More

    ಗುಣಮಟ್ಟದ ಶಿಕ್ಷಣ ಕೊಡಿಸಿ ಮಕ್ಕಳ ಭವಿಷ್ಯ ರೂಪಿಸಿ: ಶಾಸಕ ಬೇಳೂರು

    ಬ್ಯಾಕೋಡು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

    ಸಾಗರ ತಾಲೂಕಿನ ಬ್ಯಾಕೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡಿ ಬೆಳೆಸಬೇಕು. ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಅವರಿಗೆ ನೀಡುವ ನಿಜವಾದ ಆಸ್ತಿ ಎಂದರು.
    ಕುದರೂರು ಗ್ರಾಪಂ ಅಧ್ಯಕ್ಷೆ ಸರಸ್ವತಿ ಗಣಪತಿ ಮಾತನಾಡಿ, ಶಾಲೆಯು ದೇವಸ್ಥಾನವಿದ್ದಂತೆ. ಮಕ್ಕಳು ದೇವರ ಸ್ವರೂಪ. ಪಾಲಕರು ತಮ್ಮ ಮಕ್ಕಳು ಯಾವ ವಿಚಾರದಲ್ಲಿ ಎಡವುತ್ತಿದ್ದಾರೆ ಎನ್ನುವುದನ್ನು ಗಮನಿಸಿ ಸರಿಪಡಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
    ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣಪತಿ ಶಿಗ್ಗಲು ಮಾತನಾಡಿ, ಬ್ಯಾಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರವಾಗಿಟ್ಟುಕೊAಡು ಕೆಪಿಎಸ್ ಶಾಲೆಯನ್ನಾಗಿ ಮಾರ್ಪಾಡು ಮಾಡಿ ಉತ್ತಮ ಸಾರಿಗೆ ವ್ಯವಸ್ಥೆ ನೀಡಿ ಶಾಲೆಯ ಬಲವರ್ಧನೆಗೆ ಸಹಕಾರ ನೀಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.
    ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್ ಬೊಬ್ಬಿಗೆ ಮತನಾಡಿ, ಕಳೆದೆರಡು ವರ್ಷಗಳಿಂದ ಬ್ಯಾಕೋಡು ಉಪ ಠಾಣೆಯು ಕಟ್ಟಡವಿಲ್ಲದೆ ಶಾಲಾ ಆವರಣದಲ್ಲಿರುವ ಕಟ್ಟಡವನ್ನು ಬಳಸುತ್ತಿದ್ದು ಇದರಿಂದ ಶಾಲೆಯಲ್ಲಿ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಹೊಸ ಪೊಲೀಸ್ ಠಾಣೆಯನ್ನು ಮಂಜೂರು ಮಾಡಿ ಶಾಲೆಯನ್ನು ಈ ಸಂಕಷ್ಟರಿAದ ಮುಕ್ತಗೊಳಸಬೇಕೆಂದು ಮನವಿ ಮಾಡಿದರು.
    ದಾನಿಗಳಾದ ಕೃಷ್ಣ ಭಂಡಾರಿ ತುಮರಿ, ಬ್ಯಾಕೋಡು ಬಾಲಕಿಯರ ನಿಲಯ ಪಾಲಕ ಚಂದ್ರರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಽಕಾರಿ ಶಾಂತಾನಾಯಕ್, ಪದ್ಮರಾಜ್ ಜೈನ್, ಅತಿಥಿ ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿ ಗೌರವಿಸಲಾಯಿತು.
    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣಪತಿ ಶಿಗ್ಗಲು, ಕ್ಷೇತ್ರ ಶಿಕ್ಷಣಾಽಕಾರಿ ಪರಶುರಾಮಪ್ಪ, ಗ್ರಾಪಂ ಸದಸ್ಯ ಸುಧಾಕರ್ ಸಸಿಗೊಳ್ಳಿ, ಪಿಡಿಒ ವಿಶ್ವನಾಥ ಪಟ್ಟಣಶೆಟ್ಟಿ, ಸಿಆರ್‌ಪಿಗಳಾದ ಚಂದ್ರಪ್ಪ ಅಳೂರು, ಪ್ರಸನ್ನಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts