More

    ಬಹುಮಾನ ಮೊತ್ತ ಹೆಚ್ಚಳ

    ಶಿರಸಿ: ಶಿರಸಿಯ ಸಾಂಸ್ಕೃತಿಕ ಕಲೆಯಾದ ಬೇಡರವೇಷದ ಮೆರುಗು ಹೆಚ್ಚಿಸಲು ಶಿರಸಿ ನಗರ ಹೋಳಿಹಬ್ಬ ಸಮಿತಿಯು ಬಹುಮಾನ ಮೊತ್ತವನ್ನು ಹೆಚ್ಚಿಸಿದ್ದು, ಪ್ರಥಮ 50 ಸಾವಿರ ರೂಪಾಯಿ, ದ್ವಿತೀಯ 30 ಸಾವಿರ ರೂಪಾಯಿ ಹಾಗೂ ತೃತೀಯ 20 ಸಾವಿರ ರೂಪಾಯಿ ನೀಡಲಾಗುವುದು ಎಂದು ಸಮಿತಿ ಅಧ್ಯಕ್ಷ ಉಪೇಂದ್ರ ಪೈ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ವರ್ಷಗಳಲ್ಲಿ ಬಹುಮಾನ ಮೊತ್ತ ಕಡಿಮೆಯಿತ್ತು. ಈ ಬಾರಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬಹುಮಾನ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ ಎಂದರು.

    ದೇವಿಕೆರೆ, ಹಳೆ ಬಸ್ ನಿಲ್ದಾಣ, ಮಾರಿಗುಡಿ ಹಾಗೂ ಶಿವಾಜಿ ಚೌಕ ಇವುಗಳಲ್ಲಿ ಯಾವುದಾದರೂ 2 ವೃತ್ತಗಳಲ್ಲಿ ರಾತ್ರಿ 1 ಗಂಟೆಯೊಳಗೆ ಬೇಡರವೇಷ ಪ್ರದರ್ಶನವಾದರೆ ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು. ಭಾಗವಹಿಸುವ ಬೇಡರ ವೇಷ ಸಮಿತಿಯವರು ಮೊ.ಸಂ. 9448573169, 9986918919, 9945894375ಗೆ ಸಂರ್ಪಸಿ ಮಾಹಿತಿ ನೀಡಬೇಕು. ಹೆಸರು ನೋಂದಾಯಿಸಲು ಮಾ. 23ರ ಸಂಜೆ 5 ಗಂಟೆ ಅಂತಿಮ ಅವಕಾಶವಾಗಿದೆ ಎಂದರು.

    ಏ. 3ರಂದು ಮಧ್ಯಾಹ್ನ 4 ಗಂಟೆಗೆ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಹಾಗೂ ಎಲ್ಲ ಬೇಡರ ವೇಷಧಾರಿಗಳಿಗೆ ನೆನಪಿನ ಕಾಣಿಕೆ ನೀಡಲಾಗುವುದು. ಬೇಡರ ವೇಷದ ಸಂದರ್ಭದಲ್ಲಿ ಡಿಜೆ ಬಳಕೆ, ಪುರುಷರು ಮಹಿಳಾ ವೇಷಧಾರಿಗಳಾಗಿ ಸಾರ್ವಜನಿಕರ ಮಧ್ಯೆ ತಿರುಗಾಡುವುದನ್ನು ನಿರ್ಬಂಧಿಸಲಾಗಿದೆ. ಲೋಹದ ಕತ್ತಿಯ ಬದಲಾಗಿ ಕಟ್ಟಿಗೆ ತಲವಾರಿಗೆ ಅನುಮತಿ ನೀಡಲಾಗಿದೆ. ಶಿಸ್ತು ಬದ್ಧ ಹಾಗೂ ಸಾಂಸೃ್ಕಕ ವಾತಾವರಣದಲ್ಲಿ ಬೇಡರವೇಷ ಹಾಗೂ ಹೋಳಿ ಆಚರಿಸಲು ಒತ್ತು ನೀಡಲಾಗುವುದು. ಬಂಡಿಗಳಲ್ಲಿ ಸಾಧ್ಯವಾದಷ್ಟು ಕಡಿಮೆ ಡೆಸಿಬಲ್​ಗಳಲ್ಲಿ ಧ್ವನಿವರ್ಧಕ ಬಳಕೆಗೆ ವಿನಂತಿಸಲಾಗಿದೆ. ಹೋಳಿ ಹಬ್ಬದ ದಿನ ಬೆಳಗ್ಗೆ 7 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬಣದಣದ ಆಟಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯವಾಗಿ ಕೆಲವು ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸಾರ್ವಜನಿಕರು ಬಣ್ಣ ಆಡಬೇಕು ಎಂದು ಕೋರಿದರು.

    ಸಮಿತಿ ಪ್ರಮುಖರಾದ ಎಂ.ಎಂ.ಭಟ್ಟ, ಆನಂದ ಸಾಲೇರ, ರಘು ಕಾನಡೆ, ಪ್ರದೀಪ ಯಲ್ಲನಕರ, ಸತೀಶ ಸಾಲೇರ, ಬಾಬಣ್ಣ ತುಮಕೂರು, ನಂದಕುಮಾರ ಜೋಗಳೇಕರ, ಪ್ರಭಾಕರ ಜೋಗಳೇಕರ ಇದ್ದರು.

    ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕಟ್ಟುನಿಟ್ಟಿನ ಸೂಚನೆ: ಶಿರಸಿ ಸಾಂಪ್ರದಾಯಿಕ ಕಲೆಯಾದ ಬೇಡರ ವೇಷದ ವೇಳೆ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕಟ್ಟುನಿಟ್ಟಿನ ಸೂಚನೆ ಹೇರಿದ್ದು, ವೇಷದ ತಂಡದಲ್ಲಿ ಗರಿಷ್ಠ 25 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    ನಗರದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ಕರೆದ ಬೇಡರ ವೇಷದ ಸಮಿತಿಗಳ ಮುಖ್ಯಸ್ಥರ ಸಭೆಯಲ್ಲಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಮಾತನಾಡಿ, ರಾಜ್ಯಾದ್ಯಂತ ಕೋವಿಡ್ 19 ಹಾವಳಿ ಹೆಚ್ಚುತ್ತಿದೆ. ಈ ಕಾರಣ ಸರ್ಕಾರ ಕೆಲ ನಿಬಂಧನೆ ವಿಧಿಸಿದೆ. ಆ ಪ್ರಕಾರ ಬೇಡರ ವೇಷದ ಅದ್ದೂರಿ ಆಚರಣೆಗೆ ಅವಕಾಶವಿಲ್ಲ. ರಾತ್ರಿ 8ರಿಂದ 12ರವರೆಗೆ ಮಾತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

    ಡಿಎಸ್ಪಿ ರವಿ ನಾಯ್ಕ ಮಾತನಾಡಿ, ಸ್ತಬ್ಧಚಿತ್ರಕ್ಕೆ ಅವಕಾಶ ನೀಡಿದರೆ ದಟ್ಟಣೆ ಹೆಚ್ಚುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಸ್ತಬ್ಧಚಿತ್ರ ಹೊತ್ತ ಬಂಡಿ ನಿಲ್ಲಲು ಅವಕಾಶ ನೀಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts