More

  ಆಸ್ಪತ್ರೆಯಲ್ಲಿಯೇ ಊಟ, ಉಪಾಹಾರ ನೀಡಿ

  ಭಟ್ಕಳ: ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡವರು ಬರುತ್ತಾರೆ. ಅವರಿಗೆ ಹೊರಗಿನಿಂದ ಔಷಧ ತರುವಂತೆ ಚೀಟಿ ಬರೆಯಬೇಡಿ. ಅಷ್ಟೇ ಅಲ್ಲ ಅವರಿಗೆ ಊಟ, ಉಪಾಹಾರವನ್ನು ಇನ್ಮುಂದೆ ಆಸ್ಪತ್ರೆಗಳಲ್ಲಿಯೇ ಕೊಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

  ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಊಟ, ಉಪಾಹಾರ ನೀಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

  ಜಿಲ್ಲೆಯ ವಿವಿಧೆಡೆಯಿಂದ ಬಹುತೇಕ ಜನರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಸರ್ಕಾರ ಅವರಿಗೆ ಎಲ್ಲ ಥರದ ಚಿಕಿತ್ಸೆ ನೀಡಲು ಬದ್ಧವಾಗಿದೆ. ಮುಂದಿನ ದಿನಗಳಿಂದ ಇಲ್ಲಿ ದಾಖಲಾಗುವ ರೋಗಿಗಳಿಗೂ ಬೆಳಗ್ಗೆ ಗುಣಮಟ್ಟದ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸಬೇಕು. ಉತ್ತಮ ಗುಣಮಟ್ಟದ ಆಹಾರವನ್ನು ನಮ್ಮ ದರಕ್ಕೆ ನೀಡಲು ಯಾರೇ ಸಿದ್ಧರಿದ್ದರೂ ಅವರಿಗೆ ಅವಕಾಶ ನೀಡಲಾಗುವುದು ಎಂದರು.

  ತಾಲೂಕು ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ಹಿಂದೆ ಒಂದು ಬಾರಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಕಾನೂನಿನ ತೊಡಕಿನಿಂದ ಇದು ರದ್ದಾಗಿತ್ತು. ಸಚಿವ ಮಂಕಾಳ ವೈದ್ಯರ ಬಳಿ ರ್ಚಚಿಸಿದಾಗ ಮತ್ತೆ ಇದನ್ನು ಪ್ರಾರಂಭಿಸುವಂತೆ ಸೂಚಿಸಿದ್ದು, ಶನಿವಾರದಿಂದ ಮತ್ತೆ ಆರಂಭಿಸಲಾಗಿದೆ ಎಂದರು. ವೈದ್ಯ ಸುರಕ್ಷಿತ ಶೆಟ್ಟಿ, ಸತೀಶಕುಮಾರ, ಲಕ್ಷ್ಮೀಶ ನಾಯ್ಕ, ಕಮಲಾ ನಾಯ್ಕ, ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಸಾರ್ವಜನಿಕರು ಇದ್ದರು.

  ಲ್ಯಾಬ್ ಟೆಕ್ನಿಶಿಯನ್ ಹುದ್ದೆ ಸ್ಥಳದಲ್ಲೇ ಮಂಜೂರು

  ಆಸ್ಪತ್ರೆಯಲ್ಲಿ ನಿತ್ಯ ನೂರಾರು ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಅವರಿಗೆ ರಕ್ತ ಪರೀಕ್ಷೆ ಮಾಡಲು ಎಲ್ಲ ಸೌಕರ್ಯವಿದ್ದರೂ ಲ್ಯಾಬ್ ಟೆಕ್ನಿಶಿಯನ್ ಇಲ್ಲ. ಇದರಿಂದ ಬಡರೋಗಿಗಳು ದುಬಾರಿ ಹಣ ತೆತ್ತು ಹೊರಗೆ ರಕ್ತ ಪರೀಕ್ಷೆ ಮಾಡಲು ತೆರಳುವ ಸ್ಥಿತಿ ಇದೆ ಎಂದು ಟಿಎಚ್​ಒ ಡಾ. ಸವಿತಾ ಕಾಮತ ಸಚಿವರ ಬಳಿ ದೂರಿದರು. ಕೂಡಲೇ ಡಿಎಚ್​ಒ ಅವರಿಗೆ ಕರೆ ಮಾಡಿದ ಮಂಕಾಳ ವೈದ್ಯ ಆಸ್ಪತ್ರೆಗೆ ಅವಶ್ಯವಿರುವ ಹುದ್ದೆ ಮಂಜೂರಿ ಮಾಡುವಂತೆ ಸೂಚಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts