More

    ಒಂದೇ ವಾರದಲ್ಲಿ ರಾಜಕೀಯಕ್ಕೆ ಗುಡ್​ಬೈ ಹೇಳಿದ ಇಂಗ್ಲೆಂಡ್​ ಮಾಜಿ ಸ್ಪಿನ್ನರ್​ ಮಾಂಟಿ ಪಣೇಸರ್​! ಹೀಗಿದೆ ಕಾರಣ…

    ಲಂಡನ್​: ಇಂಗ್ಲೆಂಡ್​ ಮಾಜಿ ಸ್ಪಿನ್ನರ್​ ಮಾಂಟಿ ಪಣೇಸರ್​ ಒಂದೇ ವಾರದಲ್ಲಿ ರಾಜಕೀಯ ಜೀವನವನ್ನು ಮುಕ್ತಾಯಗೊಳಿಸಿದ್ದಾರೆ.

    ಬ್ರಿಟನ್​ನಲ್ಲಿ ಕಳೆದ ವಾರವಷ್ಟೇ ಜಾರ್ಜ್​ ಗ್ಯಾಲೋವೇ ಅವರ ವರ್ಕರ್ಸ್​ ಪಕ್ಷದ ಸಂಸದೀಯ ಅಭ್ಯರ್ಥಿಯಾಗಿ ಹೆಸರಿಸಲ್ಪಟ್ಟಿದ್ದ ಭಾರತ ಮೂಲದ ಸಿಖ್​ ಆಗಿರುವ 42 ವರ್ಷದ ಮಾಂಟಿ ಪಣೇಸರ್​, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಲಂಡನ್​ನ ಈಲಿಂಗ್​ ಸೌಥಾಲ್​ ಕ್ಷೇತ್ರದಿಂದ ಸ್ಪರ್ಧಿಸಬೇಕಾಗಿತ್ತು. ಆದರೆ ರಾಜಕೀಯಕ್ಕೆ ಸೇರಿದ ಬಳಿಕ ಎದುರಿಸಿದ ಸರಣಿ ಸಂದರ್ಶನಗಳಲ್ಲಿ ರಾಜಕೀಯ ವಿಚಾರಗಳಲ್ಲಿ ಅವರ ಅಜ್ಞಾನಗಳು ಬೆಳಕಿಗೆ ಬಂದಿವೆ. ಇದರಿಂದ ಇರಿಸುಮುರಿಸುಗಳನ್ನು ಎದುರಿಸಿ ಅವರೀಗ ರಾಜಕೀಯವನ್ನೇ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

    ‘ಬ್ರಿಟಿಷ್​ ಪ್ರಜೆಯಾಗಿ ನನಗೆ ಹೆಮ್ಮೆ ಇದೆ. ದೇಶದ ಪರ ಕ್ರಿಕೆಟ್​ ಆಡಿರುವ ಭಾಗ್ಯ ನನ್ನದಾಗಿದೆ. ಇನ್ನೀಗ ಇತರರಿಗೆ ನೆರವಾಗಲು ಬಯಸಿರುವೆ. ಆದರೆ ನನ್ನ ಪ್ರಯಾಣ ಈಗಷ್ಟೇ ಶುರುವಾಗಿದೆ. ರಾಜಕೀಯದ ಮೂಲಕ ಜನರಿಗೆ ಹೇಗೆ ನೆರವಾಗಬಹುದು ಎಂಬುದನ್ನು ಕಲಿತುಕೊಳ್ಳುತ್ತಿರುವೆ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಿಂದ ನನ್ನ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ನನಗೆ ರಾಜಕೀಯದ ಬಗ್ಗೆ ಕಲಿತುಕೊಳ್ಳಲು ಹೆಚ್ಚಿನ ಸಮಯ ಬೇಕಾಗಿದೆ. ಮುಂದಿನ ಬಾರಿ ರಾಜಕೀಯಕ್ಕೆ ಮರಳಿದಾಗ ನನ್ನ ರಾಜಕೀಯದ ವಿಕೆಟ್​ ಉರುಳಿಸಲು ಎಲ್ಲ ರೀತಿಯಲ್ಲೂ ಸಜ್ಜಾಗಿ ಬರುವೆ’ ಎಂದು ಪಣೇಸರ್​ ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

    ಡೆಲ್ಲಿ ವಿರುದ್ಧ ರಾಜಸ್ಥಾನ ರಾಯಲ್ಸ್​ ಎಡವಿದ್ದೆಲ್ಲಿ? ನಾಯಕ ಸ್ಯಾಮ್ಸನ್​ ನೀಡಿದ ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts