More

    17ರಿಂದ ಶೈಕ್ಷಣಿಕ ಚಟುವಟಿಕೆ ಶುರು

    ವಿಜಯಪುರ: ಮಹಾಮಾರಿ ಕರೊನಾದಿಂದ ಕಳೆದ ಎಂಟು ತಿಂಗಳಿಂದ ಬಂದ್ ಆಗಿದ್ದ ರಾಜ್ಯದ ಏಕೈಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆ ನ. 17 ರಿಂದ ಆರಂಭಗೊಳ್ಳಲಿದೆ ಎಂದು ಪ್ರಭಾರ ಕುಲಪತಿ ಪ್ರೊ. ಓಂಕಾರ ಕಾಕಡೆ ಹೇಳಿದರು.
    ಪದವಿ, ಸ್ನಾತಕೋತ್ತರ ಪದವಿ ಪಠ್ಯಕ್ರಮಗಳು ಎಂದಿನಂತೆ ಆರಂಭಗೊಳ್ಳಲಿವೆ. ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಎಲ್ಲ ಕಾಲೇಜುಗಳು, ಮಂಡ್ಯ, ಸಿಂಧನೂರು, ಉಡತಡಿ ಮಹಿಳಾ ವಿವಿ ಕ್ಯಾಂಪಸ್‌ಗಳು ಆರಂಭಗೊಳ್ಳಲಿವೆ ಎಂದು ಬುಧವಾರ ಮಾಹಿತಿ ನೀಡಿದ್ದಾರೆ.
    ಈ ಸಂಬಂಧ ಎಲ್ಲ ಕಾಲೇಜು ಪ್ರಾಂಶುಪಾಲರಿಗೆ, ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ. ಅದರ ಜತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಮಹಿಳಾ ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳ ಆವರಣ, ತರಗತಿಗಳನ್ನು ಶುಚಿಯಾಗಿಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದ್ಯಾರ್ಥಿನಿಯರು ನ.17ರಿಂದ ಎಂದಿನಂತೆ ತರಗತಿಗಳಿಗೆ ಹಾಜರಾಗಬೇಕು. ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿನಿಯರು ಸ್ಯಾನಿಟೇಸರ್, ಮಾಸ್ಕ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts