More

    ‘ಹೇರಾ ಫೇರಿ 4’ ಚಿತ್ರದಲ್ಲಿ ವಿಲನ್​ ಆಗ್ತಾರಂತೆ ಸಂಜಯ್​ ದತ್​!

    ಮುಂಬೈ: ದಕ್ಷಿಣದಲ್ಲಿ ‘ಕೆಜಿಎಫ್​ 2’, ‘ಲಿಯೋ’, ‘ಕೆಡಿ’ ಮುಂತಾದ ಚಿತ್ರಗಳಲ್ಲಿ ವಿಲನ್​ ಆಗಿ ಕಾಣಿಸಿಕೊಂಡಿರುವ ಬಾಲಿವುಡ್​ನ ಖ್ಯಾತ ನಟ ಸಂಜಯ್​ ದತ್​, ಇದೀಗ ಬಾಲಿವುಡ್​ನಲ್ಲೊಂದು ಚಿತ್ರದಲ್ಲಿ ವಿಲನ್​ ಆಗಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಸಂಜು ಬಾಬ ವಿಲನ್​ ಆಗುತ್ತಿರುವ ಚಿತ್ರದ ಹೆಸರು ‘ಹೇರಾ ಫೇರಿ 4’.

    ಇದನ್ನೂ ಓದಿ: ಸಲಿಂಗ ಕಾಮದ ಅನುಭವವಿದೆಯೇ? ನೆಟ್ಟಿಗನ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್​ ಉತ್ತರ ವೈರಲ್​

    ಹಿಂದಿ ಚಿತ್ರರಂಗದ ಜನಪ್ರಿಯ ಚಿತ್ರಗಳಲ್ಲಿ ಅಕ್ಷಯ್​ ಕುಮಾರ್​, ಸುನೀಲ್​ ಶೆಟ್ಟಿ ಮತ್ತು ಪರೇಶ್​ ರಾವಲ್​ ಅಭಿನಯದ ‘ಹೇರಾ ಫೇರಿ’ ಸಹ ಒಂದು. ಈ ಚಿತ್ರ ಸೂಪರ್​ ಹಿಟ್​ ಆಗಿ, ಆ ನಂತರ ‘ಫಿರ್​ ಹೇರಾ ಫೇರಿ’ ಎಂಬ ಇನ್ನೊಂದು ಚಿತ್ರವೂ ಬಿಡುಗಡೆಯಾಯ್ತು. ಈಗ ಒಂದು ವರ್ಷದಿಂದ ‘ಹೇರಾ ಫೇರಿ’ ಸರಣಿಯಲ್ಲಿ ಇನ್ನೊಂದು ಚಿತ್ರ ಬರುತ್ತದೆ ಎಂಬ ಸುದ್ದಿ ಇತ್ತು.

    ಅದಕ್ಕೆ ಸರಿಯಾಗಿ ಇತ್ತೀಚೆಗೆ ‘ಹೇರಾ ಫೇರಿ 4’ ಚಿತ್ರದ ಪ್ರೋಮೋ ಸಹ ಚಿತ್ರೀಕರಣವಾಗಿದ್ದು, ಮೂರು ತಿಂಗಳಲ್ಲಿ ಚಿತ್ರೀಕರಣ ಸಹ ಪ್ರಾರಂಭವಾಗಲಿದೆಯಂತೆ. ವಿಶೇಷವೆಂದರೆ, ಈ ಬಾರಿ ಚಿತ್ರ ಬರೀ ಭಾರತಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲವಂತೆ. ಬದಲಿಗೆ, ಅಂತಾರಾಷ್ಟ್ರೀಯ ಮಟ್ಟದ ಕಥೆ ಇದಾಗಿದ್ದು, ದುಬೈ, ಅಬುಧಾಬಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆಯಂತೆ.

    ಇದನ್ನೂ ಓದಿ: ಸತ್ಯ ಘಟನೆಯ 19.20.21; ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತನಾಗಿದ್ದ ವಿಠಲ್ ಕುರಿತ ಚಿತ್ರ

    ಇನ್ನೂ ಒಂದು ವಿಷಯವೆಂದರೆ, ಅಕ್ಷಯ್​ ಕುಮಾರ್​, ಸುನೀಲ್​ ಶೆಟ್ಟಿ ಮತ್ತು ಪರೇಶ್​ ರಾವಲ್​ ಎದುರು ವಿಲನ್​ ಆಗಿ ಸಂಜಯ್​ ದತ್​ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಯಾವಾಗ ಇಷ್ಟೆಲ್ಲಾ ಹೆಸರುಗಳು ಒಂದೇ ಚಿತ್ರದಲ್ಲಿ ಕೇಳಿಬಂದವೋ, ಆಗಲೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಉಂಟಾಗಿವೆ. ಅಂದಹಾಗೆ, ಈ ಚಿತ್ರವನ್ನು ಫಿರೋಜ್​ ನಡಿಯಾಡ್ವಾಲ ನಿರ್ಮಿಸಿದರೆ, ಫರ್ಹಾದ್​ ಸಾಮ್ಜಿ ನಿರ್ದೇಶನ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts