More

    ಕಾಬುಲ್​ನಾಚೆ ನಡೆಯಿತು, ತಾಲಿಬಾನ್​ ‘ವಿಜಯೋತ್ಸವ’!

    ಕಾಬುಲ್​: ಸಾವಿರಾರು ತಾಲಿಬಾನ್​ ಬೆಂಬಲಿಗರು ಇಂದು ಕಾಬುಲ್​ನ ಉತ್ತರಭಾಗಕ್ಕಿರುವ ಕೊಹ್​ದಾಮನ್​ ಪಟ್ಟಣದ ಮೈದಾನದಲ್ಲಿ ತಾಲಿಬಾನ್​​ ವಿಜಯೋತ್ಸವದಲ್ಲಿ ಭಾಗವಹಿಸಿದರು. ಅಫ್ಘಾನಿಸ್ತಾನದ ಆಳ್ವಿಕೆಯನ್ನು ತಾಲಿಬನ್​ ಪುನಃ ಪಡೆದಿರುವ ಬಗ್ಗೆ ವಿವಿಧ ನಾಯಕರು ಭಾಷಣಗಳನ್ನು ನೀಡಿದಂತೆ, ತಾಲಿಬಾನ್​ ಪರ ಘೋಷಣೆಗಳನ್ನು ಕೂಗಲಾಯಿತು ಎನ್ನಲಾಗಿದೆ.

    ತಾಲಿಬಾನ್​ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದ ನಂತರ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ನಡೆದಿದೆ ಎನ್ನಲಾಗಿದ್ದು, ಪುರುಷರು ಮತ್ತು ಬಾಲಕರು ಮಾತ್ರ ಭಾಗವಹಿಸಿದರು. ಟ್ರಕ್​ಗಳಲ್ಲಿ ಸ್ಥಳಕ್ಕೆ ಆಗಮಿಸಿದ ಜನರು, ಮನೆಯಲ್ಲೇ ಮಾಡಿದ ಪೋಸ್ಟರ್​ಗಳನ್ನು ಮತ್ತು ಕೆಂಪು-ಬಿಳುಪು ತಾಲಿಬಾನ್ ಹೆಡ್​ಬ್ಯಾಂಡ್​ಗಳನ್ನು ಧರಿಸಿ ತಮ್ಮ ಬೆಂಬಲ ಸೂಚಿಸಿದರು ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ವಿವಾದಿತ ಕೃಷಿ ಕಾನೂನುಗಳ ಬಗ್ಗೆ ಮನಬಿಚ್ಚಿ ಮಾತಾಡಿದ ಪ್ರಧಾನಿ ಮೋದಿ… ಏನೆಂದರು?

    ಈ ಸಮಾರಂಭದ ಆರಂಭದಲ್ಲಿ ತಾಲಿಬಾನ್​ ಸಿಬ್ಬಂದಿಯು ಬಾವುಟಗಳನ್ನು ಹಿಡಿದು ಮತ್ತು ರಾಕೆಟ್​ ಲಾಂಚರ್​ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಹೊತ್ತು ಪೆರೇಡ್​ ಮಾಡಿದರು. ಈ ಸಂದರ್ಭದಲ್ಲಿ ‘ಅಮೆರಿಕಾ ಪರಾಭವಗೊಂಡಿದೆ… ಅಸಾಧ್ಯ ಅಸಾಧ್ಯ ಆದರೆ ಸಾಧ್ಯವಾಗಿದೆ…’ ಎಂಬ ಸಾಹಿತ್ಯವುಳ್ಳ ಹಾಡೊಂದನ್ನೂ ಹಾಡಲಾಯಿತು ಎನ್ನಲಾಗಿದೆ. (ಏಜೆನ್ಸೀಸ್)

    ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕುಕ್ಕರ್​ ಹಂಚಿಕೆ

    https://www.vijayavani.net/akkineni-family-offers-alimony-what-samanta-said/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts