಶಿಕ್ಷಣ ಎಂಬ ಮನೋಭಾವ ಪಾಲಕರಲ್ಲಿ ಬದಲಾಗಬೇಕಿದೆ. ಶಾಲೆಗಳು ನೌಕರಿಯನ್ನು ಸೃಷ್ಟಿಸುವ ಕಾರ್ಖಾನೆಗಳಾಗದೇ ದೇಶದ ಭವಿಷ್ಯ ನಿರ್ಮಿಸುವ ವ್ಯಕ್ತಿ ನಿರ್ಮಾಣದ ಕೇಂದ್ರಗಳಾಗಬೇಕು ಎಂದು ಹೇಳಿದರು.
    ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ವಿಚಾರಗಳಲ್ಲದೇ ನೈತಿಕತೆಯೊಂದಿಗೆ ಮಾನವೀಯ ಮೌಲ್ಯಗಳನ್ನೂ ಬೋಽಸುವ ಅಗತ್ಯ ಹಿಂದಿಗಿAತಲೂ ಇಂದು ಅಗತ್ಯವಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮಹಾಭಾರತದ ಏಕಲವ್ಯನಂತಹ ಆದರ್ಶ ವ್ಯಕ್ತಿಗಳ ವ್ಯಕ್ತಿತ್ವವನ್ನು ಇಂದಿನ ಮಕ್ಕಳಿಗೆ ಬೋಽಸಿ ಮಕ್ಕಳನ್ನು ಸಂಸ್ಕಾರವAತರನ್ನಾಗಿ ರೂಪಿಸುವ ಬದ್ಧತೆಯನ್ನು ಶಿಕ್ಷಕರು ಹೊಂದಬೇಕು ಎಂದು ಆಗ್ರಹಿಸಿದರು.
    ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಮದ್ ರಫೀಕ್ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ನಾಗರಾಜ್, ಬಿಇಒ ವೈ. ಗಣೇಶ್, ತಾಪಂ ಮಾಜಿ ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಲಕ್ಷಿ÷್ಮÃ ಉಮೇಶ್, ಪ್ರಶಾಂತ್ ಕುಕ್ಕೆ, ಮುಖ್ಯ ಶಿಕ್ಷಕಿ ಮಂಜುಳಾ, ಶಶಿರೇಖಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts