More

    ಪಾದಯಾತ್ರಿಗಳಿಂದ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ

    ಕನಕಗಿರಿ: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆಗೆ ಆರಂಭವಾಗಿದ್ದು, ಈ ಕ್ಷಣಕ್ಕಾಗಿ ಹಿಂದುಗಳು ಕಾತುರದಿಂದ ಕಾಯುತ್ತಿದ್ದಾರೆ. ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರು, ಅಯೋಧ್ಯೆಯ ಮಂತ್ರಾಕ್ಷತೆ ವಿತರಿಸಿ ಗಮನ ಸೆಳೆಯುತ್ತಿದ್ದಾರೆ.

    ಪಟ್ಟಣದ ಶ್ರೀ ಕನಕಾಚಲ, ಪ್ರತಾಪರಾಯ, ಗುರು ರಾಘವೇಂದ್ರ ಭಜನಾ ಮಂಡಳಿ ನೇತೃತ್ವದಲ್ಲಿ ಪ್ರತಿ ವರ್ಷ ಸಂಕ್ರಾಂತಿ ನಿಮಿತ್ತ ಮಂತ್ರಾಲಯಕ್ಕೆ ಯುವಕರು, ಮಹಿಳೆಯರು 23 ವರ್ಷಗಳಿಂದ 5 ದಿನ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಪ್ರಸಕ್ತ ವರ್ಷ 87 ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. 5 ಶತಮಾನಗಳ ಕರಸೇವಕರ, ಹಿಂದುಪರ ಸಂಘಟನೆಗಳ ಹೋರಾಟದ ಫಲವಾಗಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

    ದಾರಿಯಲ್ಲಿ ಬರುವ ಗ್ರಾಮಗಳಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಕರಪತ್ರ ನೀಡಿ ಜ.22ರಂದು ಪೂಜಿಸುವ ಬಗೆಯನ್ನು ಹೇಳುತ್ತಾ ತೆರಳುತ್ತಿದ್ದಾರೆ. ಬುಧವಾರದಿಂದ ಆರಂಭಗೊಂಡಿರುವ ಪಾದಯಾತ್ರೆ, ಈಗಾಗಲೇ 4ನೇ ದಿನಕ್ಕೆ ಕಾಲಿಟ್ಟಿದ್ದು, ಆಂಧ್ರದ ಗಡಿಭಾಗದಲ್ಲಿದೆ. ಬಳ್ಳಾರಿ ಜಿಲ್ಲೆಗೊಳಪಡುವ ಗ್ರಾಮಗಳಾದ ಚಿಕ್ಕಬಳ್ಳಾರಿ, ಹಚ್ಚೊಳ್ಳಿ, ಮುರಣಿಯಲ್ಲಿ ಮಂತ್ರಾಕ್ಷತೆ ಹಾಗೂ ಕರಪತ್ರ ಹಂಚಿ ತೆರಳಿದ್ದು, ಇವರ ಕಾರ್ಯಕ್ಕೆ ಹಿಂದುಪರ ಸಂಘಟನೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನಾನು 21 ವರ್ಷಗಳಿಂದ ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದು, ಈ ವರ್ಷ ತುಂಬಾ ಖುಷಿಯಾಗುತ್ತಿದೆ. ರಾಮ ಜನ್ಮಭೂಮಿಯಲ್ಲಿ ರಾಮನ ಪ್ರತಿಷ್ಠಾಪನೆಗಾಗಿ ಬಂದಿರುವ ಮಂತ್ರಾಕ್ಷತೆಯನ್ನು ವಿತರಿಸುತ್ತಾ ಸಾಗುತ್ತಿದ್ದೇವೆ.
    ರಾಮಣ್ಣ ಕುರುಬರ
    ಪಾದಯಾತ್ರಿ, ಕನಕಗಿರಿ

    ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿರುವವರು ಅಯೋಧ್ಯೆಯ ಮಂತ್ರಾಕ್ಷತೆ ವಿತರಿಸುತ್ತಾ ರಾಮನ ಪ್ರತಿಷ್ಠಾಪನೆಯನ್ನು ಹಬ್ಬವನ್ನಾಗಿ ಆಚರಿಸಲು ಶ್ರಮಿಸುತ್ತಿರುವುದು ಸಂತಸದ ವಿಚಾರವಾಗಿದೆ.
    ಅಯ್ಯನಗೌಡ
    ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ, ಕನಕಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts