More

    ‘ರೈಡರ್’ ಮೇಲೆ ಹ್ಯಾಕರ್ಸ್ ಸವಾರಿ; ಪೊಲೀಸ್​ ಠಾಣೆ ಮೆಟ್ಟಿಲೇರಿದ ‘ಲಹರಿ’…

    ಬೆಂಗಳೂರು: ಕನ್ನಡ ಚಿತ್ರರಂಗವನ್ನು ಬಿಡದೇ ಕಾಡುತ್ತಿರುವ ಪೈರಸಿ ಕಾಟ ಮುಂದುವರಿದಿದ್ದು, ಇದೀಗ ಮತ್ತೊಂದು ಸಿನಿಮಾ ಕೂಡ ಪೈರಸಿಗೆ ಒಳಗಾಗಿದೆ. ಆ ಪಟ್ಟಿಗೆ ಈಗ ಹೊಸ ಸೇರ್ಪಡೆ ಎಂದರೆ ನಟ ನಿಖಿಲ್​ ಕುಮಾರಸ್ವಾಮಿ ಅಭಿನಯದ ‘ರೈಡರ್’. ತಮ್ಮ ಸಿನಿಮಾ ಪೈರಸಿಗೆ ಒಳಗಾದ್ದರಿಂದ ನಿರ್ಮಾಪಕ ಲಹರಿ ವೇಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವರು ಇಂದು ಉತ್ತರ ವಿಭಾಗದ ಸೈಬರ್​ ಕ್ರೈಮ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಇದನ್ನೂ ಓದಿ: ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ವಿಜಯ್​ಕುಮಾರ್ ಕೊಂಡ ನಿರ್ದೇಶನದಲ್ಲಿ ನಿಖಿಲ್​ ಕುಮಾರಸ್ವಾಮಿ, ಕಶ್ಮೀರ ಪರ್ದೇಸಿ, ಸಂಪದಾ, ಅನುಷಾ ರೈ, ಗರುಡರಾಮ್​, ಅಚ್ಯುತ್ ಕುಮಾರ್, ಚಿಕ್ಕಣ್ಣ ಮುಂತಾದವರು ಅಭಿನಯಿಸಿರುವ ‘ರೈಡರ್’​ ಚಿತ್ರ ಇದೇ ಶುಕ್ರವಾರ ಬಿಡುಗಡೆ ಆಗಿತ್ತು. ಆದರೆ ಅದನ್ನು ಪೈರಸಿ ಮಾಡಿದ್ದ ಕಿಡಿಗೇಡಿಗಳು ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೈರಸಿ ಕಾಪಿಯ ಲಿಂಕ್​ ಹಂಚಿಕೊಂಡಿದ್ದರು.

    ಇದನ್ನೂ ಓದಿ: ನಿನ್ನೆ ‘ಮೀಟ್​ ಮಾಡಣ ಇಲ್ಲ ಡೇಟ್ ಮಾಡಣ’, ಇಂದು ‘ನೋಡುತ.. ಸುಮ್ಮನೇ..’; ಮತ್ತೆ ಟಾಪ್​ಗೆ ಹೋದ ರಚಿತಾ ರಾಮ್​

    ತಮಿಳ್ ಬ್ಲಾಸ್ಟರ್ಸ್ ಪಾರ್ಟಿ ವೆಬ್​ನಲ್ಲಿ ರೈಡರ್ ಚಿತ್ರದ ನಕಲು ಪ್ರತಿ ಹಂಚಿಕೊಳ್ಳಲಾಗಿದ್ದು, ನಿರ್ಮಾಪಕ ಲಹರಿ ವೇಲು ಪೊಲೀಸರಿಗೆ ದೂರು ನೀಡಿ, ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ‘ಕನ್ನಡ ಚಿತ್ರರಂಗದ ಸಾಕಷ್ಟು ಚಿತ್ರಗಳು ಪೈರಸಿಯಿಂದಾಗಿ ನಷ್ಟ ಅನುಭವಿಸುತ್ತಿವೆ. ಕಿಡಿಗೇಡಿಗಳು ಚಿತ್ರವನ್ನು ಪೈರಸಿ ಮಾಡಿ ಟೆಲಿಗ್ರಾಮ್​ನಲ್ಲಿ ಲಿಂಕ್ ಹಂಚಿಕೊಳ್ಳುತ್ತಿದ್ದಾರೆ. ಈ ರೀತಿ ಸಿನಿಮಾಗಳನ್ನು ಪೈರಸಿ ಮಾಡಿದರೆ ನಿರ್ಮಾಪಕರು ಬೀದಿಗೆ ಬರುತ್ತಾರೆ. ಹೀಗೆ ಹ್ಯಾಕರ್ಸ್​ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಉತ್ತರ ವಿಭಾಗ ಡಿಸಿಪಿ ವಿನಾಯಕ ಪಾಟೀಲ್ ಅವರಿಗೆ ದೂರು ನೀಡಿದ್ದಾನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಿಡಿಗೇಡಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ. ಪೈರಸಿ ಸಂಬಂಧ ಮುಂದೆ ಮುಖ್ಯಮಂತ್ರಿ ಅವರನ್ನೂ ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗುವುದು’ ಎಂಬುದಾಗಿ ವೇಲು ತಿಳಿಸಿದ್ದಾರೆ.

    25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts