More

    ಇಂಡಿ ಜಿಲ್ಲೆಗಾಗಿ ಮಹಿಳಾ ಸಂಘ ಸಂಸ್ಥೆಗಳಿಂದ ಪ್ರತಿಭಟನೆ

    ಇಂಡಿ: ಇಂಡಿ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ ಮಹಿಳಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

    ಕಿತ್ತೂರ ಚನ್ನಮ್ಮ ಮಹಿಳಾ ವೇದಿಕೆ, ಅಕ್ಕಮಹಾದೇವಿ ಮಹಿಳಾ ವೇದಿಕೆ, ಸಾವಿತ್ರಿಬಾಯಿ ಫುಲೆ ಮಹಿಳಾ ವೇದಿಕೆ, ನ್ಯಾಯವಾದಿಗಳ ಮಹಿಳಾ ವೇದಿಕೆ ಸಂಘ, ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ವೇದಿಕೆ, ಗ್ರಾಪಂ ಅಧ್ಯಕ್ಷರ ಸಂಘದ ಮಹಿಳಾ ವೇದಿಕೆ, ಕದಳಿ ವೇದಿಕೆ, ಕಾಂಗ್ರೆಸ್ ಮಹಿಳಾ ಘಟಕ, ನಿವೃತ್ತ ನೌಕರರ ಮಹಿಳಾ ವೇದಿಕೆ, ಸತ್ಯ ಸಾಯಿಬಾಬಾ ಮಹಿಳಾ ವೇದಿಕೆ, ಧರ್ಮಸ್ಥಳ ಮಂಜುನಾಥ ಮಹಿಳಾ ವಿವಿಧ ಉದ್ದೇಶಗಳ ಸಂಘ, ಹಡಪದ ಅಪ್ಪಣ್ಣ ವಿವಿಧ ಉದ್ದೇಶ ಮಹಿಳಾ ವೇದಿಕೆ ಸೇರಿ ತಾಲೂಕಿನ ವಿವಿಧ ಮಹಿಳಾ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

    ಗ್ರಾಪಂ ಅಧ್ಯಕ್ಷರ ಸಂಘದ ಮಹಿಳಾ ವೇದಿಕೆಯ ಶೈಲಜಾ ಜಾಧವ, ಕದಳಿ ವೇದಿಕೆಯ ಶಶಿಕಲಾ ಬೆಟಗೇರಿ, ಕಾಂಗ್ರೆಸ್ ಮಹಿಳಾ ಘಟಕದ ನಿರ್ಮಲಾ ತಳಕೇರಿ ಮಾತನಾಡಿ, ರಾಜ್ಯದಲ್ಲಿ ಹೆಚ್ಚು ಜಿಲ್ಲೆಗಳಾದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಇಂಡಿ ತಾಲೂಕು ಸಮಗ್ರ ಅಭಿವೃದ್ಧಿಯಾಗಲು ಇಂಡಿ ಜಿಲ್ಲೆ ಆದಾಗ ಮಾತ್ರ ಸಾಧ್ಯ ಎಂದರು.

    ಜಿಲ್ಲೆ ಕೊಡಿ ಎಂಬುದು ಮಾತ್ರ ನಮ್ಮ ಕೂಗು, ಇದು ಪಕ್ಷಾತೀತ ಮತ್ತು ಜಾತ್ಯಾತೀತ ಕೂಗು. ನಾವು ಯಾವುದೇ ಅಪಸ್ವರ ಮಾಡುವುದಿಲ್ಲ. ಒಂದೇ ಕೂಗು, ಅದು ಜಿಲ್ಲಾ ಕೂಗು ಎಂದರು.

    ಪ್ರತಿಭಟನೆಯಲ್ಲಿ ಫಿರದೋಶ ಸುನ್ನೆವಾಲೆ, ರಾಧಾ ಕಾಂಬಳೆ, ರೇಣುಕಾ ಲೋಗಾಂವ, ಗಂಗಾಬಾಯಿ ದೇಸಾಯಿ, ಮಾಲನಬಿ ಚೌಧರಿ, ಜಯಶ್ರೀ ಕಾಲೇಭಾಗ, ಅಂಬಿಕಾ ಚನಗೊಂಡ, ವಿಮಲಾಬಾಯಿ ಪವಾರ, ಪದ್ಮಾಬಾಯಿ ರಾಠೋಡ, ಸುಗಂದಾ ಪಾಟೀಲ, ಶೋಭಾ ಚವ್ಹಾಣ, ಲಕ್ಷ್ಮೀ ನಾಯಿಕೊಡಿ, ಭಾರತಿ ಕಟ್ಟಿಮನಿ, ಸವಿತಾ ಕಾಂಬಳೆ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts