More

    ಕೃಷಿ ಕಾಯ್ದೆ ಹಿಂಪಡೆಯಲು ಪಟ್ಟು

    ಕೋಲಾರ : ಜನಾಭಿಪ್ರಾಯಕ್ಕೆ ವಿರುದ್ಧವಾದ ಕೃಷಿ ಕಾಯ್ದೆ ಹಿಂದಕ್ಕೆ ಪಡೆಯಲು ಒತ್ತಾಯಿಸಿ ಗುರುವಾರ ನಗರದ ಮೆಕ್ಕೆ ವೃತ್ತದಲ್ಲಿ ರೈತ ಸಂದ ಕಾರ್ಯಕರ್ತರು ವಾನವ ಸರಪಳಿ ರಚಿಸಿ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಉಪಾಧ್ಯಕ್ಷ ಕೆ.ಶ್ರೀನಿವಾಸಗೌಡ ವಾತನಾಡಿ, ಕೃಷಿ ಕಾಯ್ದೆ ಹೆಸರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ವಾಡಲು ಹೊರಟಿದೆ, ಶ್ರೀಮಂತರಿಗೆ ವಾತ್ರ ಇದರಿಂದ ಅನುಕೂಲವಾಗಲಿದೆ, ದೇಶಾದ್ಯಂತ ರೈತರು ಕಾಯ್ದೆಯಲ್ಲಿನ ನ್ಯೂನತೆ ತಿಳಿಸಿದರೂ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ದೂರಿದರು.

    ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಜೆಡಿಎಸ್ ರಾಜಕೀಯ ಲಾಭಕ್ಕಾಗಿ ಕೃಷಿ ಕಾಯ್ದೆಗೆ ಬೆಂಬಲ ನೀಡುವ ಮೂಲಕ ರೈತ ವಿರೋಧಿ ಎಂಬುದನ್ನು ಸಾಬೀತು ವಾಡಿದೆ, ರೈತ ಮುಖಂಡರನ್ನು ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ಅಪವಾನಿಸಿರುವುದು ಖಂಡನೀಯ ಎಂದರು.

    ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ವಾತನಾಡಿ, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ವಾಜಿ ಪಿಎಂ ಎಚ್.ಡಿ.ದೇವೇಗೌಡ ಮತ್ತು ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ರೈತರಿಗೆ ವಾರಕವಾಗಿರುವ ಕೃಷಿ ಕಾಯ್ದೆ ಒಪ್ಪುವ ಮೂಲಕ ತಾವು ರೈತ ವಿರೋಧಿ ಎಂಬುದನ್ನು ರುಜುವಾತು ವಾಡಿದ್ದಾರೆ ಎಂದರು.

    ಮುಖಂಡರಾದ ಮಂಗಸಂದ್ರ ತಿಮ್ಮಣ್ಣ, ನಾಗೇಶ್, ಐತಾಂಡಹಳ್ಳಿ ಮಂಜುನಾಥ್, ಜಮೀರ್‌ಪಾಷಾ, ವಾಸ್ತಿ ವೆಂಕಟೇಶ್, ಚಾಂದ್‌ಪಾಷಾ, ಮೊಹಮದ್ ಶೋಹಿಬ್, ತೆರ‌್ನಹಳ್ಳಿ ಆಂಜಿನಪ್ಪ ಇನ್ನಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts