More

    ಉತ್ಪನ್ನ ತಯಾರಿಕೆಗೆ ಇಲೆಕ್ಟ್ರಾನಿಕ್ಸ್ ಮೂಲಜ್ಞಾನ ಅವಶ್ಯ

    ಚಿಕ್ಕೋಡಿ: ತಂತ್ರಜ್ಞಾನ ಉಪಯೋಗಿಸಿ ಒಳ್ಳೆಯ ಉತ್ಪನ್ನ ತಯಾರಿಸಲು ಇಲೆಕ್ಟ್ರಾನಿಕ್ಸ್‌ನ ಮೂಲಜ್ಞಾನ ಅವಶ್ಯ ಎಂದು ಸಂಪನ್ಮೂಲ ವ್ಯಕ್ತಿ ಡಾ. ರಾಜಕುಮಾರ ಪಾತ್ರಾ ಹೇಳಿದರು.

    ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಎಐಸಿಟಿಇ ಟ್ರೇನಿಂಗ್ ಆ್ಯಂಡ್ ಲರ್ನಿಂಗ್ (ಅಟಲ್) ಅಕಾಡೆಮಿ ಪ್ರಯೋಜಕತ್ವದಡಿ ಸೋಮವಾರ ಹಮ್ಮಿಕೊಂಡಿದ್ದ ಒಂದು ವಾರದ ಐಒಟಿ ಫಾರ್ ಎಮರ್ಜಿಂಗ್ ಟೆಕ್ನಿಕಲ್ ಅಪ್ಲಿಕೇಷನ್ಸ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾಲೇಜು ಇಂತಹ ಕಾರ್ಯಾಗಾರ ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದರು.

    ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅಟಲ್ ಕಾರ್ಯಾಗಾರ ಹಮ್ಮಿಕೊಳ್ಳಲು ನಮ್ಮ ಕಾಲೇಜು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಇಂಟರನೆಟ್ ಆಫ್ ಥಿಂಗ್ಸ್ ಒಂದು ಮುಂಚೂಣಿಯಲ್ಲಿರುವ ತಂತ್ರಜ್ಞಾನ. ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು ಎಂದರು.

    ಶೈಕ್ಷಣಿಕ ಸಂಯೋಜಕ ಕುಮಾರ ಚೌಗಲಾ, ಪರೀಕ್ಷಾ ಸಂಯೋಜಕ ಸುನೀಲ ಹೆಬ್ಬಾಳೆ, ವಿಭಾಗ ಮುಖ್ಯಸ್ಥ ಡಾ. ಸಂಜಯ ಪೂಜಾರಿ, ಡಾ. ಸಂಜಯ ಹನಗಂಡಿ, ಡಾ.ಮಹಾಂತಯ್ಯ ಮಠಪತಿ, ಡಾ.ಸಚಿನ ಮೆಕ್ಕಳಕಿ, ಡಾ. ಸಂಜಯ ಅಂಕಲಿ, ಪ್ರದೀಪ ಹೊದ್ಲೂರ, ಸುನೀಲ ಶಿಂಧೆ, ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ. ಗೊಳ್ಳಗಿ, ಮಹಾಲಕ್ಷ್ಮೀ ಅರಮಣಿ, ಶ್ರುತಿ ಗಾಯಕವಾಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts