More

    ಕೋಚಿಮುಲ್ ನಿರ್ದೇಶಕರ ಪ್ರವಾಸ ವಿರೋಧಿಸಿ ಪ್ರತಿಭಟನೆ

    ಕೋಲಾರ: ಬರದ ನಡುವೆಯೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿಕೊಂಡು ಕೋಚಿಮುಲ್ ನಿರ್ದೇಶಕರು ಅಧ್ಯಯನದ ಹೆಸರಿನಲ್ಲಿ ಪ್ರವಾಸ ಹಮ್ಮಿಕೊಂಡಿರುವುದನ್ನು ಖಂಡಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಗಾಂಧಿವನದ ಸಮೀಪ ಶನಿವಾರ ಪ್ರತಿಭಟನೆ ನಡೆಸಿದರು.

    ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿದೆ. ಮೇವಿನ ಕೊರತೆ ಎದುರಾಗಿ ರಾಸುಗಳನ್ನು ಮೇಯಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅವರಿಗೆ ಉತ್ತೇಜನ ನೀಡುವುದು ಬಿಟ್ಟು ಯುರೋಪ್ ಪ್ರವಾಸ ಹೊರಡುವ ಅವಶ್ಯಕತೆಯಿತ್ತೇ ಎಂದು ಪ್ರತಿಭಟನಾಕಾರರರು ಪ್ರಶ್ನಿಸಿದ್ದಾರೆ.
    ಮಹಿಳಾ ಘಟಕದ ಅಧ್ಯಕ್ಷ ನಳಿನಿಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳಿಗೆ ಮೇವು, ನೀರು ಸಿಗದೆ ಹೊರ ರಾಜ್ಯಗಳಿಂದ ದುಬಾರಿ ಬೆಲೆಗೆ ಮೇವು ಖರೀದಿ ಮಾಡುವ ಪರಿಸ್ಥಿತಿ ಎದುರಾಗಿದೆ. ಕೆಎಂಎಫ್‌ನಿಂದ ಪಶು ಆಹಾರ ಬೆಲೆ ಏರಿಕೆ ಮಾಡಿ ರೈತರ ಮೇಲೆ ಹೊರೆ ಹಾಕಲಾಗಿದೆ ಎಂದು ದೂರಿದರು.
    ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಪ್ರವಾಸಕ್ಕೆ ಉಪಯೋಗಿಸುವ ಹಣವನ್ನು ಮೇವಿಗಾಗಿ ಪ್ರತಿ ಡೇರಿಗಳ ಮುಖಾಂತರ ರೈತರಿಗೆ ಬೋನಸ್ ರೂಪದಲ್ಲಿ ನೀಡಿದ್ದರೆ ಕಷ್ಟದಲ್ಲಿರುವ ರೈತರ ಸಮಸ್ಯೆಗೆ ಉಪಯೋಗವಾಗುತ್ತಿಲ್ಲವೇ? ಒಂದು ಕಡೆ ಒಕ್ಕೂಟದ ನಷ್ಟ, ಮತ್ತೊಂದು ಕಡೆ ಸಾರ್ವಜನಿಕ ರೈತರ ಹಣದಲ್ಲಿ ವ್ಯವಸ್ಥಾಪಕರು, ನಿರ್ದೇಶಕರು ಮೋಜು ಮಸ್ತಿಗಾಗಿ ಹಣವನ್ನು ಖರ್ಚು ಮಾಡುತ್ತಿರುವುದು ರೈತ ವಿರೋಧಿ ದೋರಣೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts