More

    ಅಮೂಲ್ಯ ಲಿಯೋನಾ, ಆರುದ್ರಾ ದೇಶದ್ರೋಹದ ಹೇಳಿಕೆ ವಿಚಾರಣೆಗೆ ಎಸ್​ಐಟಿ ರಚನೆ: ಚಿಕ್ಕಪೇಟೆ ಎಸಿಪಿ ನೇತೃತ್ವ

    ಬೆಂಗಳೂರು: ಸಿಎಎ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವತಿಯರಿಬ್ಬರು ತೋರಿದ ದೇಶದ್ರೋಹಿ ನಡವಳಿಕೆ ವ್ಯಾಪಕ ಟೀಕೆ ಮತ್ತು ಚರ್ಚೆಗೆ ಒಳಗಾಗಿದೆ. ಈ ನಡುವೆ, ಯುವತಿಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದೆ.

    ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಮತ್ತು ಬಹಿರಂಗವಾಗಿ ಅಮೂಲ್ಯ ನೀಡಿದ ಹೇಳಿಕೆ ಆಧರಿಸಿ ಅವರ ಬಳಿ ಆ ಕೆಲಸ ಮಾಡಿಸಿದವರ ಪತ್ತೆ ಮತ್ತು ಒಟ್ಟಾರೆ ಪ್ರಕರಣದ ಆಮೂಲಾಗ್ರ ವಿಚಾರಣೆಗಾಗಿ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ (ಎಸ್​ಐಟಿ)ವನ್ನು ರಚಿಸಿದೆ. ಡಿಸಿಪಿ ರಮೇಶ್ ಬಾನೋಟ್​ ಈ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಚಿಕ್ಕಪೇಟೆ ಎಸಿಪಿಗೆ ತನಿಖೆಯ ನೇತೃತ್ವ ವಹಿಸಿದ್ದಾರೆ. ಈ ತಂಡದಲ್ಲಿ ಎಸಿಪಿಗೆ ನಾಲ್ವರು ಇನ್​ಸ್ಪೆಕ್ಟರ್​ಗಳು ನೆರವಾಗಲಿದ್ದಾರೆ.

    ತನಿಖೆಯಲ್ಲಿ ಎಲ್ಲ ಆಯಾಮಗಳಿಗೂ ಒತ್ತು ನೀಡುವಂತೆ ಸೂಚಿಸಲಾಗಿದೆ. ಪ್ರಮುಖವಾಗಿ ಅಮೂಲ್ಯ, ಆರುದ್ರಾಳಂತಹ ಯುವತಿಯರು ಯಾಕೆ ಎಡಪಂಥೀಯ ವಿಚಾರಧಾರೆಯ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ, ದೇಶದ್ರೋಹದ ಚಿಂತನೆ ಮತ್ತು ಹೇಳಿಕೆಗಳನ್ನು ಕೊಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯುವ ಪ್ರಯತ್ನ ಈ ತನಿಖೆ ಮೂಲಕ ಆಗಲಿದೆ. ಪಾಕ್ ಪರ ಘೋಷಣೆ ಕೂಗಿದ, ಪ್ಲಕಾರ್ಡ್ ಹಿಡಿದ ಯುವತಿಯರ ಹಿಂದೆ, ಜತೆಗೆ ಯಾರೆಲ್ಲ ಇದ್ದಾರೆ, ಯಾವೆಲ್ಲ ಸಂಘಟನೆಗಳು ಇವೆ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.

    ಈ ಯುವತಿಯರನ್ನು ಪ್ರಚೋದಿಸುವವರು ಯಾರು? ಅವರಿಗೆ ಇದಕ್ಕೆ ಕುಮ್ಮಕ್ಕು ಎಲ್ಲಿಂದ? ಸಂಘಟನೆಗಳಾಗಿದ್ದರೆ, ವ್ಯಕ್ತಿಗಳಾಗಿದ್ದರೆ ಅವರಿಗೆ ಈ ಎಲ್ಲ ಪ್ರತಿಭಟನೆಗಳನ್ನು ಆಯೋಜಿಸುವುದಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂಬಿತ್ಯಾದಿ ಅಂಶಗಳೂ ತನಿಖೆಯಲ್ಲಿ ಒಳಗೊಂಡಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ನಿನ್ನೆ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ,.. ಇಂದು ಫ್ರೀ ಕಾಶ್ಮೀರ ಪ್ಲಕಾರ್ಡ್​ ಹಿಡಿದ ಆರುದ್ರಾ… ಯಾರಿವರೆಲ್ಲ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts