More

    ಕೃಷಿ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ ಅನಿವಾರ‌್ಯ

    ಚಿತ್ರದುರ್ಗ : ಕೃಷಿ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟಕ್ಕೆ ರೈತರು ಸಂಘಟಿತ ಹೋರಾಟ ನಡೆಸ ಬೇಕಿದೆ ಎಂದು ರಾಜ್ಯರೈತ ಸಂಘದ ಪ್ರಧಾನ ಕಾರ್ಯದ ರ್ಶಿ ಟಿ. ನುಲೇನೂರು ಶಂಕರಪ್ಪ ಹೇಳಿದರು. ತಾಲೂಕಿನಲ್ಲಿ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಘದ ಗ್ರಾಮ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

    ಹಗಲು, ರಾತ್ರಿ ಎನ್ನದೆ ರೈತರು ಮನೆಮಂದಿಯೊಂದಿಗೆ ಕೂಡಿ ದುಡಿದರು ಸಾಲಗಾರರಾಗುವುದು ತಪ್ಪಿಲ್ಲ. ಓಟುಗಳನ್ನು ಯಾರೂ ಮಾರಿ ಕೊಳ್ಳಬಾರದು. ಆಗ ಮಾತ್ರ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವೆಂದರು.

    ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ರೈತ ಬೆಳೆದು ಅನ್ನ ಕೊಡದಿದ್ದರೆ ದೇಶದಲ್ಲಿ ಯಾರು ಉಳಿಯುತ್ತಿರಲಿಲ್ಲ.ಇಡೀ ಜಗತ್ತು ನಿಂತಿರುವುದು ರೈತನಿಂದ. ಆದರೆ ಬಿತ್ತನೆ ಬೀಜ,ಗೊಬ್ಬರ, ಕೀಟನಾಶಕ ಎಲ್ಲವೂ ವಿಷಾಗಿದೆ. ಹಿಂದೆ ಐದು ಚೀಲ ರಾಗಿ,ಜೋಳ ಬೆಳೆದರೂ ಚೆನ್ನಾಗಿದ್ದ ರೈತನಿಂದ ಐವತ್ತು ಚೀಲ ಬೆಳೆದರೂ ಸಾಲಗಾರನಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತ ಪಡಿಸಿದರು.

    ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿದರು. ಮುಖಂಡ ಪಾಪಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಹಂಪಯ್ಯನಮಾಳಿಗೆ ಧನಂಜಯ,ಹೊರಕೇರಪ್ಪ, ಪ್ರಭು,ತಿಪ್ಪೇಸ್ವಾಮಿ,ನಾಗರಾಜ್ ಮುದ್ದಾಪುರ,ಲಕ್ಷ್ಮೀಕಾಂತ್, ಕುಮಾರ ಸ್ವಾಮಿ,ಕಿಲಾರಿ ಬೋರಯ್ಯ ವೇದಿಕೆಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts