More

    ಜೈನಮುನಿಗಳಿಗೆ ಸೂಕ್ತ ಭದ್ರತೆ ಕೊಡಿ

    ಸಿಂದಗಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಹಾಗೂ ಜೈನಮುನಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಜೈನ ಸಮುದಾಯವರು ತಹಸೀಲ್ದಾರ್ ನಿಂಗಣ್ಣ ಬಿರಾದಾರ ಅವರ ಮೂಲಕ ಶುಕ್ರವಾರ ಸಿಎಂಗೆ ಮನವಿ ಸಲ್ಲಿಸಿದರು.

    ಸಮಾಜದ ಹಿರಿಯರಾದ ಎನ್.ಆರ್. ಪೋರವಾಲ ಮಾತನಾಡಿ, ಜೀವಿಸು, ಜೀವಿಸಲು ಬಿಡು ಎಂಬ ಧ್ಯೇಯದೊಂದಿಗೆ ಅಹಿಂಸಾ ಮಾರ್ಗದೊಂದಿಗೆ ಬದುಕು ನಡೆಸಿಕೊಂಡು ಬರುವ ನಾವು ಮತ್ತು ನಮ್ಮ ಸಮಾಜದ ಮುನಿಗಳಿಗೆ, ಮಾತಾಜಿಯವರಿಗೆ ಸರ್ಕಾರ ಸೂಕ್ತ ಭದ್ರತೆ ಕೊಟ್ಟು ಜೈನ ಸಮುದಾಯವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

    ಚಿಕ್ಕೋಡಿಯ ಜೈನಮುನಿಗಳನ್ನು ನಿರ್ದಯವಾಗಿ ಕೊಂದ ಘಟನೆ ರಾಜ್ಯದ ಜೈನ ಸಮುದಾಯವನ್ನು ಭೀತಿಗೆ ದೂಡಿದೆ. ಇಂತಹ ಘಟನೆ ಭವಿಷ್ಯದಲ್ಲಿ ನಡೆಯದಂತೆ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಜೈನ ಸಮುದಾಯದಲ್ಲಿ ಮೂಡಿದ ಆತಂಕ ನಿವಾರಿಸಲು ಸೂಕ್ತ ಕಾನೂನು ದಂಡನೆ ಮೂಲಕ ಅಪರಾಧಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

    ಮನವಿ ಸಲ್ಲಿಸುವ ಸಮಯದಲ್ಲಿ ಡಾ. ಅಭಯ ಕಾಗಿ, ಮೋಹಿತ ಜೈನ್, ಡಿ.ಪಿ. ಶೆಟ್ಟಿ, ಜಿನೇಂದರ ಮಳ್ಳಿ, ನಾಗಪ್ಪ ಮಳ್ಳಿ, ಭರಮಣ್ಣ ಸುರಪುರ. ಬಾಹುಬಲಿ ಮಳ್ಳಿ, ಹೇಮಾ ಕಾಸಾರ, ಜಗದೀಶ ಭೋಗಾರ, ವಿ.ಡಿ. ಪಾಟೀಲ, ಬಿ.ಸಿ. ಪಾಟೀಲ, ಸಿದ್ದರಾಯ ಒಣಕುದರಿ, ಬಾಹುಬಲಿ ಒಣಕುದರಿ, ಪ್ರವೀಣ ಒಣಕುದರಿ, ಸಂಪತ್, ಪಾಶ್ವನಾಥ ಕಾಸಾರ, ಪುಷ್ಪ ಪೋರವಾಲ, ಅಖಿಲ ಪೋರವಾಲ, ಕಿರಣ ಪೋರವಾಲ, ಭರತೇಶ ಧನಪಾಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts