More

    ಜುಲೈ-ಅಕ್ಟೋಬರ್‌ನಲ್ಲಿ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ

    ನವದೆಹಲಿ: ಕರೊನಾ ಕಾಲದಲ್ಲಿ ಮೊದಲ ಪ್ರೊ ಕಬಡ್ಡಿ ಲೀಗ್ ಆಯೋಜಿಸಲು ಸಿದ್ಧತೆಗಳು ಶುರುವಾಗಿವೆ. ಜುಲೈ-ಅಕ್ಟೋಬರ್ ಅವಧಿಯಲ್ಲಿ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಆಯೋಜಿಸಲು ರೂಪುರೇಷೆ ಸಿದ್ಧಪಡಿಸಲಾಗಿದ್ದು, ಏಪ್ರಿಲ್‌ನಲ್ಲಿ ಟೂರ್ನಿಯ ಟಿವಿ ಪ್ರಸಾರ ಹಕ್ಕಿನ ಹರಾಜು ನಡೆಯಲಿದೆ. ಟೂರ್ನಿಯ ಸಂಘಟಕ ಸಂಸ್ಥೆ ಮಾರ್ಷಲ್ ಸ್ಪೋರ್ಟ್ಸ್‌ನ ಸಿಇಒ ಮತ್ತು ಪ್ರೊ ಕಬಡ್ಡಿ ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ಅವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕರೊನಾ ಹಾವಳಿಯಿಂದಾಗಿ 2020ರಲ್ಲಿ ಪ್ರೊ ಕಬಡ್ಡಿ ಲೀಗ್ ನಡೆದಿರಲಿಲ್ಲ.

    ಕರೊನಾ ಮಾರ್ಗಸೂಚಿಗಳ ಅನ್ವಯವೇ ಈ ಬಾರಿ ಟೂರ್ನಿ ನಡೆಯಲಿದ್ದು, ಪಂದ್ಯ ಆಯೋಜನೆಯಾಗುವ ನಗರದಲ್ಲಿ ಸ್ಥಳೀಯ ಸರ್ಕಾರದ ಮಾರ್ಗಸೂಚಿಯ ಅನ್ವಯ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುವುದೋ, ಇಲ್ಲವೋ ಎಂಬುದು ನಿರ್ಧಾರವಾಗಲಿದೆ. ಐಪಿಎಲ್ ಬಳಿಕ ಪ್ರೊ ಕಬಡ್ಡಿ ಲೀಗ್ ಭಾರತದಲ್ಲಿ ಅತಿಹೆಚ್ಚು ವೀಕ್ಷಕರನ್ನು ಹೊಂದಿರುವ ಕ್ರೀಡಾ ಲೀಗ್ ಆಗಿದೆ.

    ಇದನ್ನೂ ಓದಿ: ಪೃಥ್ವಿ ಷಾ ಭರ್ಜರಿ ಶತಕ, ಸೆಮೀಸ್‌ನಲ್ಲಿ ಮುಂಬೈ ವಿರುದ್ಧ ಕರ್ನಾಟಕಕ್ಕೆ ನಿರಾಸೆ

    ಸ್ಟಾರ್ ಸ್ಪೋರ್ಟ್ಸ್ ಕಂಪನಿ 2014ರಿಂದಲೂ ಪ್ರೊ ಕಬಡ್ಡಿ ಲೀಗ್ ಪಂದ್ಯಗಳನ್ನು ನೇರಪ್ರಸಾರ ಮಾಡುತ್ತ ಬಂದಿದ್ದು, ಮಾರ್ಷಲ್ ಸ್ಪೋರ್ಟ್ಸ್‌ನಲ್ಲಿ ಸದ್ಯ ಶೇ. 74 ಪಾಲುದಾರಿಕೆಯನ್ನೂ ಹೊಂದಿದೆ. ಆದರೆ ಪಾರದರ್ಶಕತೆಯ ದೃಷ್ಟಿಯಿಂದ ಮುಂದಿನ 5 ವರ್ಷಗಳ ಅವಧಿಗೆ ಟಿವಿ ಪ್ರಸಾರ ಹಕ್ಕನ್ನು ಇ-ಹರಾಜು ನಡೆಸಲಾಗುತ್ತಿದ್ದು, ಸ್ಟಾರ್ ಸ್ಪೋರ್ಟ್ಸ್ ಕೂಡ ಇದರಲ್ಲಿ ಪಾಲ್ಗೊಳ್ಳಲಿದೆ.

    ಒಟ್ಟು 12 ತಂಡಗಳಿರುವ ಪ್ರೊ ಕಬಡ್ಡಿ ಲೀಗ್ ಈ ವರ್ಷವೂ ಹಿಂದಿನ ಸ್ವರೂಪದಲ್ಲಿಯೇ ಸಾಗಲಿದೆ. ಹೀಗಾಗಿ ಒಟ್ಟಾರೆ 93 ಪಂದ್ಯಗಳು ನಡೆಯಲಿವೆ.

    VIDEO| ಈ ಬೌಲಿಂಗ್ ಶೈಲಿ ನೋಡಿ; ಚೆಂಡಿನ ಬಗ್ಗೆ ಗೊತ್ತಿಲ್ಲ, ತಲೆಯಂತೂ ತಿರುಗುತ್ತದೆ!

    VIDEO | ಶ್ರೀಲಂಕಾ ಬ್ಯಾಟ್ಸ್‌ಮನ್ ವಿರುದ್ಧ ನೀಡಿದ ಔಟ್ ತೀರ್ಪಿನ ಬಗ್ಗೆ ಬಿಸಿಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts