More

    ರೈತ ಸಂಘದಿ೦ದ ಪ್ರತಿಭಟನೆ

    ಧಾರವಾಡ: ಇಡೀ ಜಿಲ್ಲೆ ಬರಪೀಡಿತ ಘೋಷಣೆಯಾಗಿದ್ದು, ಜಾನುವಾರುಗಳಿಗೆ ಮೇವು ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದಿ೦ದ ಜಿಲ್ಲಾಽಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
    ಇಲ್ಲಿನ ಕಲಾಭವನ ಮೈದಾನದಿಂದ ಮೆರವಣಿಗೆ ಮೂಲಕ ಜಿಲ್ಲಾಽಕಾರಿ ಕಚೇರಿಗೆ ತೆರಳಿದ ರೈತರು ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
    ವಿದ್ಯುತ್ ಅಕ್ರಮ ಸಕ್ರಮ ಯೋಜನೆಯನ್ನು ಯಥಾಸ್ಥಿತಿ ಮುಂದುವರಿಸಬೇಕು. ಜಿಲ್ಲೆಗೆ ಬರ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಕೂಡಲೇ ರೈತರ ಖಾತೆಗಳಿಗೆ ಜಮೆ ಮಾಡಬೇಕು. ಬರಗಾಲ ಇರುವುದರಿಂದ ರೈತರ ಬ್ಯಾಂಕ್ ಸಾಲ ಹಾಗೂ ಮಹಿಳೆಯರ ಸ್ವ ಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು. ನರೇಗಾ ಅಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಬೇಕು. ಸಾಲ ಮರುಪಾವತಿ ನೋಟಿಸ್ ನೀಡುತ್ತಿರುವ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
    ವೀರಣ್ಣ ಬಳಿಗೇರ, ನಾಗಪ್ಪ ಉಂಡಿ, ರವಿರಾಜ ಕಂಬಳಿ, ಎಂ.ಎಸ್. ಪಾಟೀಲ, ಐ.ಎಂ. ಪಾಗದ, ಮಲ್ಲವ್ವ ನವಲಗುಂದ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts