More

    ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ

    ಚಿತ್ರದುರ್ಗ: ಸಾಮಾಜಿಕ ಭದ್ರತೆ ಯೋಜನೆ ಪಿಂಚಣಿಯ ಮೊತ್ತವನ್ನು 3 ಸಾವಿರ ರೂ.ಗಳನ್ನು 5 ಸಾವಿರ ರೂ.ಗೆ ಹೆಚ್ಚಿಸುವಂತೆ ರಾಜ್ಯ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಕಾರ‌್ಯಕರ್ತರು ಡಿಸಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಬಡವರ ಜೀವನ ಕಷ್ಟವಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಪಿಂಚಣಿ ಮೊತ್ತ ಹೆಚ್ಚಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

    ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಕ್ಕುಪತ್ರಗಳಿಗೆ ನಿಗದಿಪಡಿಸಿರುವ ಶುಲ್ಕಕ್ಕಿಂತ ಒಂದು ಸಾವಿರ ರೂ. ಅಧಿಕ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾನಿರತರು, ಹೆಚ್ಚುವರಿ ಹಣವನ್ನು ಹಿಂತಿರುಗಿಸಬೇಕೆಂದು ಆಗ್ರಹಿಸಿ ಎಡಿಸಿ ಇ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.

    ನಗರದ 17ನೇ ವಾರ್ಡ್ ವ್ಯಾಪ್ತಿ ಆಶ್ರಯ ಬಡಾವಣೆ 1 ಮತ್ತು 2ನೇ ಲೇಔಟ್‌ನಲ್ಲಿ ನಿರ್ಮಿಸಿರುವ ಮನೆಗಳಲ್ಲಿ 20 ವರ್ಷಗಳಿಂದ ವಾಸವಿರುವವರಿಗೆ ತೀರುವಳಿ ಪತ್ರ, ಇ ಸ್ವತ್ತು ಕೊಟ್ಟು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

    ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ವಕೀಲರಾದ ಬಿ.ಕೆ.ರಹಮತ್‌ವುಲ್ಲಾ, ಫೈಜಾನುಲ್ಲಾ, ಎನ್.ರಂಗಸ್ವಾಮಿ, ಎಚ್.ಪ್ಯಾರೆಜಾನ್, ಮೈಲಾರಪ್ಪ, ಅಯೂಬ್ ಖಾನ್, ಇಮಾಂಸಾಬ್, ರುದ್ರಮುನಿ, ರತ್ನಮ್ಮ, ಲೀಲಾವತಿ, ಸರೋಜಮ್ಮ, ಶಬೀನಾಭಾನು, ಮಾರುತಿ, ಕೆ.ಎಚ್.ಜಯಪ್ರಕಾಶ್, ತಿಪ್ಪೇಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts