More

    ಮಹಿಳಾ ಕೂಲಿ ಕಾರ್ವಿುಕರ ಪ್ರತಿಭಟನೆ

    ಬ್ಯಾಡಗಿ: ತಾಲೂಕಿನ ಕೂಲಿ ಕಾರ್ವಿುಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ಕೆಲಸ ಒದಗಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕರ್ನಾಟಕ ವ್ಯವಸಾಯ ಕಾರ್ವಿುಕರ ವೃತ್ತಿಪರ ತಾಲೂಕು ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

    ಸಂಘದ ಜಿಲ್ಲಾಧ್ಯಕ್ಷೆ ಕಾಮಾಕ್ಷಿ ರೇವಣಕರ ಮಾತನಾಡಿ, ಜಿಲ್ಲೆಯಾದ್ಯಂತ ಲಕ್ಷಾಂತರ ಜನರು ಕೂಲಿ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಕೂಲಿಕಾರರಿಗೆ 100 ದಿನಗಳ ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಿದೆ ಎಂದು ಹೇಳುತ್ತಾರೆ. ಆದರೆ, ಪಂಚಾಯಿತಿಯಲ್ಲಿ ಕೇಳಿದರೆ ನಮಗೆ ಆದೇಶ ಬಂದಿಲ್ಲ ಎನ್ನುತ್ತಾರೆ. ಸರ್ಕಾರ ನೈಜ ಸುತ್ತೋಲೆ ಹೊರಡಿಸಲಿ ಎಂದರು.

    ಅಧಿಕಾರಿಗಳು ಉದ್ಯೋಗ ನೀಡದೆ ಸಬೂಬು ಹೇಳುತ್ತಿದ್ದಾರೆ. ಇನ್ನು ಕೆಲ ಅಧಿಕಾರಿಗಳು ದೂರದ ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಕೆಲಸ ತೋರಿಸಿ, ಮಹಿಳೆಯರು ತೆರಳದಂತೆ ಮಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗೆ ಯಂತ್ರಗಳ ಬಳಕೆ ಮಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಉಪಾಧ್ಯಕ್ಷ ನಾಗರಾಜ ಮಲ್ಲೂರು ಮಾತನಾಡಿ, ಕಾರ್ವಿುಕ ಇಲಾಖೆ ದೈನಂದಿನ ಕೂಲಿ 413 ರೂ. ನಿಗದಿಪಡಿಸಿದೆ. ಆದರೆ, ಉದ್ಯೋಗ ಖಾತ್ರಿಯಡಿ 309 ರೂಪಾಯಿ ನೀಡುತ್ತಿದೆ. ಇದನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

    ಕೂಲಿ ಕಾರ್ವಿುಕರಾದ ಸೋಮಯ್ಯ ಹಿರೇಮಠ, ಪುಷ್ಪಾ ಹಿರೇಮಠ, ನಾಗರತ್ನಾ ಹೊಳಿಯಣ್ಣನವರ, ಪ್ರೇಮಾ ವಡ್ಡರ, ಭಾಗ್ಯ ಗಂಗನಕೊಪ್ಪ, ರೇಣುಕಾ ನೂರಣ್ಣನವರ, ಪಿ.ಎಂ. ಬಣಕಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts