More

    ಅಡಕೆ, ಬಾಳೆಗೆ ಬೆಳೆ ವಿಮೆ ಕಲ್ಪಿಸಿ

    ಶಿಕಾರಿಪುರ: ಅಡಕೆ, ಶುಂಠಿ, ಕಾಳುಮೆಣಸು ಮತ್ತು ಬಾಳೆಗೆ ಬೆಳೆವಿಮೆ ಮಾಡಿಸಲು ಅವಕಾಶ ಕಲ್ಪಿಸದೆ ಇರುವುದನ್ನು ಖಂಡಿಸಿ ಅಡಕೆ ಅಭಿವೃದ್ಧಿ ಸಂಸ್ಕರಣ ಮಾರಾಟ ಸಹಕಾರ ಸಂಘದ ಸದಸ್ಯರು ಗುರುವಾರ ತಹಸೀಲ್ದಾರ್ ಮೂಲಕ ಜಿ¯್ಲÁಽಕಾರಿಗಳಿಗೆ ಮತ್ತು ತೋಟಗಾರಿಕೆ ಇಲಾಖೆ ಅಽಕಾರಿಗಳಿಗೆ ಮನವಿ ಸಲ್ಲಿಸಿದರು.

    ಸ್ಯಾಮ್ಕೋಸ್ ಅಧ್ಯಕ್ಷ ಬಿ.ಚಂದ್ರಪ್ಪ ಮಾತನಾಡಿ, ಈ ಬಾರಿ ಸಕಾಲಕ್ಕೆ ಮಳೆ ಬಂದಿಲ್ಲ. ಜೂನ್ ತಿಂಗಳು ಸಂಪೂರ್ಣ ಮಳೆಯಿಲ್ಲ. ಜುಲೈ ತಿಂಗಳಲ್ಲಿ ಮಳೆ ಪ್ರಾರಂಭವಾಗಿದೆ. ಉತ್ತಮ ಮಳೆಯಾದರೆ ಪರವಾಗಿಲ್ಲ. ಕೈಗೆ -Àಸಲು ಸಿಗುತ್ತದೆ. ಇಲ್ಲದಿದ್ದರೆ ತುಂಬ ಕಷ್ಟವಾಗಲಿದೆ. ಸಂಬAಧಪಟ್ಟ ಅಽಕಾರಿಗಳು ಕೂಡಲೆ ಅಡಕೆ, ಶುಂಠಿ, ಕಾಳುಮೆಣಸು ಮತ್ತು ಬಾಳೆಗೆ ಬೆಳೆವಿಮೆ ಮಾಡಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
    ರೈತರು ವರ್ಷಕ್ಕೆ ಸಾವಿರಾರು ಎಕರೆ ಹೊಸ ತೋಟಗಳನ್ನು ಮಾಡುತ್ತಿz್ದÁರೆ. ಮಳೆ ಬಾರದಿದ್ದರೆ ಕೆರೆ-ಕಟ್ಟೆಗಳು ತುಂಬುವುದಿಲ್ಲ. ಕೊಳವೆಬಾವಿಗಳು ಬತ್ತುತ್ತವೆ. ಇದರಿಂದಾಗಿ ಸಕಾಲದಲ್ಲಿ ನೀರು ದೊರೆಯದೆ ರೈತರಿಗೆ ಉತ್ತಮ ಗುಣಮಟ್ಟದ -Àಸಲು ದೊರೆಯುವುದಿಲ್ಲ. ಇಳುವರಿ ಸಹ ಕುಂಠಿತವಾಗುತ್ತದೆ ಎಂದರು.
    ಉಪಾಧ್ಯಕ್ಷ ನಾಗರಾಜಯ್ಯ, ಸದಸ್ಯರಾದ ಮುತ್ತುಗೌಡ, ಪೂರ್ಣಿಮಾ ಸಿದ್ದಪ್ಪ, ಮುಖೇಶಪ್ಪ, ಬಸನಗೌಡ, ಎನ್.ರಾಜು, ಭೀಮಾನಾಯ್ಕ್, ಸವಿತಾ ಸುರೇಶ, ಬಸವರಾಜಪ್ಪ, ಹೇಮಪ್ಪ, ಮಲ್ಲಿಕಾರ್ಜುನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts