More

    ನರಸಿಂಗಪುರ ಗ್ರಾಮಸ್ಥರಿಂದ ಪ್ರತಿಭಟನೆ

    ಬಳ್ಳಾರಿ : ಸಂಡೂರು ತಾಲೂಕಿನ ನರಸಿಂಗಪುರ ಗ್ರಾಮದ ಸುತ್ತಮುತ್ತ ಇರುವ ಕಬ್ಬಿಣದ ಕಾರ್ಖಾನೆಯಿಂದ ಸ್ಥಳೀಯರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆ ಕಾರ್ಖಾನೆಯನ್ನು ಮುಚ್ಚುವಂತೆ ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು.

    ರಣಜಿತ್‌ಪುರ ಗ್ರಾಮದ ಸಮೀಪ ಖಾಸಗಿ ಕಬ್ಬಿಣದ ಕಾರ್ಖಾನೆವಿದ್ದು, ಅದರಿಂದ ಹೊರ ಬಿಡುವ ಹೊಗೆಯಿಂದ ವಿಠಲನಗರ, ಆಕಾಶನಗರ ಕ್ಯಾಂಪ್, ದೋಣಿಮಲೈ, ನರಸಿಂಗಪುರ ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅಲ್ಲದೆ ಜಾನುವಾರು, ಪ್ರಾಣಿ ಪಕ್ಷಿ ಜೀವ ಸಂಕುಲಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕಾರ್ಖಾನೆಯನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿದರು.

    ಗಣಿಗಾರಿಕೆಯಿಂದ ಭಾರಿಗಾತ್ರದ ಲಾರಿಗಳ ಓಡಾಟ ಹೆಚ್ಚಾಗಿರುವುದರಿಂದ ರಸ್ತೆಗಳೆಲ್ಲ ಹಾನಿಯಾಗಿವೆ. ರಸ್ತೆ ಸಮೀಪದಲ್ಲೇ ಶಾಲೆಗಳಿದ್ದು, ಮಕ್ಕಳ ಸುರಕ್ಷತೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಹೋಗುತ್ತಿರುವ ಭೂಮಿಯನ್ನು ವಶಕ್ಕೆ ಪಡೆದಿದ್ದು, ರೈತರಿಗೆ ಇನ್ನು ಪರಿಹಾರ ಒದಗಿಸಿಲ್ಲ. ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅಡಕೆ, ಮಹಾಗನಿ, ಶ್ರೀಗಂಧ, ತೇಗ, ತೆಂಗು ಇನ್ನಿತರ ಬಹುವಾರ್ಷಿಕ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಕಾರ್ಖಾನೆಯಿಂದ ಬರುವ ಹೊಗೆ ಬೆಳೆಗಳ ಮೇಲೆ ಕುಳಿತುಕೊಳ್ಳುವುದರಿಂದ ಬೆಳೆ ಹಾನಿ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

    ಮುಖಂಡರಾದ ನೀಲಕಂಠ ದೇಸಾಯಿ, ಎಂ.ಎಸ್.ಆಂಜಿನೇಯ, ಜಿ.ತಾರಕೇಶ್, ಜಿ.ಕೆ.ರಮೇಶ್‌ಕುಮಾರ್, ಜಗದೀಶಪ್ಪ, ಹನುಮಂತಪ್ಪ, ಗ್ರಾಮಸ್ಥರಾದ ಡಿ.ಅಚ್ಯುತ್‌ಕುಮಾರ್, ಧನಂಜಯ ಕೋಳೂರು, ಆಗಲೂರು ಗಂಗಪ್ಪ, ಸಣ್ಣಗಾದೆಪ್ಪ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts