More

    ಗದಗ: ನಾಲ್ಕನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಚುನಾವಣಾ ಬಹಿಷ್ಕಾರದ ಎಚ್ಚರಿಕೆ

    ಗದಗ: ನಿವೇಶನ ಮತ್ತು ಹಕ್ಕು ಪತ್ರ ವಿತರಿಸಲು ಆಗ್ರಹಿಸಿ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಆರಂಭವಾಗಿರುವ ಧರಣಿ ಸತ್ಯಾಗ್ರಹ 4 ನೇ ದಿನಕ್ಕೆ ಕಾಲಿಟ್ಟಿದ್ದು, ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.
    ನಿವೇಶನ ಹಂಚಿಕೆಯಲ್ಲಿ ವಿಳಂಬ ಮತ್ತು ತಾರತಮ್ಯ ಆರೋಪಿಸಿ, ಹಕ್ಕು ಪತ್ರಕ್ಕೆ ಆಗ್ರಹಿಸಿ ಮಹಿಳಾ ಲಾನುಭವಿಗಳು ಗ್ರಾಪಂ ಆವರಣದಲ್ಲಿಯೇ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಾಪಂ ಅಧಿಕಾರಿಗಳು ಧರಣಿ ಹಿಂಪಡೆಯುವಂತೆ ಮನವಿ ಮಾಡಿದರೂ ಸಂಧಾನ ವಿಲವಾಯಿತು. ಈ ಸಂದರ್ಭದಲ್ಲಿ ಮಹಿಳೆಯರು ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದರು.
    ಧರಣಿಯ ನೇತೃತ್ವ ವಹಿಸಿರುವ ಸುವರ್ಣ ಹಟ್ಟಿ ಮಾತನಾಡಿ, ಕಳೆದ 4 ವರ್ಷಗಳಿಂದ ಹಕ್ಕು ಪತ್ರ ನೀಡುವ ಬಗ್ಗೆ ಅಧಿಕಾರಿಗಳು ಸುಳ್ಳ ಭರವಸೆ ನೀಡುತ್ತಿದ್ದಾರೆ. ಅಧಿಕಾರಗಳ ಮೇಲೆ ನಂಬಿಕೆ ಹೋಗಿದೆ. ಹಕ್ಕು ಪತ್ರ ಕೂಡಲೇ ನೀಡಬೇಕು. ಅಲ್ಲಿಯವರೆಗೂ ಧರಣಿ ಕೈ ಬೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಾಪಂ ಅಧಿಕಾರಿಗಳು ಮತ್ತು ಧರಣಿ ನಿರತ ಮಹಿಳೆಯರ ನಡುವೆ ಮಾತಿನ ಸಮರವೂ ಜರುಗಿತು. ಹಕ್ಕು ಪತ್ರ ಕೊಡುವ ಪ್ರಕ್ರೀಯೆಗೆ ಚಾಲನೆ ಇದ್ದು ಒಂದು ವಾರದೊಳಗಾಗಿ ಹಕ್ಕುಪತ್ರ ನೀಡುತ್ತೇವೆ ಎಂದು ತಾಪಂ ಅಧಿಕಾರಿಗಳು ಮನವಿ ಮಾಡಿಕೊಂಡರು. ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಧರಣಿಯನ್ನು ಮುಂದುವರಿಸಿದರು.
    ಗ್ರಾಪಂ ಅಧ್ಯೆ ಲಲಿತಾ ಗದಗಿ, ಉಪಾಧ್ಯ ರೇವಣಸಿದ್ದಪ್ಪ ಮುಳಗುಂದ, ಪಿಡಿಒ ಶಿವಲೀಲಾ ಅಂಗಡಿ, ಮಲ್ಲಪ್ಪ ದಂಡಿನ, ಮರಿಯಪ್ಪ ವಡ್ಡರ, ಮಾಳವ್ವ ಸೋಮನಕಟ್ಟಿ, ರೇಣವ್ವ ಶಿಗ್ಲಿ, ರತ್ನವ್ವ ಕುಂಬಾರ, ಅನ್ನರ್ಪೂಣವ್ವ ಕುಂಬಾರ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts