More

    ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಪಂ ಚುನಾವಣೆ ಬಹಿಷ್ಕಾರ

    ಕಳಸ: ಹೊರನಾಡು-ಶೃಂಗೇರಿ, ಬಲಿಗೆ-ಮೆಣಸಿನಹಾಡ್ಯ ರಸ್ತೆ ದುರಸ್ತಿಗೆ ಒತ್ತಾಯಿಸಿ ಚಿಕ್ಕನಕೂಡಿಗೆ, ದಂಟಗ, ತುರ, ಬಲಿಗೆ, ಕೆಸುವಿನಕೊಂಡ, ಕವನಹಳ್ಳಿ, ಮಣ್ಣಿನ್​ಪಾಲ್, ಹೊನ್ನೆಕಾಡು, ಮೆಣಸಿನಹಾಡ್ಯ, ಕಬ್ಬಿನಕುಂಬ್ರಿ ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

    ಹೊರನಾಡು- ಶೃಂಗೇರಿಗೆ ಬಲಿಗೆ – ಮೆಣಸಿನಹಾಡ್ಯ ಮೂಲಕ ಸಂಪರ್ಕ ಕಲ್ಪಿಸುವ ಹೊರನಾಡಿನಿಂದ ಬಲಿಗೆವರೆಗಿನ 6.5 ಕಿಮೀ ರಸ್ತೆ ದುರಸ್ತಿಗೆ 2018ರಲ್ಲಿ 8.50.ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿದಾರರು 5 ಕಿಮೀ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ. ಆದರೆ ಹೊರನಾಡಿನಿಂದ ಸುಮಾರು 1.5 ಕಿಮೀ ರಸ್ತೆ ಕಿರಿದಾಗಿದ್ದು, ಈ ರಸ್ತೆ ಅಗಲೀಕರಣಗೊಳಸದೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

    ಈ ಕುರಿತು ಕಳಸದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಈ ರಸ್ತೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ರಸ್ತೆ ಅಗಲೀಕರಣಗೊಳಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ರಸ್ತೆ ಅಗಲೀಕರಣಕ್ಕೆ ಮುಂದಾಗಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ಗ್ರಾಮಸ್ಥರು, ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದ್ದಾರೆ.

    ಅವೈಜ್ಞಾನಿಕ ರಸ್ತೆ ಅಭಿವೃದ್ಧಿ ಮತ್ತು ಕಳಪೆ ಕಾಮಗಾರಿ ವಿರೋಧಿಸಿ ಗ್ರಾಪಂ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ. 10 ದಿನದಲ್ಲಿ ಸ್ಪಷ್ಟವಾದ ಪರಿಹಾರ ದೊರೆಯದಿದ್ದಲ್ಲಿ ರಸ್ತೆ ತಡೆ, ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts