More

    ಪರಿಸರ ಉಳಿಸಿ, ನೆಲ-ಜಲ ಸಂರಕ್ಷಿಸಿ

    ಯಾದಗಿರಿ: ಕೃಷಿ ಪರಿಸರವನ್ನು ಅರ್ಥ ಮಾಡಿಕೊಂಡು ಅದರ ಉಳಿವಿಗಾಗಿ ಎಲ್ಲರೂ ಕೈಜೋಡಿಸಿದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನೆಲ- ಜಲವನ್ನು ಸಂರಕ್ಷಣೆ ಮಾಡಲು ಸಾಧ್ಯ ಮತ್ತು ಅದು ನಮ್ಮೆಲರ ಹೊಣೆ ಕೂಡ ಆಗಿದೆ ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಕೃಷ್ಣ ಸಲಹೆ ನೀಡಿದರು.

    ಸುರಪುರ ತಾಲೂಕಿನ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯ್ದ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಪಿಡಿಒಗಳಿಗೆ ಕೃಷಿ ಪರಿಸರ ಮತ್ತು ಜೀವನೋಪಾಯಗಳು ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತೀಕರಣದ ಭರಾಟೆಯಲ್ಲಿ ಮನುಷ್ಯ ಅರಣ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುತ್ತಿದ್ದಾನೆ. ಇದರಿಂದ ಭವಿಷ್ಯದಲ್ಲಿ ಭೂಮಿಯ ತಾಪಮಾನ ಹೆಚ್ಚಾಗಿ ಗಂಭೀರ ಸಮಸ್ಯೆ ತಲೆದೂರಲಿದೆ ಎಂದು ಎಚ್ಚರಿಕೆ ನೀಡಿದರು.

    ಸಹಾಯಕ ಪ್ರಾಧ್ಯಾಪಕ ಡಾ. ಧನ್ಯ ಮಾತನಾಡಿ, ಕೃಷಿಯಲ್ಲಿ ಕೇವಲ ಹಣ ಗಳಿಸುವುದು ಮುಖ್ಯವಲ್ಲ. ನಮ್ಮ ಆರೋಗ್ಯವನ್ನು ಸಹ ಕಪಾಡಿಕೊಳ್ಳಬಹುದು ಎಂದು ತಿಳಿಸಿದರು.

    ಕೆವಿಕೆ ಹಿರಿಯ ವಿಜ್ಞಾನಿಗಳು ಡಾ.ಅಮರೇಶ್ ವೈ.ಎಸ್. ಮಾತನಾಡಿ, ಕೃಷಿಯಲ್ಲಿ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ರಾಸಾಯನಿಕ ಗೊಬ್ಬರಗಳ ಕರ್ಚನ್ನು ಕಡಿಮೆ ಮಾಡುವ ಮತ್ತು ಅದರಿಂದಾಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು. ಬೆಳೆಗಳಿಗೆ ಪೋಷಕಾಂಶಗಳನ್ನು ಬಳಸುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಿ. ಅದರ ಫಲಿತಾಂಶ ಆಧರಿಸಿ ಬೆಳೆಗಳಿಗೆ ಪೋಷಕಾಂಶಗಳನ್ನು ಬಳಸುವುದರಿಂದ ರೈತರು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.


    ಡಾ.ಉಮೇಶ ಬಾರಿಕರ, ಡಾ.ಮಹೇಶ, ಡಾ.ಸತೀಶ ಕುಮಾರ ಕಾಳೆ, ಡಾ.ಮಲ್ಲಿಕಾಜರ್ುನ ಕೆಂಗನಾಳ, ಡಾ.ಶಾಂತವೀರಯ್ಯ, ರಾಘವೇಂದ್ರ ಮತ್ತು ಗ್ರಾಪಂ ಪ್ರತಿನಿಧಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts