More

    ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

    ಕೆ.ಆರ್.ಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ನೂರಾರು ನೌಕರರು ಜಮಾವಣೆಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎಲ್ಲ ಸಿಬ್ಬಂದಿಗೂ ಕನಿಷ್ಠ ವೇತನ ನೀಡಬೇಕು. ಅನುದಾನ, ವಸೂಲಾತಿ, ತೆರಿಗೆ ಸೇರಿಸಿ ನೌಕರರಿಗೆ ವೇತನ ಕೊಡಬೇಕು. 20 ತಿಂಗಳಿಂದ ಕೆಲವು ನೌಕರರಿಗೆ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ನೀಡಬೇಕು. ನಿವೃತ್ತಿ ವೇತನ, ಗ್ರಾಚ್ಯುಟಿ, ಅನುಕಂಪ ಉಪದಾನ ಸೌಲಭ್ಯ ನೀಡಬೇಕು ಎಂದು ಸಿಐಟಿಯು ರಾಜ್ಯ ಪ್ರದಾನ ಕಾರ್ಯದರ್ಶಿ ರಾಮಕೃಷ್ಣ ಸರ್ಕಾರವನ್ನು ಒತ್ತಾಯಿಸಿದರು.

    ತಿಂಗಳ ನಿಗದಿತ ಸಮಯದಲ್ಲಿ ವೇತನ ನೀಡಬೇಕು, 15ನೇ ಹಣಕಾಸಿನಲ್ಲಿ ಶೇ.10ರಷ್ಟು ಅನುದಾನವನ್ನು ನೌಕರರಿಗೆ ವೇತನಕ್ಕಾಗಿ ಮೀಡಲಿಡಬೇಕು. ಸೇವಾ ಪುಸ್ತಕ ತೆರೆಯಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ತಾಪಂ ನರೇಗಾ ಸಹಾಯಕ ನಿರ್ದೇಶಕಿ ಮೇನಿಕಾದೇವಿ ಅವರಿಗೆ ಸಲ್ಲಿಸಿ ಪ್ರತಿಭಟನೆ ಹಿಂಪಡೆದರು.

    ಗ್ರಾಪಂ ನೌಕರರ ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಎಂ.ಕೆ.ಕುಮಾರ್, ಪ್ರಧಾನ ಕಾರ್ಯದರ್ಶಿ ನಂಜಯ್ಯ, ಮಂಜು, ಸುರೇಶ್, ಗೋಪಾಲ್, ಆನಂದರಾವ್, ವೆಂಕಟೇಶ್, ಸ್ವಾಮಿಗೌಡ, ರುದ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts