More

    ಜನ ವಿರೋಧಿ ನೀತಿ ಖಂಡಿಸಿ ಜಿಲ್ಲಾದ್ಯಂತ ಪ್ರತಿಭಟನೆ

    ಗದಗ: ಕೇಂದ್ರ ಸರ್ಕಾರ ಕಾರ್ವಿುಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕೇಂದ್ರ ಕಾರ್ವಿುಕರ ಒಕ್ಕೂಟಗಳು ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾದ್ಯಂತ ವಿವಿಧ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು.

    ಜಿಲ್ಲಾಡಳಿತ ಭವನ ಎದುರು ಮುಷ್ಕರ ನಡೆಸಿದ ಕಾರ್ವಿುಕ ಸಂಘಟನೆಗಳ ಪದಾಧಿಕಾರಿಗಳು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೊನಾ ನಿಯಂತ್ರಿಸಲು ವಿಫಲಗೊಂಡಿವೆ. ಇದರಿಂದ ಲಕ್ಷಾಂತರ ಕಾರ್ವಿುಕರು ಕೆಲಸ ಕಳೆದುಕೊಂಡು ಜೀವನ ನಡೆಸುವುದು ದುಸ್ತರವಾಗಿದೆ. ಕರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿರುವ ಪಂಚಾಯಿತಿ, ಮುನ್ಸಿಪಲ್ ನೌಕರರು, ಆರೋಗ್ಯ ಕಾರ್ಯಕರ್ತರ ಬದುಕಿಗೆ ರಕ್ಷಣೆ ನೀಡಲಿಲ್ಲ’ ಎಂದು ಆರೋಪಿಸಿದರು.

    ‘ದೇಶದ ಸಾಮಾನ್ಯ ಜನರ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ, ಉದಾರವಾದ ಆರ್ಥಿಕ ನೀತಿ ಮೂಲಕ ಕೃಷಿ, ಶಿಕ್ಷಣ, ಸಾರ್ವಜನಿಕ ಕ್ಷೇತ್ರದ ಉದ್ದಿಮೆ ಮತ್ತು ಸೇವೆಗಳನ್ನು ಕಾಪೋರೇಟ್ ವಲಯಗಳ ಲಾಭಕ್ಕಾಗಿ ಖಾಸಗೀಕರಣ ಮಾಡುತ್ತಿದೆ. ಕಾರ್ವಿುಕ ಕಾನೂನು ತೆಗೆದುಹಾಕುವ ಹುನ್ನಾರ ನಡೆಸಿದೆ. ರೈತ ವಿರೋಧಿ ಭೂಸುಧಾರಣೆ ಕಾಯ್ದೆ ಜಾರಿಗೆ ತರಲಾಗಿದ್ದು, ಇದರಿಂದ ರೈತರು ಬದುಕು ನಾಶವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕಾರ್ವಿುಕ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಸುಂದರೇಶಬಾಬು ಅವರಿಗೆ ಮನವಿಯಲ್ಲಿ ಒತ್ತಾಯಿಸಿದೆ.

    ಕಾರ್ವಿುಕ ಮುಖಂಡರಾದ ಮಾರುತಿ ಚಿಟಗಿ, ಶಾಂತವ್ವ ಮಾಳವಾಡ, ಪಿ. ಬಿ. ಬನ್ನೂರ, ಆರ್. ಎನ್. ಸಂಕನಗೌಡ್ರ, ರುದ್ರಪ್ಪ ಕಂದಗಲ್ಲ, ಸಾವಿತ್ರಿ ಸಬ್ನಿಸ್, ಗೋಪಾಲರಾಯ, ವಿಜಯಾ ಪಾಟೀಲ, ಯಶೋಧಾ ಬೆಟಗೇರಿ, ಯಮುನಾ ಬೆಟಗೇರಿ, ಹನುಮೇಶ ನಾಯಕ, ಜೆ.ಎಸ್.ತಳವಾರ, ಎಂ.ಐ. ನವಲೂರ, ಎಫ್.ಎಸ್.ಸಿಂದಗಿ, ಡಿ.ಎಚ್. ರಡ್ಡೇರ, ಶಿವು ಮೊರಬ, ನಾಗರತ್ನ ಬಡಿಗಣ್ಣವರ, ಶಂಕ್ರಮ್ಮ ಕೋಳಿವಾಡ ಮತ್ತಿತರರು ಇದ್ದರು.

    ಸಂಘಟನೆಗಳ ಹೋರಾಟ ನಿರಂತರ

    ಲಕ್ಷ್ಮೇಶ್ವರ: ವಿವಿಧ ಕಾರ್ವಿುಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

    ತಾಲೂಕಿನ ಬಿಸಿಯೂಟ, ಗ್ರಾಮ ಪಂಚಾಯಿತಿ , ಕಟ್ಟಡ ಕಾರ್ವಿುಕರು ಮತ್ತು ಎಪಿಎಂಸಿ ಹಮಾಲರ ಸಂಘದ ನೂರಾರು ಕಾರ್ವಿುಕರು ಪಟ್ಟಣದ ಎಪಿಎಂಸಿಯಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ತಾಲೂಕು ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಬಸವರಾಜ ಅರ್ಕಸಾಲಿ ಮಾತನಾಡಿ, ಬೇಡಿಕೆ ಈಡೇರುವವರೆಗೂ ಕಾರ್ವಿುಕ ಸಂಘಟನೆಗಳ ಹೋರಾಟ ನಿರಂತರವಾಗಿರಲಿದೆ ಎಂದರು.

    ಬಿಸಿಯೂಟದ ತಾಲೂಕಾಧ್ಯಕ್ಷೆ ಪಾರ್ವತಿ ಗಾಣಿಗೇರ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಶರಸೂರಿ, ಮಹೇಶ ಮೂಲಿಮನಿ, ನಾಗರಾಜ ಪೂಜಾರ, ನಿಂಗರಾಜ ಬಾಗವಾಡ, ಮೈಲಾರಪ್ಪ ಶಿರೂರ, ಮಹಾಂತೇಶ ಕುಸುಗಲ್, ಸಹದೇವಪ್ಪ ದುರಗಣ್ಣವರ, ಮೈಲಾರಪ್ಪ ಶರಸೂರಿ, ಫಕೀರಪ್ಪ ನಂದಿಹಳ್ಳಿ, ನೀಲಪ್ಪ ಗದ್ದಿ, ಸಂತೋಷ ಕುಂಬಾರ, ಮಲ್ಲಪ್ಪ ಗದ್ದಿ, ಶಂಕರಪ್ಪ ಗೋಣೆಪ್ಪನವರ, ಮಹಾಂತೇಶ ಸುಣಗಾರ, ವಿಜಯ ಆಲೂರ, ಅನಸಕ್ಕ ಮಡಿವಾಳರ ಸೇರಿ 150ಕ್ಕೂ ಹೆಚ್ಚು ಕಾರ್ವಿುಕರು ಪಾಲ್ಗೊಂಡಿದ್ದರು.

    ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಉಪತಹಸೀಲ್ದಾರ್ ಎಂ.ಜಿ. ದಾಸಪ್ಪನವರ ಅವರಿಗೆ ಸಲ್ಲಿಸಿದರು.

    ಪ್ರಧಾನಮಂತ್ರಿಗೆ ಮನವಿ

    ಮುಂಡರಗಿ: ಸಿಐಟಿಯು ಮತ್ತು ಎಐಟಿಯುಸಿ ನೇತೃತ್ವದಲ್ಲಿ ವಿವಿಧ ಕಾರ್ವಿುಕ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

    ಪ್ರತಿಭಟನಾಕಾರರು ಪುರಸಭೆ ಮೈದಾನದಿಂದ ರ‍್ಯಾಲಿ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿದರು. ಈ ವೇಳೆ ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಬಿ. ಬಾಬು, ಆಶಾ ಕಾರ್ಯಕರ್ತೆ ಪಾರ್ವತಿ ಹರ್ಲಾಪುರ, ಅಂಗನವಾಡಿ ಕಾರ್ಯಕರ್ತೆ ಜನ್ನುಬೀ ಹಣಗಿ, ಬಿಸಿಯೂಟ ಕಾರ್ಯಕರ್ತೆ ಅಕ್ಕಮ್ಮ ಕಾತರಕಿ ಮಾತನಾಡಿದರು. ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ರಾಘವೇಂದ್ರ ಡೊಂಬರ ಮನವಿ ಸ್ವೀಕರಿಸಿದರು.

    ಗ್ರಾಪಂ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಮೇವುಂಡಿ, ಶಂಕರ ದೇವರಮನಿ, ಸುಶೀಲಾ ಚಲವಾದಿ, ಮಂಜುನಾಥ ಬೆಂಡಿಕಾಯಿ, ರೇಣುಕಾ ನವಲಗುಂದ, ಎನ್.ಟಿ. ಲಕ್ಕುಂಡಿ, ಶಾಂತಾ ನಾಯಕ, ಎಸ್.ಎಂ. ಮಠದ, ಕೆ.ಜಿ. ಬೀಳಗಿ, ಬಸವರಾಜ ಸೋಂಪುರ, ಮುದಕವ್ವ ತಳವಾರ, ಹನುಮಂತ ಕುರಿ, ಹನುಮಂತ ಹರಿಜನ, ಹಾಲಮ್ಮ ಕವಲೂರ, ನೇತ್ರಾವತಿ ಹೂಗಾರ, ರೇಣುಕಾ ತಳವಾರ, ಸುಲೋಚನಾ ಶಿವಸಿಂಪರ್, ದ್ಯಾಮಣ್ಣ ಮಡಿವಾಳರ, ಸುಮಿತ್ರಾ ಕವಲೂರ, ಬಸಮ್ಮ ಚನ್ನಳ್ಳಿ, ಬಡಿಮಾ ಶೇಖ್, ಸೋಮಕ್ಕ ತಳವಾರ, ನೇತ್ರಾ ಡಂಬಳಮಠ, ಯಲ್ಲಮ್ಮ ಕಿಡದಾಳ ಇತರರಿದ್ದರು.

    ಸಾರ್ವಜನಿಕ ಉದ್ದಿಮೆ ಖಾಸಗೀಕರಣ ಬೇಡ

    ರೋಣ: ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿರುವುದು ಸೇರಿದಂತೆ ಸ್ಥಳೀಯ ಮಟ್ಟದ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿವಿಧ ಸಂಘಟನೆಗಳು ಗುರುವಾರ ಕೈಗೊಂಡ ಮುಷ್ಕರಕ್ಕೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ಗುರುವಾರ ಸಂತೆ ದಿನವಾಗಿದ್ದರಿಂದ ಎಂದಿನಂತೆ ಬಹುತೇಕ ಮಳಿಗೆ, ಹೋಟೆಲ್​ಗಳು ತೆರೆದಿದ್ದವು. ಸಾರಿಗೆ ಸಂಸ್ಥೆಯ ವಾಹನಗಳು, ಆಟೋಗಳು ಎಂದಿನಂತೆ ರಸ್ತೆಗಿಳಿದಿದ್ದವು. ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಸಿದ್ಧಾರೂಢ ಮಠದಿಂದ ಪೋತರಾಜಕಟ್ಟೆ ವರೆಗೆ ಬೃಹತ್ ರ‍್ಯಾಲಿ ನಡೆಸಿ ಕೆಲ ಹೊತ್ತು ವಾಹನ ಸಂಚಾರ ತಡೆ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ರೈತ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಲೀಲಾ ಚಿತ್ರಗಾರ ಮಾತನಾಡಿದರು. ಮಹೇಶ ಹಿರೇಮಠ, ಮಾರುತಿ ಸೆಗಣಿ, ಹನುಮಂತ ತಾಳಿ, ಮೈಲಾರಪ್ಪ ಮಾದರ, ಮುತ್ತಣ್ಣ ಚೌಡರಡ್ಡಿ, ಮೇಘರಾಜ ಭಾವಿ, ಮಹಾದೇವಗೌಡ ಪಾಟೀಲ, ಸಲೀಂ ಹುಲ್ಲೂರ, ಶೋಭಾ ಭಜಂತ್ರಿ, ಗಂಗಮ್ಮ ಪೂಜಾರ, ರೇಣುಕಾ ತಳವಾರ ಇತರರಿದ್ದರು.

    ಪೊಲೀಸರೊಂದಿಗೆ ವಾಗ್ವಾದ

    ಗಜೇಂದ್ರಗಡ: ಪಟ್ಟಣದಲ್ಲಿ ರೈತ, ಕಾರ್ವಿುಕ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಕೆ.ಕೆ. ಸರ್ಕಲ್​ನಲ್ಲಿ ಮಾನವ ಸರಪಳಿ ರಚಿಸಿ ವಾಹನ ಸಂಚಾರ ತಡೆ ನಡೆಸಲಾಯಿತು.

    ಈ ವೇಳೆ ರಸ್ತೆ ತಡೆ ಮಾಡದಂತೆ ಪೊಲೀಸರು ತಡೆದಾಗ ಪ್ರತಿಭಟನಾಕಾರರು ವಾಗ್ವಾದಕ್ಕಿಳಿದರು. ಪೊಲೀಸರು ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು ರಾಜಕಾರಣಿಗಳ ಕೈಗೊಂಬೆಯಾಗ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ಘೊರ್ಪಡೆ ಮಾತನಾಡಿ, ಸರ್ಕಾರ ಕೂಡಲೆ ಜನ ವಿರೋಧಿ ನೀತಿಗಳನ್ನು ಕೈ ಬಿಡಬೇಕು ಎಂದರು. ಬಳಿಕ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ಸಿಪಿಐ ಎಂ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ, ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ಪುರಸಭೆ ಸದಸ್ಯ ಮುರ್ತಜಾ ಡಾಲಾಯತ, ಬಾಲು ರಾಠೋಡ, ಚಂದ್ರು ರಾಠೋಡ, ಮೆಹಬೂಬ್ ಹವಾಲ್ದಾರ್, ಬಸವರಾಜ ಶೀಲವಂತರ, ಬಸವರಾಜ ಬಂಕದ, ಶರಣಪ್ಪ ಚಳಗೇರಿ, ಹಸನ ತಟಗಾರ, ಮಾಸುಮಲಿ ಮದಗಾರ, ದಾವಲಬಿ ಅಬ್ಬಿಗೇರಿ, ನಾಗನಗೌಡ ಗೌಡ್ರ, ಶಾಂತಣ್ಣ ಸಜ್ಜನರ, ಲಿಂಗಯ್ಯ ಮಾಸ್ತಕಟ್ಟಿ, ಗಂಗಯ್ಯ ಬೆನಹಾಳ, ಶಾಂತಮ್ಮ, ಗಿರಿಜಾ ರಾಠೋಡ, ನೀಲಮ್ಮ ಹಿರೇಮಠ, ಆರ್.ಎಸ್. ಗದಗಿನಮಠ, ಎಸ್.ಸಿ. ಇಂಡಿ ಇತರರಿದ್ದರು.

    ನರಗುಂದದಲ್ಲಿ ವಾಹನ ಸಂಚಾರ ತಡೆ

    ನರಗುಂದ: ತಾಲೂಕಿನ ಅಂಗನವಾಡಿ, ಅಕ್ಷರ ದಾಸೋಹ, ಗ್ರಾಪಂ ನೌಕರರು ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಪಟ್ಟಣದ ಪುರಸಭೆಯಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಬಳಿಕ ವಾಹನ ಸಂಚಾರ ತಡೆ ನಡೆಸಿದರು.

    ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಶಿವಾನಂದ ಭೋಸಲೆ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ದುಂಡಮ್ಮ ಬಳಿಗೇರ,

    ಸಿಐಟಿಯು ತಾಲೂಕು ಸಂಚಾಲಕ ಯಲ್ಲಪ್ಪ ಪೂಜಾರ ಮಾತನಾಡಿದರು. ಶಾರದಾ ರೋಣದ, ಗಿರಿಜಾ ಮಾಚಕನೂರ, ಲಕ್ಷ್ಮೀಬಾಯಿ ಗಾಯಕವಾಡ, ಶಾರದಾ ಹಳೇಮನಿ, ನೀಲಗಂಗಾ ಮಾದರ, ಮಂಜುಳಾ ಮುಳ್ಳೂರ, ಬೇಬಿ ದೊಡಮನಿ, ರಮೇಶ ವಾಸನ, ಬಿಬಿಜಾನ ಮುಲ್ಲಾ, ಸರಸ್ವತಿ ಹಾಲಿಗೇರಿ, ಯಶೋಧಾ ಶೆಟ್ಟೆಣ್ಣವರ, ಬಸಮ್ಮ ಗುರಿಕಾರ ಉಪಸ್ಥಿತರಿದ್ದರು.

    * ಕೇಂದ್ರ ಸರ್ಕಾರ ರೂಪಿಸಿರುವ ಕಾರ್ವಿುಕರ, ರೈತ ವಿರೋಧಿ ಕಾನೂನು ಹಿಂಪಡೆಯಬೇಕು.

    * ಎಪಿಎಂಸಿ, ಭೂಸುಧಾರಣೆ ಮೊದಲಾದ ಕೃಷಿ ಸಂಬಂಧಿತ ಸುಗ್ರೀವಾಜ್ಞೆ ವಾಪಸ್ ಪಡೆಯಬೇಕು

    * ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿ, ಅಸಂಘಟಿತ ಕಾರ್ವಿುಕರ ಕಲ್ಯಾಣಕ್ಕೆ ಹಣಕಾಸು ನೆರವು ಒದಗಿಸಬೇಕು.

    * ಉದ್ಯೋಗ ಮತ್ತು ಸಾಮಾಜಿಕ ಭದ್ರತೆ, ವಸತಿ ಸೌಲಭ್ಯ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.

    * ಶಿಕ್ಷಣ ಆರೋಗ್ಯ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಮುಂತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಸಬೇಕು.

    * ಗ್ರಾಮೀಣ ಪ್ರದೇಶದಲ್ಲಿ 200 ದಿನಗಳ ಉದ್ಯೋಗ ನೀಡಿ ಕನಿಷ್ಠ 600 ರೂ. ಕೂಲಿ ನೀಡಬೇಕು

    * ನಗರ ಪ್ರದೇಶಗಳಿಗೆ ಉದ್ಯೋಗ ಖಾತರಿ ವಿಸ್ತರಿಸಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts