More

    19ನೇ ಆವೃತ್ತಿಯ ಏಷ್ಯನ್ ಕ್ರೀಡಾಕೂಟ: ಖಾಕಿಯಲ್ಲಿ ಕಂಗೊಳಿಸಿದ ಭಾರತ

    ಹಾಂಗ್‌ರೆೌ: ಆಧುನಿಕ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳೊಂದಿಗೆ ಆತಿಥೇಯ ಚೀನಾ ಹೊಸ ಮಾಯಾಲೋಕವನ್ನೇ ಸೃಷ್ಟಿಸುವುದರೊಂದಿಗೆ 19ನೇ ಆವೃತ್ತಿಯ ಏಷ್ಯನ್ ಕ್ರೀಡಾಕೂಟ, ಬೃಹತ್ ಕಮಲದ ಆಕಾರದ ಒಲಿಂಪಿಕ್ ಸ್ಪೋರ್ಟ್ಸ್ ಎಕ್ಸ್‌ಪೋ ಸೆಂಟರ್‌ನಲ್ಲಿ ಶನಿವಾರ ವರ್ಣರಂಜಿತ ಆರಂಭ ಕಂಡಿತು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ‘ಆಟಗಳು ತೆರೆದಿವೆ’ ಎಂದು ೋಷಿಸುವ ಮೂಲಕ 16 ದಿನಗಳ ಕ್ರೀಡಾಹಬ್ಬಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
    ಸಮಾರಂಭಕ್ಕೆ ಸಾಕ್ಷಿಯಾದ ಏಷ್ಯನ್ ಒಲಿಂಪಿಕ್ಸ್ ಕೌನ್ಸಿಲ್‌ನ ಹಂಗಾಮಿ ಅಧ್ಯಕ್ಷ (ಒಸಿಎ) ರಣಧೀರ್ ಸಿಂಗ್ ಮಾತನಾಡಿ, ಕ್ರೀಡಾಕೂಟದ ಆಯೋಜನೆಗೆ ಹೆಮ್ಮೆ ಎನಿಸಿದ್ದು, ‘ಹೃದಯದಿಂದ ಹೃದಯದ ಭವಿಷ್ಯ’ ಎಂಬುದು ಕೇವಲ ಏಷ್ಯಾಡ್‌ನ ೋಷವಾಕ್ಯವಾಗಿಲ್ಲ, ಬದಲಾಗಿ ಭವಿಷ್ಯವೂ ಆಗಿದೆ ಎಂದರು.

    ಖಾಕಿಯಲ್ಲಿ ಕಂಗೊಳಿಸಿದ ಭಾರತ: ಕ್ರೀಡಾಪಟುಗಳ ಪಥಸಂಚಲನದಲ್ಲಿ ಪುರುಷರ ಹಾಕಿ ತಂಡದ ನಾಯಕ ಹರ್ಮಾನ್‌ಪ್ರೀತ್ ಸಿಂಗ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ಧ್ವಜಧಾರಿಗಳಾಗಿ 100ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ಮುನ್ನಡೆಸಿದರು. ಭಾರತ ತಂಡ ಪುರುಷ ಸ್ಪರ್ಧಿಗಳು ಖಾಕಿ ಬಣ್ಣದ ಕುರ್ತಾ ಹಾಗೂ ಮಹಿಳೆಯರು ಖಾಕಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರು. ಈ ಸಮವಸವನ್ನು ಮರುಬಳಕೆಗೆ ಯೋಗ್ಯವಾದ ವಸ್ತುಗಳಿಂದ ಸಿದ್ಧಪಡಿಲಾಗಿದೆ. ಭಾರತ 8ನೇ ತಂಡವಾಗಿ ಪರೇಡ್‌ನಲ್ಲಿ ಹೆಜ್ಜೆಹಾಕಿತು. ಟೆನಿಸ್ ತಂಡದಿಂದ ರಾಮ್‌ಕುಮಾರ್ ರಾಮನಾಥನ್ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾರತದಿಂದ ಒಟ್ಟು 655 ಕ್ರೀಡಾಪಟುಗಳು ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಆತಿಥ್ಯ ಚೀನಾದಿಂದ 887 ಕ್ರೀಡಾಪಟುಗಳು ಕಣದಲ್ಲಿದ್ದಾರೆ.

    ಜ್ಯೋತಿ ಬೆಳಗಿದ ಒಲಿಂಪಿಕ್ಸ್ ಚಾಂಪಿಯನ್: ಲಂಡನ್ ಒಲಿಂಪಿಕ್ಸ್ ಪದಕ ವಿಜೇತ ಚೀನಾದ ಈಜು ಆಟಗಾರ ಯಿ ಶಿವೆನ್ ಹಾಗೂ ವಿಶ್ವ ನಂ.1 ಟೇಬಲ್ ಟೆನಿಸ್ ಆಟಗಾರ ್ಯಾನ್ ಝೆಂಡಾಂಗ್ ಕ್ರೀಡಾಜ್ಯೋತಿಯನ್ನು ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ವಾಂಗ್ ಶೂನ್ ಅವರಿಗೆ ನೀಡಿದರು. ಡಿಜಿಟಲ್ ತಂತ್ರಜ್ಞಾನದ ಮೂಲಕ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.

    ಕೃತಕ ಬುದ್ಧಿಮತ್ತೆ ಪ್ರದರ್ಶನ: ಚೀನಾದ ಆಧುನಿಕ ಹಾಗೂ ಸಾಂಪ್ರದಾಯಿಕ ದೃಷ್ಟಿಕೋನದ ಥೀಮ್‌ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯ ಪ್ರದರ್ಶನ ಪ್ರಮುಖ ಆಕರ್ಷಣೆ ಎನಿಸಿತು. ಏಷ್ಯಾದ ಜನತೆಯ ಒಗ್ಗಟ್ಟು, ಪ್ರೀತಿ ಹಾಗೂ ಗೆಳೆತನವನ್ನು ಕೃತಕ ಬುಧ್ಧಿಮತ್ತೆ ಬಳಸಿ ಕಲಾವಿದರು ಪ್ರದರ್ಶನ ನೀಡುವ ಮೂಲಕ ತಂತ್ರಜ್ಞಾನದಲ್ಲಿನ ಸಾಧನೆಯನ್ನು ಚೀನಾ ಪರಿಚಯಿಸಿತು. ತಂತ್ರಜ್ಞಾನದಲ್ಲಿ ಅಧುನಿಕ ಪ್ರಗತಿ ಸಾಧಿಸುತ್ತಿರುವ ಚೀನಾ ಹಾಗೂ ಸಾವಿರ ವರ್ಷ ಹಳೆಯದಾದ ಪ್ರಾಚೀನ ಚೀನಿ ಸಂಪ್ರದಾಯ, ಸಂಸ್ಕೃತಿಯನ್ನು ಅನಾವರಣಗೊಳಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts