More

    ಗ್ರಾಹಕರಿಗೆ ಹೆಚ್ಚಿನ ದರ ವಿಧಿಸಿದ ಸೆಸ್ಕ್


    ವಿಜಯವಾಣಿ ಸುದ್ದಿಜಾಲ ಕುಶಾಲನಗರ
    ಗ್ರಾಹಕರಿಗೆ ಸೆಸ್ಕ್ ನಿಂದ ಹೆಚ್ಚಿನ ದರ ವಿಧಿಸಲಾಗುತ್ತಿದೆ ಎಂದು ಆರೋಪಿಸಿ ಭಾರತ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಕುಶಾಲನಗರದ ಸೆಸ್ಕ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ಮಾಡಲಾಯಿತು.
    ನೆಲ್ಲಿಹುದಿಕೇರಿ ಭಾಗದಲ್ಲಿರುವ ಬಹುತೇಕ ಮನೆಗಳ ಗ್ರಾಹಕರಿಗೆ ಅಧಿಕ ದರ ವಿಧಿಸಲಾಗಿದೆ. ಕೆಲವು ಮನೆಗಳ ಬಿಲ್ 10 ಸಾವಿರ ರೂ. ಮೀರಿದೆ. ಇದರಿಂದ ಬಡ ಗ್ರಾಹಕರು ಕಂಗಾಲಾಗಿದ್ದಾರೆ. ಮೊದಲೇ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಸೆಸ್ಕ್ ಅಧಿಕಾರಿಗಳ ಈ ಲೋಪದಿಂದ ತೊಂದರೆಯಾಗಿದೆ ಎಂದು ಕಿಡಿಕಾರಿದರು.
    ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿಲ್ ಕಲೆಕ್ಟರ್‌ಗಳು ಕಡಿಮೆ ಯೂನಿಟ್ ನಮೂದಿಸಿದ್ದರು. ಅದ ಕಾರಣ ಈ ಹಿಂದಿನ ಬಾಕಿ ಮೊತ್ತವನ್ನು ಸೇರಿಸಿ ಈಗ ಬಿಲ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ರೀತಿಯ ವಸೂಲಿ ಎಷ್ಟರ ಮಟ್ಟಿಗೆ ಸರಿ. ಇಲಾಖೆ ತನ್ನ ಲೋಪ ಸರಿಪಡಿಸಿಕೊಳ್ಳಲು ಗ್ರಾಹಕರ ಮೇಲೆ ಪ್ರಹಾರ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸೆಸ್ಕ್ ಸಹಾಯಕ ಇಂಜಿನಿಯರ್‌ಗೆ ಮನವಿ ಸಲ್ಲಿಸಲಾಯಿತು. ಪಕ್ಷದ ಕಾರ್ಯಕರ್ತರಾದ ಪಿ.ಆರ್.ಭರತ್, ಎಂ.ಜಿ.ಜೋಸ್, ಮೊಣ್ಣಪ್ಪ, ಚಂದ್ರನ್, ಬೋಜಿ, ಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts