More

    ತೆರೆಮೇಲೆ ಮತ್ತೆ ಮುನ್ನಾಭಾಯಿ, ಸರ್ಕಿಟ್​ ಮೋಡಿ!?

    ‘ಮುನ್ನಾಭಾಯಿ ಎಂಬಿಬಿಎಸ್​’, ‘ಲಗೇ ರಹೋ ಮುನ್ನಾಭಾಯಿ’ ಸಿನಿಮಾಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ನಿರ್ದೇಶಕ ರಾಜ್​ಕುಮಾರ್ ಹಿರಾನಿ ಕೈ ಚಳಕದಲ್ಲಿ ಮೂಡಿ ಬಂದ ಆ ಎರಡು ಸಿನಿಮಾಗಳು ಪ್ರೇಕ್ಷಕರ ಮನದಲ್ಲಿ ಇಂದಿಗೂ ಮಾಸ್ಟರ್​ಪೀಸ್​ ಆಗಿ ಉಳಿದಿವೆ. ಸಂಜಯ್​ ದತ್​ ಮತ್ತು ಅರ್ಷದ್​ ವಾರ್ಸಿ ಕಾಂಬಿನೇಷನ್​ ನೋಡುಗರಿಂದ ಮೆಚ್ಚುಗೆ ಅಷ್ಟೇ ಅಲ್ಲ ಈ ಜೋಡಿಯ ಮತ್ತಷ್ಟು ಸಿನಿಮಾಗಳು ಬರಲಿ ಎಂದು ಬೇಡಿಕೆ ಇಟ್ಟಿದ್ದು ಇದೆ. ಇದೀಗ ತುಂಬ ವರ್ಷಗಳ ಬಳಿಕ ಈ ಜೋಡಿಯನ್ನು ಒಟ್ಟಿಗೆ ತೆರೆಗೆ ತರುವ ಕೆಲಸ ಬಾಲಿವುಡ್​ನಲ್ಲಿ ನಡೆಯುತ್ತಿದೆ.

    ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ‘ಓಂ’ ಹವಾ!

    2003ರಲ್ಲಿ ‘ಮುನ್ನಾಭಾಯಿ ಎಂಬಿಬಿಎಸ್​’ ತೆರೆಗೆ ಬಂದರೆ, 2006ರಲ್ಲಿ ‘ಲಗೇ ರಹೋ ಮುನ್ನಾಭಾಯಿ’ ಸಿನಿಮಾ ಬಿಡುಗಡೆಯಾಗಿತ್ತು. ಅದಾದ ಮೇಲೆ ‘ಧಮಾಲ್​’ ಸೇರಿ ಕೆಲ ಸಿನಿಮಾದಲ್ಲಿ ಕಾಣಿಸಿಕೊಂಡರೂ ಪೂರ್ಣ ಪ್ರಮಾಣದಲ್ಲಿ ಸಂಜಯ್​ ದತ್​ ಮತ್ತು ಅರ್ಷದ್​ ಒಟ್ಟಿಗೆ ಬೇರೆ ಸಿನಿಮಾದಲ್ಲಿ ಜತೆಯಾಗಲಿಲ್ಲ. ಆ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ ನಿರ್ಮಾಪಕ ಸಂದೀಪ್​ ಸಿಂಗ್​ ಕಾಮಿಡಿ ಶೈಲಿಯ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ: ಕೆಜಿಎಫ್ ಹಾಡುಗಳ ಕೆಲಸ ಶುರು

    ಕಳೆದ ವರ್ಷವೇ ಈ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿತ್ತಾದರೂ, ಯಾವುದೂ ಅಧಿಕೃತವಾಗಿರಲಿಲ್ಲ. ಸಂಜಯ್​ ದತ್​ ಡಾನ್​ ಪಾತ್ರ ನಿಭಾಯಿಸಲಿದ್ದು, ಆ ಚಿತ್ರದಲ್ಲಿ ಕುರುಡನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆ ಕಣ್ಣು ಕಾಣದ ಡಾನ್​ಗೆ ಕಣ್ಣಾಗಿ, ಸ್ನೇಹಿತನಾಗಿ ಅರ್ಷದ್​ ವಾರ್ಸಿ ಇರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಆ ಸಿನಿಮಾ ಕೆಲಸಗಳಿಗೆ ನಿರ್ಮಾಪಕರು ಚಾಲನೆ ನೀಡಿದ್ದು, ಸ್ಕ್ರಿಪ್ಟಿಂಗ್​ ಸಹ ನಡೆಯುತ್ತಿದೆ. ಶೀಘ್ರದಲ್ಲಿ ನಿರ್ದೇಶಕ ಮತ್ತು ಇನ್ನುಳಿದ ತಾರಾಗಣದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರಂತೆ ನಿರ್ಮಾಪಕರು. (ಏಜೆನ್ಸೀಸ್​)

    ಪೊಲೀಸರ ಜತೆಗೆ ಪೈಲ್ವಾನ್ ಮತ್ತು ಬುದ್ಧಿವಂತ … ಕರೊನಾ ಬಗ್ಗೆ ಜಾಗೃತಿ ಮೂಡಿಸಲು ಹೊಸ ಹೆಜ್ಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts