More

    ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಧೋನಿ ಕುರಿತು ಪತ್ನಿ ಸಾಕ್ಷಿಯಿಂದ ಭಾವುಕ ಸಂದೇಶ!

    ರಾಂಚಿ: ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆಯೇ ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುವ ಮೂಲಕ ಕ್ರೀಡಾಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. ನೆಚ್ಚಿನ ಆಟಗಾರ ನಿವೃತ್ತಿಯ ಮಾತು ಕೇಳಿ ಸಾಕಷ್ಟು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಧೋನಿ ಪತ್ನಿ ಸಾಕ್ಷಿಯು ಸಹ ಹೊರತಾಗಿಲ್ಲ.

    ಪತಿಯ ವಿದಾಯಕ್ಕೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಾಕ್ಷಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ನೀವೇನು ಸಾಧನೆ ಮಾಡಿದ್ದೀರೋ ಅದರ ಬಗ್ಗೆ ನೀವು ಹೆಮ್ಮೆ ಪಡಬೇಕು. ಆಟದಲ್ಲಿ ಉತ್ತಮವಾದುದ್ದನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ನಿಮ್ಮ ಸಾಧನೆ ಹಾಗೂ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮ ನೆಚ್ಚಿನ ಆಟಕ್ಕೆ ಬಹಳ ನೋವಿನಿಂದ ವಿದಾಯ ಹೇಳಿದ್ದೀರಿ ಎಂಬುದು ನನಗೆ ತಿಳಿದಿದೆ. ಏನೇ ಆಗಿರಲಿ ಮುಂದಿನ ನಿಮ್ಮ ಜೀವನ ಆರೋಗ್ಯ, ಸಂತೋಷ ಮತ್ತು ಅದ್ಭುತಗಳಿಂದ ಕೂಡಿರಲೆಂದು ಸಾಕ್ಷಿ ಶುಭ ಹಾರೈಸಿದ್ದಾರೆ. ಇದರೊಂದಿಗೆ ಧೋನಿ ಅವರು ಸೂರ್ಯಾಸ್ತದ ಕಡೆ ನೋಡುತ್ತಿರುವ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ.

    ಅಂದಹಾಗೆ ಧೋನಿ 2014ರಲ್ಲೇ ಟೆಸ್ಟ್​ ಕ್ರಿಕೆಟ್​ಗೆ​ ಗುಡ್​ಬೈ ಹೇಳಿದ್ದರು. ನಿನ್ನೆ ಎಲ್ಲರೂ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವಾಗಲೇ ಧೋನಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು.

    ಧೋನಿ 350 ಏಕದಿನ ಪಂದ್ಯ 98 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲಿ 10 ಶತಕ ಹಾಗೂ 73 ಅರ್ಧಶತಕಗಳೊಂದಿಗೆ 50.57 ಸರಾಸರಿಯಲ್ಲಿ 10,773 ರನ್​ ಗಳಿಸಿದ್ದಾರೆ. ಟಿ20ಯಲ್ಲಿ 2 ಅರ್ಧಶತಕಗಳೊಂದಿಗೆ 37.60 ರನ್​ ಸರಾಸರಿಯಲ್ಲಿ 1,617 ರನ್​ ಕಲೆ ಹಾಕಿದ್ದಾರೆ. (ಏಜೆನ್ಸೀಸ್​)

    ಥ್ಯಾಂಕ್ ಯೂ ಧೋನಿ: 15 ವರ್ಷದ ಟೀಂ ಇಂಡಿಯಾ ಜರ್ನಿಗೆ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts