More

    ನೂತನ ಶಾಖೆ ತೆರೆಯಲು ಆರ್‌ಬಿಐಗೆ ಪ್ರಸ್ತಾವನೆ

    ಶಿವಮೊಗ್ಗ: ಜಿಲ್ಲೆಯ ಗ್ರಾಹಕರ ಅನುಕೂಲಕ್ಕಾಗಿ 10 ನೂತನ ಶಾಖೆಗಳನ್ನು ಮುಂದಿನ ವರ್ಷ ತೆರೆಯಲು ತೀರ್ಮಾನಿಸಲಾಗಿದೆ. ಇದಕ್ಕೆ ಅನುಮತಿ ನೀಡುವಂತೆ ಆರ್‌ಬಿಐಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.

    2024ನೇ ಸಾಲಿನ ಕ್ಯಾಲೆಂಡರ್ ಹಾಗೂ ಡೇರಿಯನ್ನು ಬುಧವಾರ ಬಿಡುಗಡೆ ಮಾಡಿ ಮಾತನಾಡಿ, ಮುಂದಿನ ವರ್ಷ ನಮ್ಮ ಠೇವಣಿ ಸಂಗ್ರಹ ಪ್ರಮಾಣವನ್ನು 1,350 ಕೋಟಿ ರೂ.ಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
    ಡಿಸೆಂಬರ್ ತಿಂಗಳನ್ನು ಠೇವಣಿ ಮಾಸಾಚರಣೆ ಎಂದು ಘೋಷಿಸಿದ್ದು, 100 ಕೋಟಿ ರೂ. ಸಂಗ್ರಹ ಗುರಿಯಿದೆ. ಇದುವರೆಗೆ ಬ್ಯಾಂಕ್‌ನ ಒಟ್ಟು ಠೇವಣಿ ಸಂಗ್ರಹ 1,293 ಕೋಟಿ ರೂ. ಇದೆ. ಠೇವಣಿ ಸಂಗ್ರಹದಲ್ಲಿ ನಮ್ಮ ಬ್ಯಾಂಕ್ ಬೆಂಗಳೂರು ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. 12.69 ಕೋಟಿ ರೂ. ನಿವ್ವಳ ಲಾಭ ಗಳಿಸಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದ್ದೇವೆ ಎಂದು ತಿಳಿಸಿದರು.
    ಮುಂದಿನ ವರ್ಷ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು. ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಸೂಚನೆಯಂತೆ ಸಹಕಾರ ಸಂಘಗಳನ್ನು ಬಹು ಉದ್ದೇಶಿತ ಕೇಂದ್ರಗಳಾಗಿ ರೂಪಿಸಲಾಗುವುದು. ಅಲ್ಲಿ ಎಲ್ಲ ರೀತಿಯ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
    ಸಹಕಾರ ಸಂಘಗಳ ಮೂಲಕ ಜನೌಷಧ ಕೇಂದ್ರ, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿಗಳನ್ನೂ ಸ್ಥಾಪಿಸಲಾಗುವುದು. ಕೇವಲ ಸಾಲ ನೀಡುವುದು, ಸಾಲ ವಸೂಲಾತಿ ಮಾಡುವುದಕ್ಕೆ ಸೀಮಿತವಾಗಿದ್ದ ಸಹಕಾರ ಸಂಘಗಳಿಗೆ ಹೊಸ ರೂಪ ನೀಡಲಾಗುವುದು. ಕೇಂದ್ರ ಸಹಕಾರ ಸಚಿವರ ಚಿಂತನೆ ಅರ್ಥಪೂರ್ಣವಾಗಿದ್ದು ಅದನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುವುದು ಎಂದರು.
    ಬ್ಯಾಂಕ್‌ನ ಉಪಾಧ್ಯಕ್ಷ ಎಚ್.ಎಲ್.ಷಡಕ್ಷರಿ, ನಿರ್ದೇಶಕರಾದ ಕೆ.ಪಿ.ದುಗ್ಗಪ್ಪ ಗೌಡ, ಜಿ.ಎನ್.ಸುಧೀರ್, ಎಂ.ಎಂ.ಪರಮೇಶ್, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ವಾಸುದೇವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts