More

    Protein Poisoning: ಅಗತ್ಯಕ್ಕಿಂತ ಹೆಚ್ಚು ಪ್ರೊಟೀನ್ ಸೇವಿಸಿದ್ರೆ ಏನೆಲ್ಲ ಆರೋಗ್ಯ ಸಮಸ್ಯೆಗಳು ಕಾಡಲಿವೆ?

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತುಂಬಾ ಆಕರ್ಷಕವಾಗಿ ಕಾಣುವ ಬಯಕೆ ಇದೆ. ಹೀಗಾಗಿ ಕೆಲವರು ದೇಹದ ಆಕಾರವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಾರೆ. ಸ್ಲಿಮ್ ಮತ್ತು ಫಿಟ್ ಆಗಿರಲು ಬಹುತೇಕರು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಗಂಟೆಗಟ್ಟಲೆ ವ್ಯಾಯಾಮವನ್ನೂ ಮಾಡುತ್ತಾರೆ. ಅಲ್ಲದೆ, ಗಂಟೆಗಳ ವ್ಯಾಯಾಮಕ್ಕಾಗಿ ಪ್ರೊಟೀನ್ ಭರಿತ ಆಹಾರಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ.

    ಪ್ರೊಟೀನ್ ಸೇವಿಸುವುದರಿಂದ ದೀರ್ಘಕಾಲ ಹಸಿವಾಗುವುದಿಲ್ಲ. ಇದಲ್ಲದೆ, ಪ್ರೊಟೀನ್ ದೇಹದಲ್ಲಿನ ಜೀವಕೋಶಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮ ಮತ್ತು ಕೂದಲಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಪ್ರೊಟೀನ್ ದೇಹಕ್ಕೆ ಉತ್ತಮವಾದ ಸೂಕ್ಷ್ಮ ಪೋಷಕಾಂಶವಾಗಿದೆ. ಆದರೆ ಯಾವುದನ್ನಾದರೂ ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ನೀವು ಹೆಚ್ಚು ಪ್ರೊಟೀನ್ ಸೇವಿಸಿದರೆ, ವಿವಿಧ ಆರೋಗ್ಯ ಸಮಸ್ಯೆಗಳ ಸಾಧ್ಯತೆಗಳಿವೆ. ಇದನ್ನು ಪ್ರೊಟೀನ್ ವಿಷ ಎಂದು ಕರೆಯಲಾಗುತ್ತದೆ.

    ಆಹಾರದಲ್ಲಿ ಎಷ್ಟು ಪ್ರೊಟೀನ್ ಇರಬೇಕು?

    ತಜ್ಞರ ಪ್ರಕಾರ ನಮ್ಮ ದೇಹದ ಪ್ರತಿ ಒಂದು ಕೆಜಿಗೆ 1 ಗ್ರಾಂ ಪ್ರೊಟೀನ್ ಇರಬೇಕು. ಇದಲ್ಲದೆ, ದೇಹದಲ್ಲಿ ಕಾರ್ಬೋಹೈಡ್ರೇಟ್​ಗಳು ಮತ್ತು ಕೊಬ್ಬಿನಾಂಶ ಪ್ರಮಾಣವು ಸರಿಯಾದ ಮಟ್ಟದಲ್ಲಿರಬೇಕು. ಹೆಚ್ಚಿನ ಪ್ರೊಟೀನ್ ಸೇವನೆಯಿಂದ ಪ್ರೊಟೀನ್ ವಿಷದ ಸಾಧ್ಯತೆಗಳಿವೆ. ಒಂದು ವೇಳೆ ಪ್ರೊಟೀನ್​ ವಿಷವಾದರೆ ಏನು ಸಮಸ್ಯೆ ಕಾಡಲಿದೆ ಎಂಬುದನ್ನು ಇದೀಗ ತಿಳಿಯೋಣ.

    ಇದನ್ನೂ ಓದಿ: ವಿಶ್ವಕ್ಕೆ ವರವಾದ ಕ್ಯಾಮರಾ ಅನ್ವೇಷಣೆ  -ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಹೇಳಿಕೆ -ವಿಶ್ವ ಛಾಯಾಗ್ರಹಣ ದಿನಾಚರಣೆ

    ತೂಕ ಹೆಚ್ಚಳ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳದಿಂದ ಬಳಲುತ್ತಿದ್ದಾರೆ. ಈ ತೂಕ ಹೆಚ್ಚಳ ಪರಿಣಾಮ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಎದುರಾಗುತ್ತಿವೆ. ಪ್ರೊಟೀನ್​ಯುಕ್ತ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಈ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ತಜ್ಞರು.

    ನಿರ್ಜಲೀಕರಣ: ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರೊಟೀನ್ ಸೇವಿಸುವುದರಿಂದ ನಿರ್ಜಲೀಕರಣವಾಗುವ ಸಾಧ್ಯತೆ ಇದೆ. ಪ್ರೊಟೀನ್ ಜೀರ್ಣಿಸಿಕೊಳ್ಳಲು ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ಆದರೆ, ಅಧಿಕ ಪ್ರೊಟೀನ್ ಕಾರಣದಿಂದ ನೀರು ಮೂತ್ರದ ರೂಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಹದಿಂದ ಹೊರಹೋಗುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.

    ಖಿನ್ನತೆ: ಆಹಾರದಲ್ಲಿ ಹೆಚ್ಚು ಪ್ರೊಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದರಿಂದ ಉದ್ವೇಗ, ಆತಂಕ, ಖಿನ್ನತೆ ಮತ್ತು ನಕಾರಾತ್ಮಕ ಭಾವನೆಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ದೇಹದಲ್ಲಿ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ ಮತ್ತು ಖಿನ್ನತೆಯನ್ನು ಉಂಟುಮಾಡುತ್ತದೆ. (ಏಜೆನ್ಸೀಸ್​)

    19ನೇ ಆವೃತ್ತಿಯ ಏಷ್ಯನ್ ಕ್ರೀಡಾಕೂಟ: ಖಾಕಿಯಲ್ಲಿ ಕಂಗೊಳಿಸಿದ ಭಾರತ

    ವಿನೂ ಮಂಕಡ್ ಟ್ರೋಫಿ ಕರ್ನಾಟಕ ರಾಜ್ಯ ತಂಡದಲ್ಲಿ ಟೀಮ್ ಇಂಡಿಯಾ ಕೋಚ್ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts