More

    ರಾಜ್ಯದೆಲ್ಲ ಸಂಸದರ ಕಚೇರಿ ಎದುರು ಪ್ರತಿಭಟನೆ 23ರಂದು

    ಶಿರಸಿ: ಹಲವು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜ. 23ರಂದು ರಾಜ್ಯದೆಲ್ಲೆಡೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿ ಎದುರು ಪ್ರತಿಭಟನೆ ಮಾಡಲು ತೀರ್ವನಿಸಲಾಗಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷೆ ವರಲಕ್ಷ್ಮೀ ಹೇಳಿದರು.

    ನಗರದ ಕರ್ಜಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಅಂಗನವಾಡಿ, ಬಿಸಿಯೂಟ ನೌಕರರು ಒಂದು ದಿನದ ಕೆಲಸ ನಿಲ್ಲಿಸಿ ಹೋರಾಟ ಮಾಡಲಿದ್ದಾರೆ. 2013ರಿಂದ ಅಂಗನವಾಡಿಗೆ, 2000 ಇಸ್ವಿಯಿಂದ ಬಿಸಿಯೂಟದವರಿಗೆ ವೇತನ ಹೆಚ್ಚಳ ಮಾಡಿಲ್ಲ. ಕೆಲಸ ಮಾತ್ರ ಏರುತ್ತಿದೆ. ಅಂಗನವಾಡಿ, ಬಿಸಿಯೂಟದವರಿಗೆ ಬದುಕು ನಡೆಸುವುದೇ ಕಷ್ಟವಾಗಿದೆ. ಆಹಾರ, ಆರೋಗ್ಯ, ಉದ್ಯೋಗ ಭದ್ರತೆ ಒದಗಿಸಬೇಕು ಎಂದರು.

    ಮುಂಬರುವ ಬಜೆಟ್​ನಲ್ಲಾದರೂ ಅಂಗನವಾಡಿ, ಬಿಸಿಯೂಟದ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಕೊಡಬೇಕು. ಕಡಿತ ಮಾಡಿದ ಅನುದಾನ ವಾಪಸ್ ಕೊಡಬೇಕು ಎಂದರು.

    ಕಾರ್ವಿುಕರ ಪರವಾದ ಕಾನೂನು ಬರಬೇಕು. 31 ಸಾವಿರ ರೂ. ಸಮಾನ ಕನಿಷ್ಠ ವೇತನ ಜಾರಿ ಮಾಡಬೇಕು. ಏಕ ಧರ್ಮ, ಏಕ ಸಂಸ್ಕೃತಿ ಎನ್ನುವ ಕೇಂದ್ರ ಸರ್ಕಾರ ವೇತನದಲ್ಲೂ ಏಕತೆ ತರಬೇಕಾಗಿದೆ ಎಂದು ಆಗ್ರಹಿಸಿದರು. ಸಿ.ಆರ್. ಶಾನಭಾಗ ಮಾತನಾಡಿ, ಜನರಿಂದ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದರು. ಯಮುನಾ ಗಾಂವಕರ ಮಾತನಾಡಿ, ಪ್ರತಿ ತಾಲೂಕಿನಿಂದ ಸರಾಸರಿ 1 ಲಕ್ಷ ಸಹಿ ಸಂಗ್ರಹಿಸುವ ಆಂದೋಲನ ಮಾಡಲಾಗುವುದು ಎಂದರು. ಗಂಗಾ ನಾಯ್ಕ, ಮುತ್ತಾ ಪೂಜಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts