More

    ಬಜರಂಗದಳ, ಶ್ರೀರಾಮಸೇನೆಯಿಂದ ಪ್ರತಿಭಟನೆ

    ಶಿಗ್ಗಾಂವಿ: ಹಿಂದು ಸಂಘಟನೆ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ ನೆಟ್ಟಾರು ಹತ್ಯೆ ಖಂಡಿಸಿ ಬಜರಂಗದಳ ಮತ್ತು ಶ್ರೀರಾಮಸೇನೆ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಚನ್ನಮ್ಮ ಸರ್ಕಲ್​ನಲ್ಲಿ ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

    ಪಟ್ಟಣದ ಪೋಸ್ಟ್ ಆಫೀಸ್ ಸರ್ಕಲ್​ನಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಕಾರ್ಯಕರ್ತರು ಸರ್ಕಾರರ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೆ, ಗೃಹ ಮಂತ್ರಿ ಅರಗ ಜ್ಞಾನೇಂದ್ರರನ್ನು ಹುದ್ದೆಯಿಂದ ವಜಾಗೊಳಿಸಿ ಸೂಕ್ತ ಗೃಹ ಮಂತ್ರಿಯನ್ನು ನೇಮಕ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪದೇಪದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಮುಖ್ಯಮಂತ್ರಿಗಳ ಮೇಲೆ ಭರವಸೆ ಹೊರಟು ಹೋಗಿದೆ. ಕೂಡಲೆ ಕೊಲೆ ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಪಿಎಫ್​ಐ, ಎಸ್​ಡಿಪಿಐ ಅಂತಹ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಇಲ್ಲದಿದ್ದಲ್ಲಿ ಗಂಭೀರ ಹೋರಾಟ ನಡೆಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಗದಿಗೆಪ್ಪ ಕುರವೆತ್ತಿ, ತಾಲೂಕಾಧ್ಯಕ್ಷ ಬಸವರಾಜ ಕೊಲ್ಲಾಪುರ ಹಾಗೂ ಸಿದ್ದರಾಜ ಕಲಾಲ ಆಗ್ರಹಿಸಿದರು. ನಂತರ ಸಿಪಿಐ ಬಸವರಾಜ ಹಳಬನ್ನನವರ ಮತ್ತು ಶಿರಸ್ತೇದಾರ ಸ್ವಾಲಿನ್ ಅವರಿಗೆ ಮನವಿ ಸಲ್ಲಿಸಿದರು.

    ವಿಶ್ವಹಿಂದು ಪರಿಷತ್​ನ ಚನ್ನವೀರ ನೀರಲಗಿ, ವಿನಾಯಕ ಅಂಗಡಿ, ಸೂರಜ ಪಾಟೀಲ, ಶಿವು ವನಹಳ್ಳಿ, ಮಾಲತೇಶ ಕುಂಬಾರಗೇರಿಮಠ, ಅರುಣ ಬನ್ನಿಕೊಪ್ಪ, ಬಸವರಾಜ ಕಮ್ಮಾರ, ಪ್ರಶಾಂತ ಕಲಾಲ, ಮಂಜುನಾಥ ಹಡಪದ, ಬಸವರಾಜ ಈಳಿಗೇರ, ಮುದಕಣ್ಣ ವನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts