More

    ಶಾಲೆ ಬೇಡ ಎಂದ ನಾಗರಿಕರು…! ಇಲ್ಲಿದೆ ನೋಡಿ ಕಾರಣ…

    ಬೆಂಗಳೂರು: ಈಗಲೇ ಬೆಂಗಳೂರಿನಲ್ಲಿ ಮಕ್ಕಳಿಗೆ ಆಟವಾಡಲು ಜಾಗವಿಲ್ಲ, ಯಾವ ಏರಿಯಾಗೆ ಹೋದರೂ ಒಂದು ಸರಿಯಾದ ಮೈದಾನ ಕಾಣುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ರಾಜರಾಜೇಶ್ವರಿ ನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನದಲ್ಲಿ ಶಾಲೆ ನಿರ್ಮಾಣವಾಗತೊಡಗಿದೆ. ಆದರೆ ಸ್ಥಳೀಯರು ಇದರ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಆಟದ ಮೈದಾನದ ಉಳಿವಿಗೆ ಸಾರ್ವಜನಿಕರ ಜತೆ ಮಕ್ಕಳು ಕೂಡ ಸೇರಿ ಘೋಷಣೆ ಕೂಗಿ ಸರ್ಕಾರದ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.

    2006ರಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದ್ದ 1.6 ಎಕರೆ ವಿಸ್ತೀರ್ಣದ ಕೆಂಪೇಗೌಡ ಆಟದ ಮೈದಾನ ಇದು. ಬೆಂಗಳೂರು ದಕ್ಷಿಣದ ಕೆಂಗೇರಿ ಹೋಬಳಿ ಹಲಗೆವಡೇರಹಳ್ಳಿ ಸರ್ವೆ ಸಂಖ್ಯೆ 223 ಮತ್ತು 224 ರಲ್ಲಿದೆ. ಎಲ್ಲಾ ವಯಸ್ಸಿನ ಜನರಿಗೆ ಕ್ರೀಡಾ ಚಟುವಟಿಕೆಗಳಿಗೆ ಲಭ್ಯವಿರುವ ಏಕೈಕ ಸ್ಥಳ ಇದು. “ಈ ಕ್ರೀಡಾಂಗಣದಲ್ಲಿ 30 ವರ್ಷದಿಂದ ಮಕ್ಕಳು ಆಟ ವಾಡೋದನ್ನ ನೋಡಿದ್ದೇವೆ, ನಮಗೆ ಇರೋದು ಒಂದೇ ಒಂದು ಆಟದ ಮೈದಾನ. ಫಿಟ್ ಇಂಡಿಯಾ ಅಭಿಯಾನ ಮಾಡುತ್ತಾರೆ, ಆದ್ರೆ ಮಕ್ಕಳು ಆಟ ಆಡೋಕೆ ಇರೋ ಗ್ರೌಂಡ್​​ ಹಾಳು ಮಾಡುತ್ತಾರೆ. ಈ ಗ್ರೌಂಡ್ ಬಿಟ್ಟು ಬೇರೆ ಕಡೆ ಹೋಗಿ ಶಾಲೆ ಕಟ್ಟಿ” ಎಂದು ಆರ್.ಆರ್. ನಗರ ನಿವಾಸಿ ವಿಶಾಲ್ ಸುರೇಶ್ ಕಿಡಿ ಕಾರಿದ್ದಾರೆ.

    ಲಕ್ಷಾಂತರ ಜನರು ಬಳಕೆ ಮಾಡೋ ಒಂದೇ ಒಂದು ಗ್ರೌಂಡ್ ಇದಾಗಿದ್ದು, ಇದರ ಜಾಗದಲ್ಲಿ ಶಾಲೆ ಬಂದರೆ ಯುವಕರು ತಮ್ಮ ಕ್ರೀಡಾ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಸ್ಥಳಾವಕಾಶದಿಂದ ವಂಚಿತರಾಗುತ್ತಾರೆ. ಆದ್ದರಿಂದ 155 ಎಕರೆ ವಿಸ್ತೀರ್ಣದ ವಸತಿ ಬಡಾವಣೆಯಲ್ಲಿ ಲಭ್ಯವಿರುವ ನಾಗರಿಕ ಸೌಲಭ್ಯಗಳಿರುವ ಯಾವುದಾದರೂ ಖಾಲಿ ಜಾಗದಲ್ಲಿ ಶಾಲೆ ನಿರ್ಮಿಸಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

    ಈ ಹೋರಾಟದಲ್ಲಿ ಸಾಮಾಜಿಕ ಕಾರ್ಯಕರ್ತ ಜೋಸೆಫ್ ಹೂವರ್ ಕೂಡ ಸಕ್ರಿಯರಾಗಿದ್ದಾರೆ, “ಸಿಎ ಸೈಟ್​​ನಲ್ಲಿ ಸಾಕಷ್ಟು ಜಾಗವಿದೆ, ಅಲ್ಲಿ ಹೋಗಿ ಶಾಲೆ ಕಟ್ಟಿ. ಅದನ್ನು ಬಿಟ್ಟು, ಇರೋ ಒಂದೇ ಒಂದು ಗ್ರೌಂಡ್ ಇದು. ಇದನ್ನ ಯಾಕೆ ಹಾಳು ಮಾಡ್ತೀರಾ? ಒಂದು ವಾರ ಸಮಯ ಕೊಡಿ ಅಂತ ಬಿಬಿಎಂಪಿಯವರು ಹೇಳ್ತಾರೆ, ಆದರೆ ನಮಗೆ ಅಲ್ಲಿಯವರೆಗೆ ಕಾಯೋಕೆ ಆಗಲ್ಲ, ದುಡ್ಡು ಮಾಡೋಕೆ ಇದೇ ಜಾಗ ಬೇಕಾ?” ಎಂದು ಜೋಸೆಫ್ ಹೂವರ್ ಪ್ರಶ್ನಿಸಿದ್ದಾರೆ. “ಪಕ್ಕದಲ್ಲಿ ಇರೋ ಖಾಲಿ ಜಾಗದಲ್ಲಿ ಹೋಗಿ ಶಾಲೆ ಕಟ್ಟಬಹುದು. ಬೇಕಾದ್ರೆ ಯಾವುದಾದರೂ ಕಂಪನಿಯ CSR ಫಂಡ್ಸ್ ಮೂಲಕ ಹಣವನ್ನು ತಂದು ಕೊಡ್ತೀವಿ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಟಿ-20 ವಿಶ್ವಕಪ್ ಫೈನಲ್; 2016ರಲ್ಲಿ ವಿಲನ್ ಆದ ಬೆನ್​​ಸ್ಟೋಕ್ಸ್​ 2022ರಲ್ಲಿ ಹೀರೋ….

    ಶಾಲೆಗಳಿಗೆ ವಿವೇಕ ಬಣ್ಣ…! 8 ಸಾವಿರ ಕೊಠಡಿಗಳು ಆಗಲಿವೆಯೇ ಕೇಸರಿಮಯ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts