More

    ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರತಿಭಟನೆ

    ಕೋಲಾರ: ದಲಿತ ವಿರೋಧಿ ನೀತಿಗಳನ್ನು ರಾಜ್ಯ ಕಾಂಗ್ರೆಸ್​ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ನಗರದ ಬಸ್​ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ಸಿದ್ದರಾಮ್ಯ ನೇತೃತ್ವದ ಸರ್ಕಾರ ಎಸ್ಸಿಪಿ, ಟಿಎಸ್ಪಿ ಯೋಜನೆಯ ಅನುದಾನವನ್ನು ಗ್ಯಾರೆಂಟಿಗಳಿಗೆ ಬಳಕೆ ಮಾಡಿಕೊಂಡು ದಲಿತರನ್ನು ಸೌಲಭ್ಯಗಳಿಂದ ವಂಚಿಸಿದ್ದಾರೆ. ಸಿದ್ದರಾಮಯ್ಯ ಕೊನೆ ಆಟ ಇದು, ಲೋಕಸಭೆ ಚುನಾವಣೆಯ ನಂತರ ಮನೆಗೆ ಹೋಗುವುದು ಖಚಿತ ಎಂದರು.
    ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷಿ??, ಯುವ ನಿಧಿ ಗ್ಯಾರಂಟಿಗಳಿಗೆ ಹಣ ಕೊರತೆ ಎದುರಾಗಿದೆ. ಎಸ್ಸಿಪಿ, ಟಿಎಸ್ಪಿ ಹಣ ಆಯಿತು, ಈಗ ಮುಜರಾಯಿ ದೇವಾಲಯಗಳ ಹುಂಡಿ ಹಣಕ್ಕೆ ಸರ್ಕಾರ ಕನ್ನಾ ಹಾಕಿದೆ. ಅಂಬೇಡ್ಕರ್​ ಹೆಸರು ಹೇಳಿಕೊಂಡು ಸರ್ಕಾರಕ್ಕೆ ಬಂದಿರು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದೇಶ ವಿರೋಧಿಯಾಗಿದೆ ಎಂದು ಆರೋಪಿಸಿದರು.
    ದಲಿತರ ಹಣ ಲೂಟಿ ಮಾಡಿರುವ ಸಿದ್ದರಾಮಯ್ಯ ಅವರು ದಲಿತರನ್ನು ಮನವೊಲಿಸುವ ನಿಟ್ಟಿನಲ್ಲಿ ಈಗ ಪಂಚಾಯಿತಿ ಮಟ್ಟದಿಂದ ಸಂವಿಧಾನ ಜಾಗೃತಿ ಜಾಥಾ ನಡೆಸುತ್ತಿದ್ದಾರೆ. ಸರ್ಕಾರದ ವರ್ತನೆಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ ಅಹಿಂದ ವಿರೋಧ ಎಂಬುದು ಸ್ಪಫ್ಟಿವಾಗಿದೆ. ಕೂಡಲೇ ಜನರ ಕ್ಷಮೆಯಾಚಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
    ದಲಿತ ಉದ್ದಾರಕ್ಕಾಗಿ ಇಟ್ಟಿದ್ದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರವಾಸಿ ಮಾಡಿ ಜನವಿರೋಧಿ ಬಗ್ಗೆ ಜನ ಜಾಗೃತಿ ಮೂಡಿಸಲಾಗುವುದು. ಇನ್ನಾದರು ಎಚ್ಚೆತ್ತುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
    ದೇವಾಲಯಗಳ ಅಭಿವೃದ್ಧಿ ಹಣವನ್ನು ಮಸೀದಿಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಭಿವೃದ್ಧೀಗೆ ಬಳಕೆ ಮಾಡಿಕೊಂಡಿದ್ದರೆ ನಾಮ್ಮ ವಿರೋಧವಿಲ್ಲ. ಸಂವಿಧಾನ ಶಿಲ್ಪ ಡಾ.ಬಿ.ಆರ್​.ಅಂಬೇಡ್ಕರ್​ ಅವರಿಗೆ ಮೋಸ ಮಾಡಿರುವುದು ಕಾಂಗ್ರೆಸ್​ ಅಧಿಕಾರದಲ್ಲಿ ಮುಂದುವರೆಯಲ್ಲಿ ಅರ್ಹರಲ್ಲಿ, ಕೂಡಲೇ ಎಲ್ಲಾರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
    ಸಿದ್ದರಾಮ್ಯ, ಡಿ.ಕೆ.ಶಿವಕುಮಾರ್​ ಸೇರಿದಂತೆ ಹಲವು ಶಾಸಕರು, ಸಚಿವರು ಆಯೋದ್ಯೆ ರಾಮ ಮಂದಿರದ ಪ್ರತಿಫಿ್ಠಾಪನೆ ಕುರಿತು ಆರೋಪ ವ್ಯಕ್ತಪಡಿಸಿದ್ದಾರೆ. ನಮ್ಮ ಹೆಸರುಗಳಲ್ಲೂ ರಾಮ, ಶಿವ ಇದ್ದಾರೆ ಎಂದು ಹೇಳಿ ಹಿಂದೂ ಧರ್ಮಿಕರ ಭಾವನೆಗಳನ್ನು ಕೆರಳಿಸಿದ್ದಾರೆ. ಇದಕ್ಕೆಲ್ಲ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸಿದ್ದರಿದ್ದಾರೆ ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎಸ್​.ವೇಣುಗೋಪಾಲ್​ ಮಾತನಾಡಿ, ಜಿಲ್ಲೆಯಲ್ಲಿ ನಾಲ್ಕು ಮಂದಿ ಕಾಂಗ್ರೆಸ್​ ಶಾಸಕರು ಇದ್ದರು ಅಭಿವೃದ್ಧಿಗಾಗಿ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಏನೇ ಸಮಸ್ಯೆ ಎದುರಾದರು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುವುದು ಬಿಟ್ಟರೆ ಬೇರೆನು ಗೊತ್ತಿಲ್ಲ ಎಂದು ದೂರಿದರು.
    ಪ್ರತಿಭಟನೆಯಲ್ಲಿ ಕೆಯುಡಿಎ ಮಾಜಿ ಅಧ್ಯಕ್ಷರಾದ ಓಂಶಕ್ತಿ ಚಲಪತಿ, ವಿಜಯ್​ಕುಮಾರ್​, ಮುಖಂಡರಾದ ಕೆ.ಚಂದ್ರಾರೆಡ್ಡಿ, ಮಹೇಶ್​ ಕುಮಾರ್​, ಸಿ.ಡಿ.ರಾಮಂಚ್ರ, ತಿಮ್ಮರಾಯಪ್ಪ, ಕೃಷ್ಣಮೂರ್ತಿ, ಚಂದ್ರಶೇಖರ್​ ಮತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts